ಕಿರುತೆರೆಯಲ್ಲಿ ಸಕ್ರಿಯರಾಗಿದ್ದ ನಟ ಸೃಜನ್ ಲೋಕೇಶ್ ಸಿನಿಮಾವೊಂದಕ್ಕೆ ಆ್ಯಕ್ಷನ್ ಕಟ್ ಹೇಳಲು ಸಜ್ಜಾಗುತ್ತಿದ್ದಾರೆ. ‘GST’ ಚಿತ್ರದ ಮೂಲಕ ನಿರ್ದೇಶಕನಾಗಿ ಹೆಜ್ಜೆ ಇಡಲಿರುವ ಸೃಜನ್, ನಾಯಕನಾಗಿಯೂ ಈ ಚಿತ್ರದಲ್ಲಿ ನಟಿಸಲಿದ್ದಾರೆ.

ಈ ಚಿತ್ರವನ್ನು ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ಲಾಂಛನದಲ್ಲಿ ಸಂದೇಶ್ ಎನ್. ನಿರ್ಮಾಣ ಮಾಡುತ್ತಿದ್ದು, ಇತ್ತೀಚೆಗೆ ಈ ಚಿತ್ರದ ಮುಹೂರ್ತ ನಡೆಯಿತು. ಮೊದಲ ದೃಶ್ಯಕ್ಕೆ ಸಂದೇಶ್ ನಾಗರಾಜ್ ಕ್ಲ್ಯಾಪ್ ಮಾಡಿದರು. ನಟಿ ಗಿರಿಜಾ ಲೋಕೇಶ್ ಕ್ಯಾಮೆರಾ ಚಾಲನೆ ಮಾಡಿದರು.

‘ನನ್ನ ಲಕ್ಕಿ ನಂಬರ್ 7. ನಿರ್ದೇಶನ ಆರಂಭಿಸುತ್ತಿರುವುದು 2023ರಲ್ಲಿ. ಇದನ್ನು ಕೂಡಿಸಿದಾಗ ಏಳು ಬರುತ್ತದೆ. ನನ್ನ ನಟನೆಯ 25ನೇ ಚಿತ್ರ. ಇಲ್ಲೂ ಏಳು. ಸಂದೇಶ್ ಪ್ರೊಡಕ್ಷನ್ಸ್ ನಿರ್ಮಾಣದ 34ನೇ ಚಿತ್ರವಿದು. ಇದೂ ಏಳಾಗುತ್ತದೆ. ನಮ್ಮ ತಾತನ ಚಿತ್ರದಲ್ಲಿ ನಮ್ಮ ಅಪ್ಪ ಬಾಲ ಕಲಾವಿದನಾಗಿ, ನಮ್ಮಪ್ಪನ ಚಿತ್ರದಲ್ಲಿ ನಾನು ಬಾಲ ಕಲಾವಿದನಾಗಿ ಅಭಿನಯಿಸಿದ್ದೆ. ಈಗ ನನ್ನ ಚಿತ್ರದಲ್ಲಿ ನನ್ನ ಮಗ ಸುಕೃತ್ ಬಾಲ ಕಲಾವಿದನಾಗಿ ನಟಿಸುತ್ತಿದ್ದಾನೆ–ಇದೂ ವಿಶೇಷವೇ. ಮತ್ತೊಂದು ವಿಶೇಷ ಎಂದರೆ ನನ್ನ ಮೊದಲ ನಿರ್ದೇಶನದ ಚಿತ್ರದಲ್ಲೇ ನನ್ನ ತಾಯಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದೇನೆ. ಚಿತ್ರಕ್ಕೆ ‘ಘೋಸ್ಟ್ ಇನ್ ಟ್ರಬಲ್’ ಎಂಬ ಅಡಿಬರಹವಿದೆ. ಎಂದರೆ ದೆವ್ವಗಳಿಗೂ ಸಮಸ್ಯೆಯಿದೆ. ಆ ಸಮಸ್ಯೆ ಏನು ಎಂಬುದನ್ನು ಚಿತ್ರದಲ್ಲೇ ನೋಡಬೇಕು. ಈ ಚಿತ್ರದಲ್ಲಿ ಮನರಂಜನೆಯ ಮಹಾಪೂರವೇ ಇದೆ’ ಎನ್ನುತ್ತಾರೆ ಸೃಜನ್.

ರಜನಿ ಭಾರದ್ವಾಜ್, ಗಿರಿಜಾ ಲೋಕೇಶ್, ಪ್ರಮೋದ್ ಶೆಟ್ಟಿ, ನಿವೇದಿತಾ, ತಬಲ ನಾಣಿ, ಅರವಿಂದ್ ರಾವ್, ರವಿಶಂಕರ್ ಗೌಡ, ವಿನೋದ್ ಗೊಬ್ಬರಗಾಲ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.