ಬಿಹಾರದ ದರ್ಭಂಗಾ ಲೋಕಸಭಾ ಕ್ಷೇತ್ರವು ಈ ಬಾರಿ ಬಿಜೆಪಿ ಮತ್ತು ರಾಷ್ಟ್ರೀಯ ಜನತಾ ದಳದ (ಆರ್ಜೆಡಿ) ಪ್ರಬಲ ಅಭ್ಯರ್ಥಿಗಳ ನಡುವಿನ ನೇರ ಹಣಾಹಣಿಗೆ ಸಾಕ್ಷಿಯಾಗಲಿದೆ. ಕಳೆದ ಬಾರಿ ಇಲ್ಲಿಂದ ಗೆಲುವಿನ ನಗೆ ಬೀರಿದ್ದ ಗೋಪಾಲ್ ಜೀ ಠಾಕೂರ್ ಅವರನ್ನೇ ಬಿಜೆಪಿಯು ಕಣಕ್ಕಿಳಿಸಿದರೆ, ಆರ್ಜೆಡಿಯು ಲಲಿತ್ ಕುಮಾರ್ ಯಾದವ್ ಅವರನ್ನು ಸ್ಪರ್ಧಿಯಾಗಿಸಿದೆ. 2019ರ ಚುನಾವಣೆಯಲ್ಲಿ ಗೋಪಾಲ್ ಅವರು 2,67,979 ಮತಗಳ ಅಂತರದಿಂದ ಆರ್ಜೆಡಿಯ ಅಬ್ದುಲ್ ಬರಿ ಸಿದ್ದೀಕ್ ಅವರನ್ನು ಪರಾಭವಗೊಳಿಸಿದ್ದರು. ಲಲಿತ್ ಅವರು ದರ್ಭಂಗಾ ಗ್ರಾಮೀಣ ಕ್ಷೇತ್ರದ ಶಾಸಕರಾಗಿದ್ದಾರೆ. ಆರ್ಜೆಡಿಯು ‘ಇಂಡಿಯಾ’ ಒಕ್ಕೂಟದ ಜೊತೆಗಿರುವುದು ಲಲಿತ್ ಅವರ ಗೆಲ್ಲುವ ವಿಶ್ವಾಸವನ್ನು ಹೆಚ್ಚಿಸಿದೆ. ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರ ಜೆಡಿಯು ಮತ್ತೆ ಎನ್ಡಿಎ ಒಕ್ಕೂಟಕ್ಕೆ ಸೇರಿರುವುದರಿಂದ ಈ ಬಾರಿಯೂ ಗೋಪಾಲ್ ಅವರೇ ಗೆಲ್ಲುತ್ತಾರೆಂಬ ವಿಶ್ವಾಸ ಬಿಜೆಪಿ ಮುಖಂಡರಲ್ಲಿದೆ. ಮೊಹಮ್ಮದ್ ಶಮ್ಸ್ ತಬ್ರಿಜ್ ಎಂಬುವವರು ಈ ಕ್ಷೇತ್ರದಿಂದ ಪಕ್ಷೇತರರಾಗಿ ಸ್ಪರ್ಧಿಸುತ್ತಿದ್ದಾರೆ. ಮುಸ್ಲಿಂ ಪ್ರಾಬಲ್ಯವಿರುವ ಈ ಕ್ಷೇತ್ರದಿಂದ ತಬ್ರಿಜ್ ಅವರು ಸ್ಪರ್ಧಿಸುತ್ತಿರುವುದರಿಂದ ಆರ್ಜೆಡಿಯ ಮತಗಳು ವಿಭಜನೆಗೊಂಡು ಬಿಜೆಪಿ ಅಭ್ಯರ್ಥಿಗೆ ಅನುಕೂಲವಾಗಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.