ಮಂಗಳೂರು: ನಗರದ ಕೆನರಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ತುಳಸಿ ಪೈ 596 ಅಂಕ ಗಳಿಸಿ ವಾಣಿಜ್ಯ ವಿಭಾಗದಲ್ಲಿ ರಾಜ್ಯ ಮಟ್ಟದಲ್ಲಿ ದ್ವಿತೀಯ ರ‍್ಯಾಂಕ್ ಪಡೆದಿದ್ದಾರೆ. ಇದೇ ಕಾಲೇಜಿನ ವಿದ್ಯಾರ್ಥಿನಿ ಸಮೃದ್ಧಿ 594 ಅಂಕ ಪಡೆದು ರಾಜ್ಯ ಮಟ್ಟದಲ್ಲಿ ನಾಲ್ಕನೇ ರ‍್ಯಾಂಕ್ ಪಡೆದಿದ್ದಾರೆ.

595 ಕ್ಕಿಂತ ಹೆಚ್ಚು ಅಂಕ ಬರಬಹುದೆಂಬ ನಿರೀಕ್ಷೆ ಇತ್ತು. ಪೂರ್ವಭಾವಿ ಪರೀಕ್ಷೆಯಲ್ಲೂ ಉತ್ತಮ ಅಂಕ ಗಳಿಸಲು ಸಾಧ್ಯವಾಗಿತ್ತು. ಆದರೆ, ರಾಜ್ಯ ಮಟ್ಟದಲ್ಲಿ ದ್ವಿತೀಯ ರ‍್ಯಾಂಕ್ ಬರಬಹುದೆಂದು ನಿರೀಕ್ಷಿಸಿರಲಿಲ್ಲ' ಎಂದು ತುಳಸಿ ಪೈ ಪ್ರತಿಕ್ರಿಯಿಸಿದರು.

'ಎಲ್ ಕೆಜಿಯಿಂದ ದ್ವಿತೀಯ ಪಿಯುಸಿವರೆಗೆ ಯಾವುದೇ ಟ್ಯೂಷನ್ ಹೋಗಿಲ್ಲ. ಸ್ವಂತ ಅಭ್ಯಾಸದಿಂದ ಉತ್ತಮ ಅಂಕ ಪಡೆಯಲು ಸಾಧ್ಯವಾಗಿದೆ. ವಾರ್ಷಿಕ ಪರೀಕ್ಷೆಗಾಗಿ ವಿಶೇಷ ತಯಾರಿ ಮಾಡಿಲ್ಲ. ದಿನಕ್ಕೆ ನಾಲ್ಕೈದು ತಾಸು ಅಭ್ಯಾಸ ಮಾಡುತ್ತಿದ್ದೆ. ಓದಿದ್ದನ್ನು ಸರಿಯಾಗಿ ಮನದಟ್ಟು ಮಾಡಿಕೊಳ್ಳುತ್ತಿದ್ದೆ. ಮುಂದೆ ಚಾರ್ಟರ್ಡ್ ಅಕೌಂಟೆಂಟ್ ಆಗುವ ಕನಸು ಇದೆ. ಎಸ್ಸೆಸ್ಸೆಲ್ಸಿ ಯಲ್ಲಿ 625ಕ್ಕೆ 624 ಅಂಕ ಬಂದಿತ್ತು. ವಾಣಿಜ್ಯ ನನ್ನ ಆಸಕ್ತಿಯ ವಿಷಯ ಆಗಿದ್ದ ಕಾರಣಕ್ಕೆ ವಾಣಿಜ್ಯ ವಿಭಾಗವನ್ನೇ ಆಯ್ದುಕೊಂಡಿದ್ದೆ' ಎಂದು ತುಳಸಿ ಹೇಳಿದರು. ಈಕೆ ಉದ್ಯಮಿ ವಿವೇಕ್ ಪೈ ಮತ್ತು ವಿನಿತಾ ದಂಪತಿ ಪುತ್ರಿ.

ಕಠಿಣ ಪರಿಶ್ರಮ ಅಗತ್ಯ:

ಪರೀಕ್ಷೆಗೆ ಎರಡು ತಿಂಗಳು ಮೊದಲಿನಿಂದ ದಿನಕ್ಕೆ ಐದಾರು ತಾಸು ಅಭ್ಯಾಸ ಮಾಡುತ್ತಿದ್ದೆ. ಸಾಕಷ್ಟು ಶ್ರಮವಹಿಸಿ ಓದಿದ್ದಕ್ಕೆ ಉತ್ತಮ ಫಲಿತಾಂಶ ಬಂದಿದೆ ಎಂದು ಸಮೃದ್ಧಿ ಪ್ರತಿಕ್ರಿಯಿಸಿದರು. ಈಕೆ ಉದ್ಯಮಿ ಶರತ್ ನಾಯಕ್ ಮತ್ತು ಲಲಿತಾ ಪ್ರಿಯಾ ದಂಪತಿ ಪುತ್ರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.