ಹೊಸಪೇಟೆ (ವಿಜಯನಗರ): ಸಿಪಿಎಂ ಮುಖಂಡ ಹಾಗೂ ಎಸ್‌ಎಫ್‌ಐ ಸಂಘಟನೆಯನ್ನು ಬಲಿಷ್ಠವಾಗಿ ಕಟ್ಟಿ ಬೆಳೆಸಿದ್ದ ಸೀತಾರಾಂ ಯೆಚೂರಿ ಅವರು ಬಡವರಿಗಾಗಿಯೇ ಕೊನೆಯ ತನಕವೂ ತಮ್ಮ ಜೀವನ ಸವೆಸಿದರು ಎಂದು ಹೇಳುವ ಮೂಲಕ ದೇಶಕ್ಕೆ ಅವರ ಕೊಡುಗೆಯನ್ನು ಸ್ಮರಿಸುವ ಕಾರ್ಯ ಗುರುವಾರ ಇಲ್ಲಿ ನಡೆಯಿತು.

ಎಸ್‌ಎಫ್‌ಐ ರಾಜ್ಯ ಘಟಕದ ಅಧ್ಯಕ್ಷ ಅಮರೇಶ್ ಕಡಗದ ಮಾತನಾಡಿ, ‘ತಮ್ಮ ಜೀವನದ ಕೊನೆಯವರೆಗೂ ದುಡಿಯುವ ಜನರ ಪರವಾಗಿ, ಕೋಮುವಾದಿ, ಫ್ಯಾಸಿಸ್ಟ್‌ನ ಹಿಮ್ಮೆಟ್ಟಿಸಲು ಶ್ರಮಿಸಿದ ಸೀತಾರಾಂ ಯೆಚೂರಿ ಅವರ ಅಗಲಿಕೆ ನಮ್ಮ ಚಳವಳಿಗೆ ತುಂಬಾಲಾಗದಷ್ಟು ನಷ್ಟ ತಂದಿದೆ’ ಎಂದರು.

ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಭಾಸ್ಕರ್ ರೆಡ್ಡಿ, ಸಿಐಟಿಯು ಮುಖಂಡ ಮಂಜುನಾಥ ಮಾತನಾಡಿದರು. ಡಿವೈಎಫ್‌ಐ ಜಿಲ್ಲಾ ಅಧ್ಯಕ್ಷರು ವಿ.ಸ್ವಾಮಿ, ಪ್ರಧಾನ ಕಾರ್ಯದರ್ಶಿ ಈಡಿಗರ ಮಂಜುನಾಥ, ಮುಖಂಡ ಜಂಬಯ್ಯ ನಾಯಕ, ರೈತ ಸಂಘದ ಕೊಟಗಿ ಮಲ್ಲಿಕಾರ್ಜುನ, ತಿರುಕಪ್ಪ, ತಾಯಪ್ಪ ನಾಯಕ, ಎಸ್‌ಎಫ್‌ಐನ ಬಸವರಾಜ, ಶಿವಾ ರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.