ಅಮೀರ್ ಖಾನ್ ಅವರ‘ಲಾಲ್ ಸಿಂಗ್ ಚಡ್ಡಾ’ ಚಿತ್ರಮಂದಿರದಲ್ಲಿ ಅತ್ಯಂತ ನಿರಾಸೆ ಮೂಡಿಸಿತ್ತು. ಬಹುನಿರೀಕ್ಷಿತ ಚಿತ್ರ ₹100 ಕೋಟಿ ಗಳಿಸುವಲ್ಲಿಯೂ ವಿಫಲವಾಗಿತ್ತು. ಇದೀಗ ಚಿತ್ರ ನೆಟ್ಫ್ಲಿಕ್ಸ್ನಲ್ಲಿ ಬಿಡುಗಡೆಗೊಂಡಿದ್ದು, ಜಗತ್ತಿನ ಇಂಗ್ಲೀಷೇತರ ಸಿನಿಮಾಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

ಈ ತಿಂಗಳ ಮೊದಲು ನೆಟ್ಫ್ಲಿಕ್ಸ್ನಲ್ಲಿ ಚಿತ್ರ ಬಿಡುಗಡೆಗೊಂಡಿದ್ದು, ಪ್ರೇಕ್ಷಕರು ಸಿನಿಮಾ ಕುರಿತು ಉತ್ತಮ ಪ್ರತಿಕ್ರಿಯೆ ನೀಡುತ್ತಿದ್ದು ಸಿನಿಮಾಕ್ಕೊಂದು ಹೊಸ ಬದುಕು ಸಿಕ್ಕಂತಾಗಿದೆ. ಸದ್ಯ ನೆಟ್ಫ್ಲಿಕ್ಸ್ನ ಭಾರತೀಯ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ವಿಶ್ವದಲ್ಲಿ ಇಂಗ್ಲೀಷೇತರ ಸಿನಿಮಾ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ.

ಇದನ್ನೂ ಓದಿ:ಉತ್ತರ ಪ್ರದೇಶದಲ್ಲಿ ‘ಲಾಲ್ ಸಿಂಗ್ ಚಡ್ಡಾ’ ನಿಷೇಧಕ್ಕೆ ಹಿಂದೂ ಸಂಘಟನೆ ಆಗ್ರಹ

ಲಾಲ್ ಸಿಂಗ್ ಚಡ್ಡಾ 6.63 ದಶಲಕ್ಷ ಗಂಟೆ ಸ್ಟ್ರೀಮ್ ಆಗಿದೆ. ಭಾರತದಲ್ಲಿ ಮಾತ್ರವಲ್ಲದೆ, ಇತರ ದೇಶಗಳಲ್ಲಿಯೂ ಸಿನಿಮಾಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ವರ್ಷ ಚಿತ್ರಮಂದಿರದಲ್ಲಿ ವಿಫಲವಾದ ಬಹುತೇಕ ಬಾಲಿವುಡ್ ಚಿತ್ರಗಳಿಗೆ ಒಟಿಟಿಯಲ್ಲಿಯೂ ಮರುಜೀವ ಸಿಗಲಿಲ್ಲ. ಬಹುತೇಕರು ಸಿನಿಮಾ ಕೊನೆಯ ದೃಶ್ಯದ ಕುರಿತು ಟ್ವೀಟ್ ಮಾಡುತ್ತಿದ್ದಾರೆ. ‘ಸಿನಿಮಾದ ಕುರಿತಾದ ಎಲ್ಲ ತೀರ್ಮಾನಗಳ ನಡುವೆ ಲಾಲ್ ಸಿಂಗ್ ಚಡ್ಡಾವನ್ನು ವಿಶೇಷವಾಗಿಸಲು ಇದೊಂದು ದೃಶ್ಯ ಸಾಕು’ ಎಂದು ವೀಕ್ಷಕರು ಬರೆದುಕೊಂಡಿದ್ದಾರೆ.

ಆಸ್ಕರ್ ವಿಜೇತ ಸಿನಿಮಾ ಫಾರೆಸ್ಟ್ ಗಂಪ್ನ ರಿಮೇಕ್ ಸಿನಿಮಾವಿದು. ಆ.11ರಂದು ಬಿಡುಗಡೆಗೊಂಡ ಸಿನಿಮಾ ಸುಮಾರು₹88 ಕೋಟಿ ಗಳಿಸಿತ್ತು. ಅಮೀರ್ ಖಾನ್ ಸಿನಿಮಾ ಬಹಿಷ್ಕರಿಸಿ ಎಂಬ ಟ್ರೆಂಡ್ಗೆ ಈ ಸಿನಿಮಾ ಬಲಿಯಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.