ಗರಿಷ್ಠ 5 ಕನಿಷ್ಠ 2–3 ಆಂಟಿ-ಸ್ನೇಕ್ ವೆನಮ್ ಚುಚ್ಚುಮದ್ದನ್ನು ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ದಾಸ್ತಾನು ಮಾಡಿಕೊಳ್ಳಲು ಸೂಚಿಸಲಾಗಿದೆ. ಮೂಢ ನಂಬಿಕೆ ತೊರೆದು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವುದು ಸೂಕ್ತ
ಡಾ.ಪ್ರಭುಲಿಂಗ ಮಾನಕರ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ
ಮೂಢ ನಂಬಿಕೆ ಮೊರೆ!
ಜಿಲ್ಲೆಯಲ್ಲಿ ಇಂದಿಗೂ ಹಾವು ಕಚ್ಚಿದರೆ ಮೂಢ ನಂಬಿಕೆಯನ್ನು ಅನುಸರಿಸಿ ಸಾವಿಗೀಡಾದವರ ಸಂಖ್ಯೆಯೂ ಕಡಿಮೆಯಾಗಿಲ್ಲ. ಹಾವು ಕಚ್ಚಿದಾಗ ಮಾಟ ಮಂತ್ರದ ಮೊರೆ ಹೋಗಿ ಜೀವ ತೆತ್ತ ಪ್ರಕರಣಗಳು ನಡೆದಿವೆ. ಮಂತ್ರಿಸಿದ ನೀರು ಕುಡಿಸುವುದು ಫೋನ್‌ನಲ್ಲಿ ಮಂತ್ರಿಸುವುದು ಇತ್ಯಾದಿಯಿಂದ ಅನೇಕರು ಜೀವ ಕಳೆದುಕೊಂಡಿದ್ದಾರೆ. ‘ಹಿಂದಿನ ಕಾಲದಲ್ಲಿ ವಿಷವಿಲ್ಲದ ಹಾವುಗಳು ಕಚ್ಚಿದಾಗ ದೇವರ ಮೊರೆ ಹೋಗಿ ಮಂತ್ರಿಸಿದ ನೀರು ಕುಡಿದು ಜೀವ ಉಳಿಸಿಕೊಳ್ಳುತ್ತಿದ್ದರು. ಆದರೆ ವಿಷಕಾರಿ ಹಾವು ಕಚ್ಚಿದಾಗ ಪ್ರಾಣ ಕಳೆದುಕೊಂಡಿದ್ದಾರೆ. ಆದರೂ ಇಂದಿಗೂ ಮೌಢ್ಯದಿಂದ ಮಂತ್ರದ ಮೊರೆ ಹೋಗಿ ಜೀವನ ಕಳೆದುಕೊಳ್ಳುವುದು ನಡೆದಿದೆ. ಹೀಗಾಗಿ ಹಾವು ಕಚ್ಚಿದ ಅರ್ಧ ಗಂಟೆಯಲ್ಲಿ ಸಮೀಪದ ಆಸ್ಪತ್ರೆಗೆ ತೆರಳುವುದು ಉತ್ತಮ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಪ್ರಭುಲಿಂಗ ಮಾನಕರ್ ಹೇಳುತ್ತಾರೆ. ‘ವಿಷ ಸರ್ಪ ಕಚ್ಚಿದಾಗ ಗೋಲ್ಡನ್ ಅವರ್ (ಜೀವ ರಕ್ಷಕ ಸಮಯ) ಅರ್ಧ ಗಂಟೆ ಹೆಚ್ಚಂದರೆ 1 ಗಂಟೆಯೊಳಗೆ ಚುಚ್ಚು ಮದ್ದು ತೆಗೆದುಕೊಳ್ಳಬೇಕು. ಆಗ ಜೀವ ರಕ್ಷಣೆ ಮಾಡಿಕೊಳ್ಳಲು ಸಾಧ್ಯ. ನಿರ್ಲಕ್ಷ್ಯ ಸಲ್ಲ. ಕೆಲವೊಮ್ಮೆ ನಿರ್ಲಕ್ಷ್ಯದಿಂದಲೇ ಸಾವನ್ನಪ್ಪಿದ್ದಾರೆ’ ಎನ್ನುತ್ತಾರೆ ಅವರು.