ಬೆಂಗಳೂರು: ಬಾಲಿವುಡ್ನ ಸಿನಿಮಾಗಳಿಗೆ ಒಂದೆಡೆ ಗಳಿಕೆಯಿಲ್ಲದ ಚಿಂತೆಯಾದರೆ, ಮತ್ತೊಂದೆಡೆ ಬಹಿಷ್ಕಾರದ ಬೆದರಿಕೆಯ ಕುರಿತು ಚಿಂತಿಸುವಂತಾಗಿದೆ.

ಅಮೀರ್ ಖಾನ್ ಅಭಿನಯದ ‘ಲಾಲ್ ಸಿಂಗ್ ಚಡ್ಡಾ‘ ಸಿನಿಮಾಗೆ ಬಹಿಷ್ಕಾರದ ಬಿಸಿ ತಟ್ಟಿದೆ. ಚಿತ್ರ ಬಿಡುಗಡೆಯಾಗಿ ಒಂದು ವಾರದಲ್ಲಿ ₹50 ಕೋಟಿ ಅಷ್ಟೇ ಗಳಿಕೆ ಕಂಡಿದೆ.

ಅದರ ಬೆನ್ನಲ್ಲೇ, ತಾಪ್ಸಿ ಪನ್ನು ಸಿನಿಮಾ ‘ದೊಬಾರ‘ಗೆ ಬಹಿಷ್ಕಾರದ ಬೆದರಿಕೆ ಬಂದಿದೆ.

ನಟಿ ತಾಪ್ಸಿ ಪನ್ನು ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ, ಜನರು ತಮ್ಮ ಸಿನಿಮಾ ನೋಡದಿದ್ದರೂ ಪರವಾಗಿಲ್ಲ ಎಂದು ಹೇಳಿದ್ದರು.

ಅಲ್ಲದೆ, ದೊಬಾರ ಸಿನಿಮಾ, 2018ರಲ್ಲಿ ಬಿಡುಗಡೆಯಾಗಿದ್ದ ಸ್ಪಾನಿಶ್ ಚಿತ್ರ ‘ಮಿರಾಜ್‘ನ ರಿಮೇಕ್ ಎನ್ನಲಾಗಿದೆ.

ಬಾಲಿವುಡ್: ಶಾರುಖ್, ಹೃತಿಕ್, ಅಕ್ಷಯ್ ಚಿತ್ರಗಳಿಗೆ ‘ಬಾಯ್ಕಾಟ್‘ ಬಿಸಿ ಯಾಕೆ?

ಜತೆಗೆ, ಚಿತ್ರದ ಪ್ರಚಾರ ಸಂದರ್ಭದಲ್ಲಿ ಅನುರಾಗ್ ಕಶ್ಯಪ್ ಮತ್ತು ತಾಪ್ಸಿ ಪನ್ನು ನೀಡಿರುವ ಕೆಲವೊಂದು ಹೇಳಿಕೆ ಕೂಡ ವಿವಾದ ಸೃಷ್ಟಿಸಿದ್ದು, ಚಿತ್ರಕ್ಕೆ ಬಹಿಷ್ಕಾರದ ಬಿಸಿ ತಟ್ಟುವ ಸಾಧ್ಯತೆಯಿದೆ.

‘ಲಾಲ್ ಸಿಂಗ್ ಚಡ್ಡಾ’ ಸುಂದರ ಸಿನಿಮಾ: ಚಿತ್ರ ನೋಡಲು ಹೃತಿಕ್ ರೋಷನ್ ಮನವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.