ನವದೆಹಲಿ: ಕಾನ್ ಚಿತ್ರೋತ್ಸವದಲ್ಲಿ ಕಪ್ಪು ಬಣ್ಣದ ಗೌನ್ ತೊಟ್ಟು ಐಶ್ವರ್ಯಾ ರೈ ಬಚ್ಚನ್ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ್ದು ಎಲ್ಲರ ಗಮನ ಸೆಳೆದಿದೆ.

ನಿರ್ದೇಶಕ ಫ್ರಾನ್ಸಿಸ್ ಫೋರ್ಡ್ ಕೊಪ್ಪೊಲಾ ಅವರ ‘ಮೆಗಾಲೊಪೊಲಿಸ್’ ಚಿತ್ರದ ಪ್ರೀಮಿಯರ್ ಪ್ರದರ್ಶನಕ್ಕಾಗಿ ಐಶ್ವರ್ಯಾ ಭಾಗವಹಿಸಿದ್ದರು. ಒಂದು ಕೈಗೆ ಪೆಟ್ಟಾಗಿದ್ದರೂ ಬ್ಯಾಂಡೇಜ್ ಸುತ್ತಿಕೊಂಡೇ ಐಶ್ವರ್ಯಾ ಚಿತ್ರೋತ್ಸವದಲ್ಲಿ ಭಾಗವಹಿಸಿದ್ದರು.

ಐಶ್ವರ್ಯಾ ಅವರು ಧರಿಸಿದ್ದ 3D ಮೆಟಾಲಿಕ್ ಅಂಶಗಳು ಮತ್ತು ಗೋಲ್ಡನ್ ಆಕ್ಸೆಂಟ್ಗಳಿಂದ ತುಂಬಿದ ಉಡುಪನ್ನು ವಸ್ತ್ರ ವಿನ್ಯಾಸಕಾರರಾದ ಫಲ್ಗುಣಿ ಮತ್ತು ಶೇನ್ ಪೀಕಾಕ್ ವಿನ್ಯಾಸಗೊಳಿಸಿದ್ದಾರೆ.

ಕಳೆದ ಎರಡು ದಶಕಗಳಿಂದ ಕಾನ್ ಚಲನಚಿತ್ರೋತ್ಸವದಲ್ಲಿ ಐಶ್ವರ್ಯಾ ಭಾಗಿಯಾಗುತ್ತಿದ್ದಾರೆ. ಈ ಬಾರಿ ಐಶ್ವರ್ಯಾ ಮಗಳು ಆರಾಧ್ಯ ಕೂಡ ಆಗಮಿಸಿದ್ದರು.

ಕಾನ್ ಚಿತ್ರೋತ್ಸವದಲ್ಲಿ ಕಿಯಾರಾ ಅಡ್ವಾಣಿ, ಊರ್ವಶಿ ರೌಟೆಲಾ, ಅದಿತಿ ರಾವ್ ಹೈದರಿ ಸೇರಿದಂತೆ ಹಲವು ಸೆಲಿಬ್ರಿಟಿಗಳು ಪಾಲ್ಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.