ಹೊಸಪೇಟೆ (ವಿಜಯನಗರ): ಕತ್ತೆ ಹಾಲು ವ್ಯವಹಾರ ನಡೆಸುತ್ತಿದ್ದ ಜೆನ್ನಿ ಮಿಲ್ಕ್ ಕಂಪನಿ ವ್ಯಾಪಾರ ಪರವಾನಗಿ ಪಡೆಯದ ಕಾರಣಕ್ಕೆ ಬಂದ್ ಮಾಡಿಸಿದ ನಗರಸಭೆಯ ಮುಂದೆ ಇಂತಹದೇ ಐದು ಸಾವಿರಕ್ಕೂ ಅಧಿಕ ವಾಣಿಜ್ಯ ಮಳಿಗೆಗಳು ಇರುವುದು ಗೊತ್ತಾಗಿದ್ದು, ಅವುಗಳಿಂದ ಶುಲ್ಕ ಪಡೆದುಕೊಂಡು ಪರವಾನಗಿ ನೀಡುತ್ತದೆಯೇ ಎಂಬ ಕುತೂಹಲ ನೆಲೆಸಿದೆ.

ನಗರದಲ್ಲಿ 10 ಸಾವಿರದಷ್ಟು ಚಿಕ್ಕ ಮತ್ತು ದೊಡ್ಡ ಖಾಸಗಿ ವಾಣಿಜ್ಯ ಮಳಿಗೆಗಳು ಇದ್ದು, ಆರು ಸಾವಿರಕ್ಕಿಂತ ಅಧಿಕ ಸಕ್ರಿಯವಾಗಿವೆ, 2 ಸಾವಿರದಷ್ಟು ಮಳಿಗೆಗಳು ಮುಚ್ಚಿವೆ, ಮತ್ತೆ ಎರಡು ಸಾವಿರದಷ್ಟು ಮಳಿಗೆಗಳು ಹೊಸದಾಗಿ ನಿರ್ಮಾಣವಾಗಿವೆ ಅಥವಾ ಆರಂಭಗೊಳ್ಳುವ ಹಂತದಲ್ಲಿವೆ. ಆದರೆ ಪರವಾನಗಿ ಪಡೆದು ನಡೆಯುತ್ತಿರುವ ಮಳಿಗೆಗಳ ಸಂಖ್ಯೆ 500ಕ್ಕಿಂತ ಕಡಿಮೆ ಎಂಬ ಮಾಹಿತಿ ‘ಪ್ರಜಾವಾಣಿ’ಗೆ ಲಭಿಸಿದೆ.

ಈ ಬಗ್ಗೆ ಈಚೆಗೆ ಸಂಸ್ಥೆಯೊಂದರಿಂದ ವಿವರವಾದ ಸಮೀಕ್ಷೆ ನಡೆಸಲಾಗಿದೆ ಎಂದು ಹೇಳಲಾಗಿದ್ದು, ಅದು ನೀಡಿದ ವರದಿಯಲ್ಲಿ ಈ ಎಲ್ಲ ಮಾಹಿತಿ ಇದೆ ಎಂದು ತಿಳಿದುಬಂದಿದೆ.

ವರದಿ ಕೈಸೇರಿದೆ: ‘ಸಮೀಕ್ಷೆ ವರದಿ ಈಚೆಗೆ ನಮ್ಮ ಕೈಸೇರಿದೆ, ವರದಿಯ ಪೂರ್ಣ ಅಧ್ಯಯನ ಇನ್ನೂ ಮಾಡಲಾಗಿಲ್ಲ, ಆರು ಸಾವಿರಕ್ಕಿಂತ ಅಧಿಕ ಖಾಸಗಿ ವಾಣಿಜ್ಯ ಮಳಿಗೆಗಳು ಇರುವುದು ನಿಜ, ಈ ಪೈಕಿ ಶೇ 20ರಷ್ಟು ಮಳಿಗೆಗಳು ಮಾತ್ರ ಪರವಾನಗಿ ಪಡೆದಿವೆ ಎಂಬುದು ಸಮೀಕ್ಷೆಯಿಂದ ಗೊತ್ತಾಗಿದೆ. ಶೀಘ್ರ ಎಲ್ಲಾ ಮಳಿಗೆಗಳಿಗೆ ತೆರಳಿ ಪರವಾನಗಿ ಮಾಡಿಸಿಕೊಳ್ಳುವ ನಿಟ್ಟಿನಲ್ಲಿ ಕ್ರಮ ಜರುಗಿಸಲಾಗುವುದು’ ಎಂದು ಆಯುಕ್ತ ಚಂದ್ರಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ಉದ್ದಿಮೆ ಮೇಳ: ‘ಹೊಸಪೇಟೆ ನಗರಸಭೆ ಮಾತ್ರವಲ್ಲ, ಜಿಲ್ಲೆಯಲ್ಲಿರುವ ಎಲ್ಲಾ 8 ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸಹ ಸಾವಿರಾರು ವಾಣಿಜ್ಯ ಮಳಿಗೆಗಳು ಪರವಾನಗಿ ಪಡೆದಿಲ್ಲ. ‘ಉದ್ದಿಮೆ ಮೇಳ’ ನಡೆಸುವ ಮೂಲಕ ಸ್ಥಳದಲ್ಲೇ ವ್ಯಾಪಾರ ಪರವಾನಗಿ ನೀಡಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್.ದಿವಾಕರ್ ಅವರು ಈಚೆಗೆ ಸೂಚನೆ ನೀಡಿದ್ದು, ಅದರಂತೆ ಜನವರಿ ಅಂತ್ಯದೊಳಗೆ ಇಂತಹ ಮೇಳ ನಡೆಸಿ ಲೈಸೆನ್ಸ್ ನೀಡಲು ಸಿದ್ಧತೆ ನಡೆದಿದೆ. ಹೀಗಾಗಿ ಹೊಸಪೇಟೆ ನಗರಸಭೆಗೆ ಸಹ ಉತ್ತಮ ಆದಾಯ ಬರುವ ನಿರೀಕ್ಷೆ ಇದೆ. ಕೆಲವು ಮಳಿಗೆಗಳು 15, 20 ವರ್ಷಗಳಿಂದ ಪರವಾನಗಿ ಇಲ್ಲದೆ ನಡೆಯುತ್ತಿವೆ, ಇವುಗಳಿಂದ ಹಳೆಯ ಬಾಕಿ ವಸೂಲಿ ಮಾಡಿಕೊಂಡಿದ್ದು ಸೇರಿಕೊಂಡರೆ ಈ ವರ್ಷ ₹8ರಿಂದ 10 ಕೋಟಿ ಸಂಗ್ರಹವಾಗುವ ಸಾಧ್ಯತೆ ಇದೆ, ಮುಂದಿನ ವರ್ಷದಿಂದ ₹2 ಕೋಟಿಗಿಂತ ಅಧಿಕ ವರಮಾನ ನಿಶ್ಚಿತ’ ಎಂದು ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮನೋಹರ್ ತಿಳಿಸಿದರು.

