ಶುಕ್ರವಾರ, 22 ನವೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಯಾದಗಿರಿ: ರೇಷ್ಮೆ ಬೆಳೆಗಾರರಿಗಿಲ್ಲ ಸ್ಥಳೀಯ ಮಾರುಕಟ್ಟೆ

Published : 13 ಅಕ್ಟೋಬರ್ 2023, 5:06 IST
Last Updated : 13 ಅಕ್ಟೋಬರ್ 2023, 5:06 IST
ಫಾಲೋ ಮಾಡಿ
Comments
ರೇಷ್ಮೆ ಗೂಡುಕಟ್ಟದ ಬಗ್ಗೆ ಬೆಳೆಗಾರರು ಮಾಹಿತಿ ನೀಡಲಿ. ಜಿಲ್ಲೆಯಾದ್ಯಂತ ಬೆಳೆಗಾರರು ಇದ್ದರೆ ಮಾರುಕಟ್ಟೆ ಇರುತ್ತಿತ್ತು. ಕೆಲವರು ಇರುವುದರಿಂದ ಮಾರುಕಟ್ಟೆ ಸ್ಥಾಪನೆ ಆಗಿಲ್ಲ
- ಶರಣಬಸಪ್ಪ ದರ್ಶನಾಪುರ, ಜಿಲ್ಲಾ ಉಸ್ತುವಾರಿ ಸಚಿವ
ಸ್ಥಳೀಯವಾಗಿ ಮಾರುಕಟ್ಟೆ ಇದ್ದರೆ ಬೆಳೆಗಾರರಿಗೆ ಅನುಕೂಲವಾಗುತ್ತದೆ. ಅಲ್ಲದೇ ಅಧಿಕಾರಿಗಳು ಬೆಳೆಗಾರರಿಗೆ ಕಾರ್ಯಾಗಾರಗಳನ್ನು ಮಾಡಬೇಕು
ಅನಿತಾ ಗೋವಿಂದ ಚವಾಣ್‍, ರೇಷ್ಮೆ ಬೆಳೆಗಾರರು
ರೇಷ್ಮೆ ಬೆಳೆಗಾರರು ತುಂಬಾ ಸಂಕಷ್ಟದಲ್ಲಿದ್ದಾರೆ. ಕೂಡಲೇ ಅವರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು. ಸ್ಥಳೀಯವಾಗಿ ಖರೀದಿ ಮಾಡಿದರೆ ಅನುಕೂಲವಾಗುತ್ತದೆ
- ಕಿಶನ್‌ ರಾಥೋಡ್‌, ರೇಷ್ಮೆ ಬೆಳೆಗಾರ
ಅಕ್ಕಪಕ್ಕದ ಜಿಲ್ಲೆಗಳಲ್ಲಿ ಸ್ಥಳೀಯವಾಗಿ ಮಾರುಕಟ್ಟೆ ಇದ್ದರೂ ನಾವು ಎಷ್ಟೇ ಖರ್ಚಾದರೂ ದೂರದ ಪ್ರದೇಶಗಳಲ್ಲಿ ಹೋಗಿ ಮಾರಾಟ ಮಾಡುತ್ತೇವೆ. ಸರಿಯಾದ ಬೆಲೆ ಸಿಕ್ಕರೆ ಸ್ಥಳೀಯವಾಗಿ ಮಾರಾಟ ಮಾಡಬಹುದು
- ವಾಸುದೇವ ಪುಲ್‌ಸಿಂಗ್‌, ರೇಷ್ಮೆ ಬೆಳೆಗಾರ
ಅಧಿಕಾರಿಗಳ ನಿರ್ಲಕ್ಷ್ಯ
ಬಾರದ ಸಹಾಯಧನ ದೂರ ಪ್ರದೇಶದ ಮಾರುಕಟ್ಟೆಗೆ ರೇಷ್ಮೆ ಸಾಗಿಸಿದರೆ ಸರ್ಕಾರ ಸಹಾಯಧನ ನೀಡುತ್ತದೆ. ಆದರೆ ಈ ಬಾರಿಯೂ ಗೂಡು ಕಟ್ಟದೆ ಇರುವುದರಿಂದ ಅಲ್ಪ‍ ಸಾಗಿಸಿದರೂ ಸಾಗಣೆ ವೆಚ್ಚ ಬಿಡುಗಡೆಯಾಗಿಲ್ಲ ಎನ್ನುವುದು ಬೆಳೆಗಾರರ ಆರೋಪವಾಗಿದೆ. ರೇಷ್ಮೆ ಇಲಾಖೆಯಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಎಲ್ಲ ಕಡೆ ಅಧಿಕಾರಿಗಳು ತೆರಳಿ ಪರಿಶೀಲನೆ ಮಾಡುವುದಿಲ್ಲ. ಇದರಿಂದ ರೇಷ್ಮೆ ಬೆಳೆಗಾರರಿಗೆ ಸರಿಯಾದ ಮಾಹಿತಿ ಸಿಗುವುದಿಲ್ಲ ಎಂದು ದೂರುತ್ತಾರೆ. ಗೋಗಿ ವ್ಯಾಪ್ತಿಯ ಗ್ರಾಮ ತಾಂಡಾಗಳ ರೇಷ್ಮೆ ಬೆಳೆಗಾರರಿಗೆ ಸಾಗಣೆ ವೆಚ್ಚ ಬಾರದೆ ಸಂಕಷ್ಟ ಅನುಭವಿಸುತ್ತಿದ್ದಾರೆ. ಈಗ ಆಗಾಗ ವಿದ್ಯುತ್‌ ಕಡಿತವಾಗುತ್ತಿದ್ದು ಮತ್ತಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ.
