ಹೊಸಪೇಟೆ (ವಿಜಯನಗರ): ಹಂಪಿ ವಿಶ್ವವಿದ್ಯಾಲಯದ 47 ಮಂದಿ ಗುತ್ತಿಗೆ ಕಾರ್ಮಿಕರು ಬಹುದಿನಗಳಿಂದ ಎದುರು ನೋಡುತ್ತಿರುವ ಸಿಂಡಿಕೇಟ್ ಸಭೆ ಗುರುವಾರ ನಡೆಯಲಿದ್ದು, ಅವರ ಉದ್ಯೋಗ ಭದ್ರತೆಯ ಜತೆಗೆ ನುಡಿಹಬ್ಬದ (ಘಟಿಕೋತ್ಸವ) ಖರ್ಚಿಗೆ ಲಗಾಮು ಹಾಕುವ ನಿಟ್ಟಿನಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳುವ ನಿರೀಕ್ಷೆಯನ್ನು ಇಟ್ಟುಕೊಳ್ಳಲಾಗಿದೆ.

29ನೇ ನುಡಿಹಬ್ಬಕ್ಕೆ ಆಗಿದ್ದ ಖರ್ಚು ₹24.51 ಲಕ್ಷ, ಆದರೆ 30ನೇ ನುಡಿಹಬ್ಬದ ಖರ್ಚು ದುಪ್ಪಟ್ಟಿಗಿಂತಲೂ ಅಧಿಕ ಅಂದರೆ ₹58.98 ಲಕ್ಷಕ್ಕೆ ಹೆಚ್ಚಳವಾಗಿತ್ತು. 31ನೇ ನುಡಿಹಬ್ಬಕ್ಕೆ ₹52.96 ಲಕ್ಷ ವೆಚ್ಚ ತೋರಿಸಲಾಗಿತ್ತು. 2022–23ನೇ ಸಾಲಿನ ಲೆಕ್ಕಪರಿಶೋಧನೆಯಲ್ಲಿ ಈ ಮೂರೂ ನುಡಿಹಬ್ಬಗಳ ವೆಚ್ಚವನ್ನು ತುಲನೆ ಮಾಡಿ, 30 ಮತ್ತು 31ನೇ ನುಡಿಹಬ್ಬದ ಖರ್ಚುಗಳಿಗೆ ಸೂಕ್ತ ವಿವರಣೆ ನೀಡಬೇಕು, ಎಲ್ಲಾ ಖರ್ಚುಗಳಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಮತ್ತು ಓಚರ್ಗಳನ್ನು ಲೆಕ್ಕಪರಿಶೋಧನೆಗೆ ಒದಗಿಸಬೇಕು ಎಂದು ಕರ್ನಾಟಕ ರಾಜ್ಯ ಲೆಕ್ಕಪತ್ರ ಮತ್ತು ಲೆಕ್ಕ ಪರಿಶೋಧನೆ ಇಲಾಖೆಯ ಕಲಬುರ್ಗಿ ಪ್ರಾಂತೀಯ ಕಚೇರಿಯ ಲೆಕ್ಕಪರಿಶೋಧನಾಧಿಕಾರಿಗಳು ಸೂಚಿಸಿದ್ದಾರೆ.

ವಿಶ್ವವಿದ್ಯಾಲಯಕ್ಕೆ ಕಳೆದ ಮಾರ್ಚ್ನಲ್ಲಿ ಭೇಟಿ ನೀಡಿದ್ದ ಲೆಕ್ಕಪರಿಶೋಧನಾ ಅಧಿಕಾರಿಗಳು ಈ ಸಂಬಂಧ ಲಿಖಿತ ಸೂಚನೆ ನೀಡಿದ್ದ ದಾಖಲೆ ‘ಪ್ರಜಾವಾಣಿ’ಗೆ ಲಭ್ಯವಾಗಿದೆ.