ನಗರ ಸ್ಥಳೀಯ ಸಂಸ್ಥೆಗಳಲ್ಲಿ ಆದಾಯ ಮೂಲ ಇದ್ದರೂ ಅದನ್ನು ಬಳಸಿಕೊಳ್ಳದೆ ಇರುವುದು ಸರಿಯಲ್ಲ ಉದ್ದಿಮೆ ಮೇಳ ಮೂಲಕ ಅದಕ್ಕೆ ಶೀಘ್ರ ಚಾಲನೆ ಸಿಗಲಿದೆ.
–ಮನೋಹರ್ ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾಧಿಕಾರಿ

ಹೊಸಪೇಟೆ ನಗರಸಭೆಯ ಆದಾಯ ಮೂಲಗಳನ್ನು ಬಳಸಿಕೊಳ್ಳುವುದಕ್ಕೆ ಯೋಜನೆ ರೂಪಿಸಲಾಗುತ್ತಿದೆ. ಖಾಸಗಿ ಸಮೀಕ್ಷೆಯ ವರದಿ ಪೂರ್ಣ ಅಧ್ಯಯನ ಮಾಡಿ ಅದನ್ನು ಅನುಷ್ಠಾನಕ್ಕೆ ತರಲಾಗುವುದು.
–ಚಂದ್ರಪ್ಪ ನಗರಸಭೆ ಆಯುಕ್ತ

ಖಾಸಗಿ ಸಮೀಕ್ಷೆ ವರದಿ ಕುತೂಹಲ

ನಗರಸಭೆ ವತಿಯಿಂದ ಈಚೆಗೆ ಖಾಸಗಿ ಸಂಸ್ಥೆಯೊಂದರಿಂದ ₹2 ಲಕ್ಷ ವೆಚ್ಚದಲ್ಲಿ ಖಾಸಗಿ ವಾಣಿಜ್ಯ ಮಳಿಗೆಗಳ ಸಮಗ್ರ ಸಮೀಕ್ಷೆ ನಡೆಸಲಾಗಿದೆ. ಇದರಲ್ಲಿ ಮಳಿಗೆಗಳ ವಿಂಗಡಣೆ ದೂರವಾಣಿ ಸಂಖ್ಯೆ ಸಹಿತ ಹಲವು ಆಯಾಮಗಳಲ್ಲಿ ವಿವರ ಇದೆ ಎಂದು ಹೇಳಲಾಗಿದೆ.

ಈ ವರದಿ ಸಮಗ್ರ ಚಿತ್ರಣ ಕಟ್ಟಿಕೊಡುವುದಲ್ಲದೆ ನಗರಸಭೆ ಮನಸ್ಸು ಮಾಡಿದರೆ ಕೆಲವೇ ದಿನಗಳಲ್ಲಿ ಎಲ್ಲಾ ಮಳಿಗೆಗಳನ್ನು ಸಂಪರ್ಕಿಸಿ ಪರವಾನಗಿ ಮಾಡಿಸಿಕೊಳ್ಳುವುದಕ್ಕೆ ಅಗತ್ಯವಾದ ಮಾಹಿತಿ ಒಳಗೊಂಡಿದೆ ಎಂದು ಹೇಳಲಾಗಿದೆ.

ನಗರದಲ್ಲಿ 568 ಸಣ್ಣ ದೊಡ್ಡ ಹೋಟೆಲ್ಗಳು 1673 ವ್ಯಾಪಾರ ಮಳಿಗೆಗಳು 1493 ಚಿಕ್ಕ ಅಂಗಡಿಗಳು 385 ಜವಳಿ ಅಂಗಡಿಗಳು 140 ಆಭರಣ ಅಂಗಡಿಗಳು 27 ಲಾಡ್ಜ್ಗಳು 371 ಗ್ಯಾರೇಜ್ಗಳು 279 ಟೈಲರ್ ಶಾಪ್ಗಳು ಸಹಿತ 6166 ವಾಣಿಜ್ಯ ಮಳಿಗೆಗಳು ಇರುವುದು ಹಾಗೂ 2890 ಮಳಿಗೆಗಳು ಮುಚ್ಚಿರುವುದು ಗೊತ್ತಾಗಿದೆ. ಬೀದಿಬದಿ ವ್ಯಾಪಾರಿಗಳ ಸಂಖ್ಯೆ 4280ರಷ್ಟಿದೆ ಎಂದು ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.