ಸುರಪುರ ಸಮೀಪದ ತಿಮ್ಮಾಪುರ ಸರ್ಕಾರಿ ಶಾಲೆಯ ನೇತ್ರ ಸಮಸ್ಯೆ ಇರುವ ಮಕ್ಕಳಿಗೆ ಉಚಿತವಾಗಿ ಕನ್ನಡಕ ವಿತರಿಸಲಾಯಿತು
ಜಿಲ್ಲೆಯಲ್ಲಿ ಅಂಧತ್ವ ನಿವಾರಣೆ ಭಾಗವಾಗಿ 10800 ಶಸ್ತ್ರಚಿಕಿತ್ಸೆ ಗುರಿ ಇದ್ದು 5086 ಶಸ್ತ್ರಚಿಕಿತ್ಸೆ ಮಾಡಲಾಗಿದೆ. 1 ರಿಂದ10ನೇ ತರಗತಿಯ 1.96 ಲಕ್ಷ ವಿದ್ಯಾರ್ಥಿಗಳ ನೇತ್ರ ತಪಾಸಣೆ ಗುರಿಯಲ್ಲಿ 97013 ಮಂದಿಗೆ ತಪಾಸಣೆ ಮಾಡಲಾಗಿದೆ
ಡಾ.ಮಲ್ಲಪ್ಪ ಕಣಜಿಕರ್ ಪ್ರಭಾರ ಜಿಲ್ಲಾ ಅಂಧತ್ವ ನಿಯಂತ್ರಣ ಅಧಿಕಾರಿ
ನೇತ್ರ ಸೂಕ್ಷ್ಮ ಅಂಗವಾಗಿ ನಿರ್ಲಕ್ಷ್ಯ ಮಾಡಬಾರದು. ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ವೈದ್ಯರು ಹೇಳುವ ಜಾಗರೂಕತೆಯನ್ನು ಪಾಲಿಸಬೇಕು. ಆಗ ಮಾತ್ರ ಕಣ್ಣಿನ ಆರೋಗ್ಯ ಸುಧಾರಿಸಲು ಸಾಧ್ಯ
ಡಾ.ಪ್ರದೀಪರೆಡ್ಡಿ ನೇತ್ರ ತಜ್ಞ
ನೇತ್ರದಾನ ಮತ್ತು ನೇತ್ರ ಚಿಕಿತ್ಸೆಗೆ ಸಂಬಂಧಿಸಿದಂತೆ ಸದ್ಯ ನಮ್ಮ ತಾಲ್ಲೂಕಿನಲ್ಲಿ ಅಷ್ಟೇನು ಮಹತ್ವ ಸಿಕ್ಕಿಲ್ಲ. ಕಣ್ಣನ್ನು ಜ್ಞಾನದ ಹೆಬ್ಬಾಗಿಲು ಎನ್ನಲಾಗುತ್ತದೆ. ಕಣ್ಣಿನ ಆರೋಗ್ಯಕ್ಕೆ ಮಹತ್ವ ನೀಡುವತ್ತ ಸಂಬಂಧಿತ ಇಲಾಖೆ ಆದ್ಯತೆಯಲ್ಲಿ ವ್ಯವಸ್ಥೆ ಮಾಡಲಿ
ರಾಮುಲು ಸಿ.ಎನ್ ಗುರುಮಠಕಲ್ ನಾಗರಿಕ
ನೇತ್ರ ಪ್ರಮುಖ ಅಂಗ. ಜನರು ನಿರ್ಲಕ್ಷ್ಯ ಮಾಡದೆ ಆಗಾಗ ತಪಾಸಣೆ ಮಾಡಿಸಿಕೊಳ್ಳಬೇಕು. ಸರಿಯಾದ ಸಮಯಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರೆ ಜೀವನ ಪರ್ಯಂತ ಕಣ್ಣುಗಳನ್ನು ಚೆನ್ನಾಗಿ ಇಟ್ಟುಕೊಳ್ಳಬಹುದು
ಡಾ. ರಾಜಾ ವೆಂಕಪ್ಪನಾಯಕ ಟಿಎಚ್‌ಒ ಸುರಪುರ
ನಿರಂತರ ಮೊಬೈಲ್ ಟಿವಿ ವೀಕ್ಷಣೆಯಿಂದ ಮಕ್ಕಳಲ್ಲಿ ದೂರದೃಷ್ಟಿಯ ಸಮಸ್ಯೆ ಉಂಟಾಗುತ್ತಿದೆ. ಪಾಲಕರು ಈ ಬಗ್ಗೆ ಗಮನ ಹರಿಸಬೇಕು. ಹಸಿರು ತರಕಾರಿ ನಿಯಮಿತವಾಗಿ ಸೇವಿಸಿದರೆ ಕಣ್ಣಿನ ಆರೋಗ್ಯ ಚೆನ್ನಾಗಿರುತ್ತದೆ