ಒಂದು ನುಡಿಹಬ್ಬದಿಂದ ಮತ್ತೊಂದು ನುಡಿಹಬ್ಬಕ್ಕೆ ಖರ್ಚು ಹೆಚ್ಚೆಂದರೆ ಶೇ 10ರಿಂದ 20ರಷ್ಟು ಹೆಚ್ಚಳವಾಗಬಹುದು, ಬೆಲೆ ಏರಿಕೆಯ ಇಂದಿನ ದಿನಗಳಲ್ಲಿ ಅದು ಸಾಮಾನ್ಯ ಕೂಡ ಹೌದು. ಆದರೆ ದುಪ್ಪಟ್ಟಿಗಿಂತಲೂ ಅಧಿಕ ಅಂದರೆ ಶೇ 110ರಷ್ಟು ಹೆಚ್ಚಳವಾಗಲು ಹೇಗೆ ಸಾಧ್ಯ ಎಂಬುದು ಲೆಕ್ಕಪರಿಶೋಧಕರು ಪ್ರಶ್ನಿಸಿದ್ದು, ವಿಶ್ವವಿದ್ಯಾಲಯದಿಂದ ಇದುವರೆಗೂ ಸೂಕ್ತ ವಿವರಣೆ ನೀಡಿಲ್ಲ, ನೀಡಿದ್ದರೂ ಅಪೂರ್ಣ ಮಾಹಿತಿಯಷ್ಟೇ ಇದೆ ಎಂದು ಮೂಲಗಳು ತಿಳಿಸಿವೆ.

ಬಜೆಟ್ ಸಿದ್ಧಪಡಿಸುತ್ತಿಲ್ಲ: ಸಿಂಡಿಕೇಟ್ ಸಭೆಯಲ್ಲಿ ನುಡಿಹಬ್ಬದ ಖರ್ಚು ಎಷ್ಟಾಗಬಹುದು ಎಂಬ ಕುರಿತು ಮೊದಲಾಗಿಯೇ ಬಜೆಟ್ ಸಿದ್ಧಪಡಿಸಿ ಚರ್ಚಿಸಿದರೆ ಇಂತಹ ದುಂದುವೆಚ್ಚ ಸಾಧ್ಯವೇ ಆಗದು. ಆದರೆ ಅಂತಹ ಪ್ರಯತ್ನ ನಡೆಸದೆ ಕೊನೆಗೆ ಲೆಕ್ಕ ತೋರಿಸಿ ಒಪ್ಪಿಗೆ ಪಡೆದುಕೊಳ್ಳುವ ದಾರಿಯನ್ನು ಇದುವರೆಗೆ ಅನುಸರಿಸಲಾಗಿತ್ತು. ಇದನ್ನು ನೋಡಿದರೆ ವಿಶ್ವವಿದ್ಯಾಲಯ ಆರ್ಥಿಕ ಸಂಕಷ್ಟದಲ್ಲಿ ಇರುವುದು ನಿಜವೇ ಎಂಬ ಸಂಶಯವೂ ಮೂಡುವಂತಾಗಿತ್ತು. ಇನ್ನು ಮುಂದಾದರೂ ಬಜೆಟ್ ಮಂಡಿಸಿ, ವೆಚ್ಚದ ಒಪ್ಪಿಗೆ ಪಡೆದುಕೊಂಡು ನುಡಿಹಬ್ಬಕ್ಕೆ ಸಿದ್ಧತೆ ನಡೆಸುತ್ತಾರೆಯೇ ಎಂಬ ನಿರೀಕ್ಷೆಯ ಭಾರ ಗುರುವಾರದ ಸಿಂಡಿಕೇಟ್ ಸಭೆಯ ಮೇಲಿದೆ.

ಸಮಿತಿ ರಚಿಸುವ ಕ್ರಮ ಜರುಗೀತೇ?

47 ಮಂದಿ ಗುತ್ತಿಗೆ ಕಾರ್ಮಿಕರಿಗೆ ಇದುವರೆಗೆ ನೀಡುತ್ತಿದ್ದ ವೇತನ ಎಷ್ಟು? ಗುತ್ತಿಗೆದಾರರಿಗೆ ಪಾವತಿಯಾಗುತ್ತಿದ್ದ ದುಡ್ಡೆಷ್ಟು ಎಂಬುದನ್ನು ತಿಳಿದುಕೊಂಡು ಮುಂದೆ ಯಾವ ರೀತಿ ಗುತ್ತಿಗೆ ಮುಂದುವರಿಸಬೇಕು ಎಷ್ಟು ಮೊತ್ತ ನಿಗದಿಪಡಿಸಬೇಕು ಎಂಬ ನಿಟ್ಟಿನಲ್ಲಿ ಅಧ್ಯಯನ ನಡೆಸಲು ಸಮಿತಿಯೊಂದನ್ನು ರಚಿಸುವ ಕ್ರಮಕ್ಕೆ ಸಿಂಡಿಕೇಟ್ ಮುಂದಾದರೆ ಮಾತ್ರ ಹಾಲಿ ಗುತ್ತಿಗೆ ಸಮಸ್ಯೆಗೆ ಪರಿಹಾರ ಸಿಗಬಹುದು ಮತ್ತು ಗುತ್ತಿಗೆ ನೆಪದಲ್ಲಿ ಲೂಟಿ ಹೊಡೆಯುವ ದಂದೆಗೂ ಕಡಿವಾಣ ಬೀಳಬಹುದು ಎಂದು ಮೂಲಗಳು ತಿಳಿಸಿವೆ.

13 ಸಭೆಗಳ ಮಾಹಿತಿ ವೆಬ್ಸೈಟ್ನಲ್ಲಿ ಇಲ್ಲ

ಸಿಂಡಿಕೇಟ್ ಸಭೆಯಲ್ಲಿ ಚರ್ಚಿತವಾಗುವ ಪ್ರತಿಯೊಂದು ವಿಷಯವನ್ನೂ ದಾಖಲಿಸಿ ವಿಶ್ವವಿದ್ಯಾಲಯದ ವೆಬ್ಸೈಟ್ನಲ್ಲಿ ಮರುದಿನವೇ ಪ್ರಕಟಿಸಬೇಕು ಎಂಬ ಸೂಚನೆಯನ್ನು ರಾಜ್ಯಪಾಲರು 2021ರ ಅಕ್ಟೋಬರ್ 27ರಂದು ನೀಡಿದ್ದರು. ಆದರೆ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಇದು ಪಾಲನೆಯಾಗಿಲ್ಲ ಎಂಬುದಕ್ಕೆ ವಿಶ್ವವಿದ್ಯಾಲಯದ ವೆಬ್ಸೈಟ್ ಸಾಕ್ಷಿಯಾಗಿದೆ. ವಿಶ್ವವಿದ್ಯಾಲಯದ ವೆಬ್ಸೈಟ್ನಲ್ಲಿ ಕೊನೆಯ ಬಾರಿಗೆ ಸಿಂಡಿಕೇಟ್ ಸಭೆಯ ಮಾಹಿತಿ ಲಭ್ಯವಾದುದು 2022ರ ಸೆ.7ರಂದು. ಅದು 214ನೇ ಸಭೆಯಾಗಿತ್ತು. ಗುರುವಾರ ನಡೆಯುವುದು 228ನೇ ಸಭೆ. ಅಂದರೆ 13 ಸಭೆಗಳ ಮಾಹಿತಿ ವೆಬ್ಸೈಟ್ನಲ್ಲಿ ಇಲ್ಲವೇ ಇಲ್ಲ. 2015ರ ಅಕ್ಟೋಬರ್ 9ರಿಂದ 2022ರ ಸೆಪ್ಟೆಂಬರ್ 7ರ ವರೆಗಿನ ಸಿಂಡಿಕೇಟ್ ಸಭೆಯ ಮಾಹಿತಿ ವೆಬ್ಸೈಟ್ನಲ್ಲಿ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.