ಜಿಲ್ಲೆಯಲ್ಲಿ ಶೇ 86ರಷ್ಟು ಮಹಿಳೆಯರು ಗೃಹಲಕ್ಷ್ಮಿ ಯೋಜನೆಗೆ ನೋಂದಣಿ ಮಾಡಿಕೊಂಡಿದ್ದಾರೆ. ಆಧಾರ್ ಕಾರ್ಡ್ ಜೋಡಣೆ ಶೇ 47ರಷ್ಟಾಗಿದೆ. ಸಿಡಿಂಗ್ ಮಾಡದವರಿಗೆ ಕರೆ ಮಾಡಿ ಮಾಹಿತಿ ತಿಳಿಸಲಾಗುತ್ತಿದೆ
–ವೀರಣ್ಣಗೌಡ, ಉಪ ನಿರ್ದೇಶಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ
ಮೊದಲ ತಿಂಗಳಲ್ಲಿ ಗೃಹಲಕ್ಷ್ಮಿ ಹಣ ಬೇಗ ಬಂದಿತ್ತು. ಆದರೆ ಎರಡನೇ ತಿಂಗಳ ಹಣ ಇಲ್ಲಿಯವರಿಗೂ ಬಂದಿಲ್ಲ. ಹಣ ಉಪಯೋಗಕ್ಕೆ ಬಂದಿದೆ. ಪ್ರತಿ ತಿಂಗಳು ನಿಗದಿತ ಸಮಯದಲ್ಲಿ ಹಣ ಜಮಾ ಮಾಡಬೇಕು
-ಸಂಗೀತಾ ಸ್ವಾಮಿ, ಕಕ್ಕೇರಾ ಗೃಹಿಣಿ
ನಮ್ಮಂತ ದುಡಿದು ಬದುಕುವರಿಗೆ ಗೃಹಲಕ್ಷ್ಮಿ ಹಣ ಆಸರೆಯಾಗಿದೆ. ಆದರೆ ಹಣ ಇನ್ನೂ ಬಂದಿಲ್ಲ. ಸೇವಾ ಕೇಂದ್ರದಲ್ಲಿ ಕೇಳಿದರೆ ಇನ್ನೂ ಜಮಾ ಆಗಿಲ್ಲ. ಬರುತ್ತದೆ ಎಂದು ಹೇಳುತ್ತಾರೆ. ಯಾವಾಗ ಬರುತ್ತದೆ ಎನ್ನುವುದು ತಿಳಿದಿಲ್ಲ