ಭಾನುವಾರ, 22 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ತುಂಗಭದ್ರಾ ಜಲಾಶಯಕ್ಕೆ ಬಾಗಿನ: ಕಾರ್ಯಕ್ರಮದಿಂದ ದೂರವೇ ಉಳಿದ ಶಾಸಕ ಗವಿಯಪ್ಪ

Published : 22 ಸೆಪ್ಟೆಂಬರ್ 2024, 9:24 IST
Last Updated : 22 ಸೆಪ್ಟೆಂಬರ್ 2024, 9:24 IST
ಫಾಲೋ ಮಾಡಿ
Comments

ಹೊಸಪೇಟೆ (ವಿಜಯನಗರ): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಭಾನುವಾರ ಮಧ್ಯಾಹ್ನ ತುಂಗಭದ್ರಾ ಜಲಾಶಯಕ್ಕೆ ಬಾಗಿನ ಅರ್ಪಿಸಿದಾಗ ಸ್ಥಳೀಯ ಶಾಸಕ ಎಚ್.ಆರ್.ಗವಿಯಪ್ಪ ಅವರು ಗೈರಾಗುವ ಮೂಲಕ ಸರ್ಕಾರದ ವಿರುದ್ಧ ತಮ್ಮ ಅಸಮಾಧಾನವನ್ನು ಬಹಿರಂಗವಾಗಿ ವ್ಯಕ್ತಪಡಿಸಿದರು.

ಬೆಳಿಗ್ಗೆ ತಮ್ಮ ಜತೆ ತಮ್ಮ ಕೆಲವು ಅನುಯಾಯಿಗಳನ್ನು ಅಣೆಕಟ್ಟೆ ಸಮೀಪಕ್ಕೆ ಬಿಡದ ಕಾರಣಕ್ಕೆ ಶಾಸಕರು ಹೊರಗಡೆ ಹೋಗಿ ತಮ್ಮ ಕಚೇರಿಯಲ್ಲಿ ಕುಳಿತಿದ್ದರು.

ಸ್ವತಃ ಡಿವೈಎಸ್ಪಿ, ತಹಶೀಲ್ದಾರ್ ಅವರು ಶಾಸಕರ ಕಚೇರಿಗೆ ತೆರಳಿ ಮನವೊಲಿಸಲು ಪ್ರಯತ್ನಿಸಿದರೂ ಶಾಸಕರು ಸಮಾಧಾನಗೊಳ್ಳಲಿಲ್ಲ.

ಸಿಎಂ ಅವರು 11.30ರ ವೇಳೆಗೆ ಬರಬೇಕಿದ್ದವರು 1.15ರ ಸುಮಾರಿಗೆ ಗಿಣಿಗೇರಾ ವಿಮಾನ ನಿಲ್ದಾಣಕ್ಕೆ ತಲುಪಿದ್ದರು. ಶಾಸಕರು ಕೊನೆ ಕ್ಷಣದಲ್ಲಿ ಬರಬಹುದು ಎಂಬ ನಿರೀಕ್ಷೆ ಇತ್ತು. 1.55ರ ಸುಮಾರಿಗೆ ಮುಖ್ಯಮಂತ್ರಿ ಅವರು ಡಿಸಿಎಂ, ಇತರ ಸಚಿವರ ಜತೆಗೆ ಅಣೆಕಟ್ಟೆ ಸಮೀಪಕ್ಕೆ ಬಂದರೂ ಶಾಸಕರ ಸುಳಿವು ಇರಲಿಲ್ಲ.

ಕೇವಲ 10 ನಿಮಿಷದಲ್ಲಿ ಬಾಗಿನ ಅರ್ಪಣೆ ಕಾರ್ಯಕ್ರಮ ಕೊನೆಗೊಂಡಿತು, ಶಾಸಕರು ಕೊನೆಗೂ ಬರಲೇ ಇಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT