ಬೆಂಗಳೂರು: ಬಾಲಿವುಡ್‌ನಲ್ಲಿ ವಿವಾಗಳಿಂದಲೇ ಸುದ್ದಿಯಾಗಿರುವ ನಟಿ ಕಂಗನಾ ರನೌತ್ ಅವರ ಹೊಸ ಚಿತ್ರ ತೆರೆಗೆ ಬರಲು ಸಜ್ಜಾಗಿದೆ.

ಮಣಿಕರ್ಣಿಕಾ ಫಿಲಂಸ್ ನಿರ್ಮಾಣದ ಕಂಗನಾ ರನೌತ್ ನಿರ್ದೇಶನದ ‘ಎಮರ್ಜೆನ್ಸಿ‘ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಯಾಗಿದೆ.

ಈ ಚಿತ್ರದಲ್ಲಿ ನಟಿ ಕಂಗನಾ ರನೌತ್ ಅವರು ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಜೀವನಾಧಾರಿತ ಪಾತ್ರವನ್ನು ನಿರ್ವಹಿಸಲಿದ್ದಾರೆ.

1975ರ ಜೂನ್ 25ರಂದು ದೇಶದಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರು ತುರ್ತು ಪರಿಸ್ಥಿತಿ ಘೋಷಿಸಿದ್ದರು. 1977ರ ಮಾರ್ಚ್ 21ರವರೆಗೂ ತುರ್ತು ಪರಿಸ್ಥಿತಿ ಮುಂದುವರಿದಿತ್ತು.

ಆ ಕಾಲದ ಕಥೆಯನ್ನು ಒಳಗೊಂಡಿರುವ ಚಿತ್ರ ‘ಎಮರ್ಜೆನ್ಸಿ‘ಯಲ್ಲಿ ನಟಿ ಕಂಗನಾ ಅವರು ಇಂದಿರಾ ಗಾಂಧಿಯವರ ಪಾತ್ರ ನಿರ್ವಹಿಸುತ್ತಿದ್ದಾರೆ.

ಆರಾಮಾಗಿ ಇದ್ದೀನಿ.. ವೈರಲ್ ಆಯ್ತು ಪುನೀತ್ ರಾಜ್ಕುಮಾರ್ ಹಳೆಯ ಪೋಸ್ಟ್!

ಈ ಮೊದಲು ಕಂಗನಾ ಅವರು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜೆ. ಜಯಲಲಿತಾ ಅವರ ಜೀವನಾಧಾರಿತ ಚಿತ್ರ ‘ತಲೈವಿ‘ ಮತ್ತು ಝಾನ್ಸಿ ರಾಣಿ ಲಕ್ಷ್ಮೀಬಾಯಿ ಜೀವನಾಧಾರಿತ ಚಿತ್ರ ‘ಮಣಿಕರ್ಣಿಕಾ‘ದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು.

ಅನಾರೋಗ್ಯವಿದ್ದರೂ ಕೊನೆಯ ಶೋ ಮುಗಿಸಿದ ಗಾಯಕ ಕೆಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.