ಭಾರತವು ಬಗೆ ಬಗೆಯ ಗುಡಿ ಕೈಗಾರಿಕೆಗಳಿಗೆ ಜಗತ್ತಿನಾದ್ಯಂತ ಹೆಸರುವಾಸಿ. ಅಂದಿನ ಹಲವು ಗುಡಿ ಕೈಗಾರಿಕೆಗಳು ಇಂದು ಸಾಂಸ್ಥಿಕ ರೂಪ ಪಡೆದು ದೇಶದ ಅರ್ಥ ವ್ಯವಸ್ಥೆಗೆ ತಮ್ಮದೇಯಾದ ಕೊಡುಗೆ ನೀಡುತ್ತಿವೆ. ಇಂತಹವುಗಳಲ್ಲಿ ಪಾದರಕ್ಷೆ, ಚರ್ಮೋದ್ಯಮ–ಫ್ಯಾಷನ್ ಕ್ಷೇತ್ರವೂ ಒಂದು.

ಪ್ರಾಚೀನ ಕಾಲದಿಂದ ಭಾರತ, ಪಾದರಕ್ಷೆ, ಚರ್ಮದ, ಫ್ಯಾಷನ್ ಸಂಬಂಧಿ ಉತ್ಪನ್ನಗಳು ಸಾಕಷ್ಟು ಹೆಸರುವಾಸಿ. ಈ ಕ್ಷೇತ್ರವನ್ನು ಬೆಳೆಸುವ ನಿಟ್ಟಿನಲ್ಲಿ 1986 ರಲ್ಲಿ ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಸಚಿವಾಲಯ ಫುಟ್‌ವೇರ್ ಡಿಸೈನ್ ಆ್ಯಂಡ್ ಡೆವೆಲಪ್ಮೆಂಟ್ (ಪಾದರಕ್ಷೆಗಳ ವಿನ್ಯಾಸ ಮತ್ತು ಅಭಿವೃದ್ಧಿ ಸಂಸ್ಥೆ) ಇನ್‌ಸ್ಟಿಟ್ಯೂಟ್ (FDDI) ಸ್ಥಾಪಿಸಿದೆ.

ಪ್ರಸ್ತುತ ಪಾದರಕ್ಷೆ ಮತ್ತು ಚರ್ಮೊತ್ಪನ್ನಗಳ ತಯಾರಿಕೆಯಲ್ಲಿ ಭಾರತ, ಚೀನಾ ನಂತರ ಎರಡನೇ ಸ್ಥಾನದಲ್ಲಿದ್ದು, ಇದೇ ಕ್ಷೇತ್ರದ ರಫ್ತು ವಿಭಾಗದಲ್ಲಿ ಜಗತ್ತಿನಲ್ಲಿ ಐದನೇ ಸ್ಥಾನದಲ್ಲಿದೆ. ಈ ಕ್ಷೇತ್ರದಲ್ಲಿ ಪ್ರತ್ಯಕ್ಷ, ಪರೋಕ್ಷವಾಗಿ ಸುಮಾರು 42 ಲಕ್ಷ ಜನ ತೊಡಗಿಸಿಕೊಂಡಿದ್ದಾರೆ.

FDDI ಹೇಗಿದೆ? ಏನು ಕೆಲಸ?

FDDI ದೇಶದಲ್ಲಿನ ಪಾದರಕ್ಷೆ, ಚರ್ಮೋದ್ಯಮ, ಫ್ಯಾಷನ್ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಂಶೋಧನೆ, ಕೌಶಲ್ಯ, ಮಾರುಕಟ್ಟೆ ಅನ್ವೇಷಣೆ, ವಿಸ್ತರಣೆಗೆ ಸಂಬಂಧಿಸಿದ ಒಂದು ಪ್ರತಿಷ್ಠಿತ ಸಂಸ್ಥೆ.

ಈ ಸಂಸ್ಥೆ ಅಡಿಯಲ್ಲಿ 12 ಕೇಂದ್ರಗಳು ದೇಶದಾದ್ಯಂತ ಕಾರ್ಯನಿರ್ವಹಿಸುತ್ತಿದ್ದು ಒಂದೊಂದು ಕ್ಯಾಂಪಸ್ ಒಂದೊಂದು ವಿಷಯಕ್ಕೆ ಸಂಬಂಧಿಸಿದಂತೆ ಶೈಕ್ಷಣಿಕ ಚಟುವಟಿಕೆ, ಸಂಶೋಧನೆ, ನಾವೀನ್ಯತೆ, ಕೌಶಲ ಹಾಗೂ ಕಾರ್ಯಾಗಾರಗಳನ್ನು ಆಯೋಜಿಸುತ್ತವೆ.

ಭಾರತವನ್ನು ಜಾಗತಿಕ ಉತ್ಪಾದನಾ ಜಾಲ ಮಾಡುವ ಯೋಜನೆಗಳಿಗೆ ಅನುಗುಣವಾಗಿ FDDI ಕಾರ್ಯನಿರ್ವಹಿಸುತ್ತಿದ್ದು, ಮೇಕ್ ಇನ್ ಇಂಡಿಯಾಗೂ ಇದು ಪೂರಕವಾಗಿದೆ. 2030ರ ವೇಳೆಗೆ 47 ಶತಕೋಟಿ ಅಮೆರಿಕನ್ ಡಾಲರ್ ಪಾದರಕ್ಷೆ ಹಾಗೂ ಚರ್ಮ ಸಂಬಂಧಿ ಉತ್ಪನ್ನಗಳ ವಹಿವಾಟನ್ನು ಇದರಿಂದ ನಿರೀಕ್ಷಿಸಲಾಗಿದೆ.

ಅಧ್ಯಕ್ಷ ಸೇರಿದಂತೆ 15 ಜನರ ಗವರ್ನಿಂಗ್ ಕೌನ್ಸಿಲ್ FDDI ಆಡಳಿತವನ್ನು ನೋಡಿಕೊಳ್ಳುತ್ತದೆ. ಪ್ರಸ್ತುತ ಆಶೀಸ್ ದೀಕ್ಷಿತ್ ಅವರು ಇದರ ಅಧ್ಯಕ್ಷರಾಗಿದ್ದಾರೆ.

ಶೈಕ್ಷಣಿಕ ಕೋರ್ಸ್‌ಗಳು

ಪದವಿ ಕೋರ್ಸ್‌ಗಳು (4 ವರ್ಷ)

ಬ್ಯಾಚುಲರ್ ಆಫ್ ಡಿಸೈನ್ ಇನ್ ಫುಟ್‌ವೇರ್ ಡಿಸೈನ್ ಆ್ಯಂಡ್ ಪ್ರೊಡಕ್ಷನ್
ಬ್ಯಾಚುಲರ್ ಆಫ್ ಡಿಸೈನ್ ಇನ್ ಫ್ಯಾಷನ್ ಡಿಸೈನ್
ಬ್ಯಾಚುಲರ್ ಆಪ್ ಡಿಸೈನ್ ಇನ್ ಲೆದರ್, ಲೈಫ್‌ಸ್ಟೈಲ್ ಆ್ಯಂಡ್ ಪ್ರೊಡಕ್ಟ್ ಡಿಸೈನ್
BBA ಇನ್ ರಿಟೇಲ್ ಆ್ಯಂಡ್ ಫ್ಯಾಶನ್ ಮರ್ಚಂಟೈಸ್

ಸ್ನಾತಕೋತ್ತರ ಪದವಿ ಕೋರ್ಸ್‌ಗಳು (2 ವರ್ಷ)

ಮಾಸ್ಟರ್ ಆಫ್ ಡಿಸೈನ್ ಇನ್ ಫುಟ್‌ವೇರ್ ಡಿಸೈನ್ ಆ್ಯಂಡ್ ಪ್ರೊಡಕ್ಷನ್
ಮಾಸ್ಟರ್ ಆಫ್ ಡಿಸೈನ್ ಇನ್ ಫ್ಯಾಷನ್ ಡಿಸೈನ್
MBA ಇನ್ ರಿಟೇಲ್ ಆ್ಯಂಡ್ ಫ್ಯಾಷನ್ ಮರ್ಚಂಟೈಸ್

FDDI ಅಡಿ ಕಾರ್ಯನಿರ್ವಹಿಸುವ ಶೈಕ್ಷಣಿಕ ಸಂಸ್ಥೆಗಳು
School of Footwear Design & Production (FDP)
School of Fashion Design (FD)
School of Leather Goods and Accessories Design (LGAD)
School of Retail and Fashion Merchandise (RFM)

ಉದ್ಯೋಗಾವಕಾಶಗಳು
ಫ್ಯಾಷನ್ ಡಿಸೈನರ್ಸ್, ಆಕ್ಸೆಸರಿ ಡಿಸೈನರ್ಸ್, ಟೆಕ್ಸಟೈಲ್ ಡಿಸೈನರ್ಸ್, ಫ್ಯಾಷನ್ ಇಲ್ಲಸ್ಟ್ರೇಟರ್ಸ್, ಸ್ಪೋರ್ಟ್‌ವಿಯರ್ ಡಿಸೈನರ್ಸ್, ಡಿಜಿಟಲ್ ಡಿಸೈನರ್ಸ್ ಇನ್ ಫ್ಯಾಷನ್, ಫ್ಯಾಷನ್ ಇಂಡಸ್ಟ್ರಿ ಆ್ಯಂಡ್ ಎಜುಕೇಟರ್ಸ್, ಬ್ರ್ಯಾಂಡ್ ಮ್ಯಾನೇಜರ್ಸ್, ಉದ್ಯಮಿಗಳಾಗುವ ಅವಕಾಶ.

FDDI ಕೇಂದ್ರಗಳು
ನೋಯ್ಡಾ, ರಾಯ್‌ಬರೇಲಿ (ಉತ್ತರ ಪ್ರದೇಶ), ಚೆನ್ನೈ, ಕೋಲ್ಕತ್ತ, ಹೈದರಾಬಾದ್, ರೋಹ್ಟಕ್ (ಹರಿಯಾಣಾ), ಗುನಾ, ಚಿಂದ್‌ವಾಡಾ (ಮಧ್ಯಪ್ರದೇಶ), ಜೋದ್‌ಪುರ (ರಾಜಸ್ಥಾನ), ಅಂಕಲೇಶ್ವರ್ (ಗುಜರಾತ್), ಬಾನೂರ್ (ಪಂಜಾಬ್), ಪಟ್ನಾ.

INI ಸ್ಟೇಟಸ್
FDDI 2017ರ ಕಾಯ್ದೆ ಅನುಗುಣವಾಗಿ ಈ ಸಂಸ್ಥೆಗೆ INI ಸ್ಟೇಟಸ್ ಒದಗಿಸಲಾಗಿದೆ. INI ಸ್ಟೇಟಸ್ ಎಂಬುದು Institute of National Importance ಅಂದರೆ ರಾಷ್ಟ್ರೀಯ ಮಹತ್ವದ ಸಂಸ್ಥೆಗಳಲ್ಲಿ ಒಂದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.