ಜಿಲ್ಲೆಯಲ್ಲಿ ಸಾರಿಗೆ ನಿಯಮಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ಕೆಂಭಾವಿಯಲ್ಲಿ ಮೂರು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯ ಇತರ ಕಡೆಯೂ ಜಾಗೃತಿ ಮೂಡಿಸಲಾಗುತ್ತಿದೆಮಿಲಿಂದ್ ಕುಮಾರ ಪ್ರಾದೇಶಿಕ ಸಾರಿಗೆ ಅಧಿಕಾರಿ
ವಾಹನದಲ್ಲಿ ನಿಗದಿಪಡಿಸಿದ ಸಂಖ್ಯೆಯಷ್ಟು ಮಕ್ಕಳನ್ನು ಕರೆ ತರಬೇಕು. ವಾಹನ ಚಾಲಕರ ಪೂರ್ಣ ಮಾಹಿತಿ ಠಾಣೆಗೆ ನೀಡುವಂತೆ ಖಾಸಗಿ ಶಾಲೆಯ ಮುಖ್ಯಸ್ಥರಿಗೆ ಕಟ್ಟುನಿಟ್ಟಾಗಿ ಸೂಚಿಸಿದೆ.ಎಸ್.ಎಂ.ಪಾಟೀಲ ಪಿ.ಐ ಶಹಾಪುರ ಠಾಣೆ
ಮಕ್ಕಳಿಗೆ ಸುರಕ್ಷಿತ ಸಾರಿಗೆ ವ್ಯವಸ್ಥೆ ಕಲ್ಪಿಸಲು ತಿಳಿಸಲಾಗುವುದು. ಅಪಘಾತ ಸಂಭವಿಸಿದರೆ ಶಾಲಾ ಮುಖ್ಯಸ್ಥರನ್ನು ಹೊಣೆ ಮಾಡುವ ಚಿಂತನೆ ಇಲಾಖೆ ಮಟ್ಟದಲ್ಲಿ ನಡೆಯುತ್ತಿದೆಯಲ್ಲಪ್ಪ ಕಾಡ್ಲೂರು ಬಿಇಒ ಸುರಪುರ
ಶಕ್ತಿ ಯೋಜನೆ ಜಾರಿಯಾದ ನಂತರ ಬೇಡಿಕೆಯಿರುವ ಮಾರ್ಗಗಳಲ್ಲಿ ಹೆಚ್ಚುವರಿ ಬಸ್ ಸಂಚಾರ ಮಾಡುತ್ತಿವೆ. ಬಾಗಿಲಲ್ಲಿ ನೇತಾಡುವ ಸ್ಥಿತಿ ಸದ್ಯ ನಮ್ಮ ವ್ಯಾಪ್ತಿಯಲ್ಲಿಲ್ಲಪ್ರವೀಣಕುಮಾರ ಯರನಾಳ ಗುರುಮಠಕಲ್ ಬಸ್ ಡಿಪೋ ವ್ಯವಸ್ಥಾಪಕ
ಗುರುಮಠಕಲ್ ತಾಲ್ಲೂಕಿನ ಬೂದೂರು ಗೇಟ್ ಹತ್ತಿರ ವರ್ಷದ ಹಿಂದೆ ಖಾಸಗಿ ಗೂಡ್ಸ್ ವಾಹನದಲ್ಲಿ ವಿದ್ಯಾರ್ಥಿಗಳು ಹೋಗುವಾಗ ಅಪಘಾತವಾಗಿತ್ತು. ವಾಹನ ಚಲಾಯಿಸುವರು ಜಾಗೃತವಾಗಿರಬೇಕುಮರಗಪ್ಪ ಕೂಲಿ ಕಾರ್ಮಿಕ
ಆಯಾ ಶಾಲಾಡಳಿತಗಳು ತಮ್ಮ ವಾಹನ ಮತ್ತು ಚಾಲಕನ ಕುರಿತು ಒಂದು ಕಣ್ಣಿಟ್ಟಿರಬೇಕು. ಸರ್ಕಾರದ ಮಾರ್ಗಸೂಚಿ ಅನುಸರಿಸುವಂತೆ ಸಂಬಂಧಿತ ಅಧಿಕಾರಿಗಳು ಆಗಾಗ ಪರಿಶೀಲಿಸಬೇಕುಮಹೇಶ ಬಿ. ಯುವಕ
ಕಕ್ಕೇರಾದಲ್ಲಿ ಖಾಸಗಿ ಶಾಲೆಗಳ ವಾಹನಗಳಲ್ಲಿ ನಿಗದಿತ ಮಕ್ಕಳ ಸಂಖ್ಯೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳನ್ನು ಕೂರಿಸಿಕೊಂಡು ಹೋಗುವುದು ಸಾಮಾನ್ಯವಾಗಿದ್ದು ಅದಕ್ಕೆ ಸಂಬಂಧಪಟ್ಟವರು ಕ್ರಮಕ್ಕೆ ಮುಂದಾಗಬೇಕುಗುಡದಪ್ಪ ಬಿಳೇಭಾವಿ ಸ್ಥಳೀಯ ನಿವಾಸಿ
ಸಾರಿಗೆ ಇಲಾಖೆ ಜಿಲ್ಲಾಡಳಿತ ರೂಪಿಸಿರುವ ನಿಯಮಗಳನ್ನು ಪಾಲನೆ ಮಾಡಬೇಕು. ಈಗಾಗಲೇ ಜಿಲ್ಲಾಧಿಕಾರಿ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಮುಂದಿನ ದಿನಗಳಲ್ಲಿ ಆರ್‌ಟಿಒ ನೇತೃತ್ವದಲ್ಲಿ ಸಭೆ ನಡೆಸಲಾಗುವುದುಮಂಜುನಾಥ ಡಿಡಿಪಿಐ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.