ಭಾನುವಾರ, 8 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬದಲಾದ ಹೇರ್‌ಸ್ಟೈಲ್‌ನೊಂದಿಗೆ ಅನಂತ್ ಅಂಬಾನಿ ಮದುವೆಯಲ್ಲಿ ಕಾಣಿಸಿಕೊಂಡ ನಟ ಯಶ್

ಮುಂಬೈನಲ್ಲಿ ಶುಕ್ರವಾರ ನಡೆದ ಅನಂತ್ ಅಂಬಾನಿ–ರಾಧಿಕಾ ಮರ್ಚಂಟ್ ವಿವಾಹ ಸಮಾರಂಭದಲ್ಲಿ ನಟ ಯಶ್ ಪಾಲ್ಗೊಂಡಿದ್ದರು.
Published 13 ಜುಲೈ 2024, 7:30 IST
Last Updated 13 ಜುಲೈ 2024, 7:30 IST
ಅಕ್ಷರ ಗಾತ್ರ

ಬೆಂಗಳೂರು: ಮುಂಬೈನಲ್ಲಿ ಶುಕ್ರವಾರ ನಡೆದ ಅನಂತ್ ಅಂಬಾನಿ–ರಾಧಿಕಾ ಮರ್ಚಂಟ್ ವಿವಾಹ ಸಮಾರಂಭದಲ್ಲಿ ನಟ ಯಶ್ ಪಾಲ್ಗೊಂಡಿದ್ದರು.

ಈ ವೇಳೆ ಅವರು ಮುಕೇಶ್ ಅಂಬಾನಿ ಪುತ್ರನ ಮದುವೆಯಲ್ಲಿ ಭಾಗಿಯಾದರು ಎಂಬುದಕ್ಕಿಂತ ಅವರ ಹೇರ್ ಸ್ಟೈಲ್ ಬದಲಾಗಿರುವುದೇ ದೊಡ್ಡ ಸುದ್ದಿಯಾಗಿದೆ.

ಹೌದು ಇಷ್ಟು ದಿನ ರಾಕಿಂಗ್ ಸ್ಟಾರ್ ಯಶ್ ಅವರು ಕೆಜಿಎಫ್‌ ಸಿನಿಮಾದ ರಾಕಿ ಬಾಯ್ ಹೇರ್ ಸ್ಟೈಲ್‌ನಲ್ಲಿ ಎಲ್ಲೆಡೆ ಮಿಂಚುತ್ತಿದ್ದರು. ಇದೀಗ ಅವರ ಹೇರ್ ಸ್ಟೈಲ್ ಬದಲಾವಣೆ ಆಗಿದ್ದು ಭಾರಿ ಗಮನ ಸೆಳೆದಿದೆ.

ತಮ್ಮ ಉದ್ದ ಕೂದಲೂ ಹಾಗೂ ಗಡ್ಡವನ್ನು ಟ್ರಿಮ್ ಮಾಡಿರುವ ಯಶ್ ಆಕರ್ಷಕ ನೋಟದೊಂದಿಗೆ ಮಿಂಚುತ್ತಿದ್ದಾರೆ.

ಇನ್ನು ಮದುವೆಯಲ್ಲಿ ಯಶ್ ಪತ್ನಿ ರಾಧಿಕಾ ಪಂಡಿತ್ ಅವರೂ ಸಹ ಭಾಗಿಯಾಗಿದ್ದರು. ಸದ್ಯ ಯಶ್ ಗೀತು ಮೋಹನದಾಸ್ ಅವರ ಟಾಕ್ಸಿಕ್ ಸಿನಿಮಾದಲ್ಲಿ ನಟಿಸುತ್ತಿದ್ದು ಈ ಸಿನಿಮಾಕ್ಕಾಗಿ ಹೇರ್ ಸ್ಟೈಲ್ ಬದಲಾವಣೆಯಾಗಿದೆ ಎನ್ನಲಾಗಿದೆ.

ಮುಂಬೈನಲ್ಲಿ ಯಶ್ ಜಾನ್ ಸೀನಾ ಅವರನ್ನೂ ಭೇಟಿಯಾಗಿದ್ದು ಜಾನ್ ಟಾಕ್ಸಿಕ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT