ಹೊಸಪೇಟೆ (ವಿಜಯನಗರ): ತುಂಗಭದ್ರಾ ಅಣೆಕಟ್ಟೆಯ 19ನೇ ಕ್ರಸ್ಟ್‌ಗೇಟ್ ಕೊಚ್ಚಿಹೋಗಲು ನೀರಿನ ಒತ್ತಡವೇ ಕಾರಣ ಎಂದು ಕೇಂದ್ರ ಜಲ ಆಯೋಗದ (ಸಿಡಬ್ಲ್ಯುಸಿ) ಮಾಜಿ ಅಧ್ಯಕ್ಷ ಎ.ಕೆ.ಬಜಾಜ್ ನೇತೃತ್ವದ ತಜ್ಞರ ತಂಡ ತಿಳಿಸಿದೆ. ಇದರ ಬಗ್ಗೆ ವರದಿ ಸಲ್ಲಿಸಿರುವ ತಂಡವು, ‘ಎಲ್ಲ 33 ಗೇಟ್‌ಗಳನ್ನೂ ಬದಲಿಸಿ, ಹೊಸ ಗೇಟ್ ಅಳವಡಿಸಿ’ ಎಂದಿದೆ.

‘ಎಲ್ಲಾ 33 ಗೇಟ್‌ಗಳನ್ನೂ ಬದಲಿಸುವ ಮುನ್ನ ಅಣೆಕಟ್ಟೆ ಸಾಮರ್ಥ್ಯ ಪರೀಕ್ಷಿಸಬೇಕು. ಅಣೆಕಟ್ಟೆ ದುರಂತಕ್ಕೆ ವರದಿಯು ಯಾರನ್ನೂ ದೂಷಿಸಿಲ್ಲ. 70 ವರ್ಷ ಹಳೆಯ ಗೇಟ್ ನೀರಿನ ಒತ್ತಡಕ್ಕೆ ಸಿಲುಕು ಕೊಚ್ಚಿ ಹೋಗಿರಬೇಕೆಂದು ತಜ್ಞರು ಅಂದಾಜಿಸಿದ್ದಾರೆ’ ಎಂದು ತುಂಗಭದ್ರಾ ಮಂಡಳಿಯ ಕಾರ್ಯದರ್ಶಿ ಒ.ಆರ್.ಕೆ.ರೆಡ್ಡಿ ತಿಳಿಸಿದ್ದಾರೆ. ತಜ್ಞರ ತಂಡವು ಸೆಪ್ಟೆಂಬರ್ 9 ಮತ್ತು 10ರಂದು ಅಣ್ಣೆಕಟ್ಟೆಗೆ ಭೇಟಿ ನೀಡಿ, ಎಲ್ಲಾ ಆಯಾಮಗಳಲ್ಲೂ ಪರಿಶೀಲನೆ ನಡೆಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.