‘ಕಚೇರಿ ಮರು ಸ್ಥಾಪಿಸಿ’
ಹಲವಾರು ವರ್ಷಗಳ ಹಿಂದೆ ಚಾಮನಾಳ ಲಚಮಾನಾಯಕ್ ತಾಂಡಾದಲ್ಲಿ ರೇಷ್ಮೆ ಇಲಾಖೆ ಕಚೇರಿ ಸ್ಥಾಪನೆ ಮಾಡಲಾಗಿತ್ತು. ಈಗ ಅದನ್ನು ಬಂದ್‌ ಮಾಡಲಾಗಿದೆ. ಹೀಗಾಗಿ ಬೆಳೆಗಾರರಿಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ ಎನ್ನುವುದು ಬೆಳೆಗಾರರ ಆರೋಪವಾಗಿದೆ. ‘ಚಾಮನಾಳ ಲಚಮಾನಾಯಕ್ ತಾಂಡಾದಲ್ಲಿ 10 ವರ್ಷಗಳಿಂದೆ ರೇಷ್ಮೆ ಇಲಾಖೆ ಕಚೇರಿಯನ್ನು ಹೊಂದಿತ್ತು. ಆಗ ಬೆಳೆಗಾರರಿಗೆ ಮಾಹಿತಿ ಸಿಗುತ್ತಿತ್ತು. ಈಗ ಕಟ್ಟಡ ಮಾತ್ರ ಇದ್ದು ಬಾಗಿಲು ಹಾಕಲಾಗಿದೆ. ಇದರಿಂದ ಬೆಳೆಗಾರರಿಗೆ ಯಾವುದೇ ಮಾಹಿತಿ ಸಿಗುತ್ತಿಲ್ಲ’ ಎನ್ನುತ್ತಾರೆ ಬೆಳೆಗಾರರರಾದ ಸರಸ್ವತಿ ಹಣಮಂತ ಶಿವುಕುಮಾರ್ ಮೋತಿಲಾಲ್. ‘ಈ ಹಿಂದೆ ರೇಷ್ಮೆ ಸಾಕಾಣಿಕೆ ಬಗ್ಗೆ ತರಬೇತಿ ಸಲಕರಣೆ ಮತ್ತು ಇನ್ನಿತರ ಅವಶ್ಯಕ ಸಾಮಗ್ರಿ ಮತ್ತು ಪ್ರೋತ್ಸಾಹ ನೀಡು ತಿದ್ದರು. ಕೂಡಲೇ ರೇಷ್ಮೆ ಇಲಾಖೆ ಅಧಿಕಾರಿಗಳು ಮತ್ತೆ ತಾಂಡಾದಲ್ಲಿ ಕಚೇರಿಯನ್ನು ಆರಂಭಿಸಬೇಕು. ಕಾಲಕಾಲಕ್ಕೆ ಬೆಳೆಗಾರರಿಗೆ ಮಾಹಿತಿ ನೀಡಬೇಕು’ ಎಂದು ತಾಂಡಾದ ನಾಯಕ ಕೃಷ್ಣಪ್ಪ ನಾಯ್ಕ್‌ ಒತ್ತಾಯಿಸುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT