ಮುಂಬೈನ ಆರು ಲೋಕಸಭಾ ಕ್ಷೇತ್ರಗಳಲ್ಲಿ ಈ ಬಾರಿ ಎರಡರಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಹಣಾಹಣಿ ಏರ್ಪಟ್ಟಿದೆ. ಅವುಗಳಲ್ಲೊಂದು ಮುಂಬೈ ಉತ್ತರ ಲೋಕಸಭಾ ಕ್ಷೇತ್ರ. ಇಲ್ಲಿ ಬಿಜೆಪಿಯು ಕೇಂದ್ರ ಸಚಿವ ಪೀಯೂಷ್ ಗೋಯಲ್ ಅವರನ್ನು ಕಣಕ್ಕಿಳಿಸಿದ್ದು, ಕಾಂಗ್ರೆಸ್ನಿಂದ ಭೂಷಣ್ ಪಾಟೀಲ್ ಸ್ಪರ್ಧಿಸುತ್ತಿದ್ದಾರೆ. ಈ ಕ್ಷೇತ್ರವನ್ನು ಬಿಜೆಪಿಯ ಗೋಪಾಲ್ ಶೆಟ್ಟಿ ಅವರು 2014 ರಿಂದಲೂ ಪ್ರತಿನಿಧಿಸುತ್ತಿದ್ದಾರೆ. ಕಳೆದ ಬಾರಿ ಅವರು ಕಾಂಗ್ರೆಸ್ ಅಭ್ಯರ್ಥಿ ಊರ್ಮಿಳಾ ಮಾತೊಂಡ್ಕರ್ ಅವರನ್ನು ಮಣಿಸಿದ್ದರು. ಬಿಜೆಪಿಯ ಭದ್ರಕೋಟೆ ಎನಿಸಿರುವ ಈ ಕ್ಷೇತ್ರದಲ್ಲಿ ರಾಮ ನಾಯ್ಕ್ ಅವರು (1989ರ ಬಳಿಕ) ಸತತ ಐದು ಸಲ ಆಯ್ಕೆಯಾಗಿದ್ದರು. ಅನಂತರ ಎರಡು ಸಲ ಕಾಂಗ್ರೆಸ್ ಗೆದ್ದಿತ್ತು. ನಟ ಗೋವಿಂದ (2004) ಹಾಗೂ ಸಂಜಯ್ ನಿರುಪಮ್ (2009) ಅವರು ‘ಕೈ’ ಟಿಕೆಟ್ನಲ್ಲಿ ಜಯಿಸಿದ್ದರು. ಇಲ್ಲಿ ‘ಹ್ಯಾಟ್ರಿಕ್’ ಗೆಲುವಿನ ನಿರೀಕ್ಷೆಯಲ್ಲಿ ಬಿಜೆಪಿ, ಪ್ರಬಲ ಅಭ್ಯರ್ಥಿಯನ್ನೇ ಕಣಕ್ಕಿಳಿಸಿದೆ. ಕಾಂಗ್ರೆಸ್ನ ಭೂಷಣ್ ಪಾಟೀಲ್ ಅವರು ಸ್ಥಳೀಯರೇ ಆಗಿದ್ದು, ಈ ಹಿಂದೆ ಪಕ್ಷದ ಮುಂಬೈ ಘಟಕದ ಖಜಾಂಚಿಯಾಗಿ ಕಾರ್ಯನಿರ್ವಹಿಸಿದ್ದರು. ಬೊರಿವಲಿ, ದಹಿಸರ್, ಕಾಂಡಿವಲಿ ಈಸ್ಟ್ ಮತ್ತು ಮಲಾಡ್ ವೆಸ್ಟ್ ಸೇರಿದಂತೆ ಏಳು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಇಲ್ಲಿಯ ಮತದಾರರು ಈ ಬಾರಿ ಯಾರ ಕೈಹಿಡಿಯುವರು ಎಂಬುದನ್ನು ನೋಡಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.