ಬೆಂಗಳೂರು : ನಟ ಸುದೀಪ್ ನಟನೆಯ ‘ಕೋಟಿಗೊಬ್ಬ–3’ ಸಿನಿಮಾದ ಟೈಟಲ್ ಹಾಡು ಸೋಮವಾರ ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದೆ. ಈ ಬಗ್ಗೆ ಪೋಸ್ಟ್ ಹಾಕಿದ ಆನಂದ್ ಆಡಿಯೋ ವಿರುದ್ಧ ದರ್ಶನ್ ಅಭಿಮಾನಿಗಳು ಸಾಮಾಜಿಕ ತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

‘ಆಕಾಶನೆ ಅದರಿಸುವ’ಹಾಡು ಅತೀ ವೇಗವಾಗಿ 10 ಲಕ್ಷ ವೀಕ್ಷಣೆಗಳನ್ನು ಪಡೆದಿದೆ ಎಂದು ಆನಂದ್ ಆಡಿಯೋ ಸೋಮವಾರ ಫೇಸ್‌ಬುಕ್‌ನಲ್ಲಿ ಪೋಸ್ಟ್ ಪ್ರಕಟಿಸಿತು. ಇದರಿಂದ ಕೆಂಡಾಮಂಡಲರಾದ ದರ್ಶನ್ ಅಭಿಮಾನಿಗಳು ‘ಅತಿವೇಗವಾಗಿ 10 ಲಕ್ಷ ವೀಕ್ಷಣೆ ಪಡೆದ ಹಾಡು ಇದಲ್ಲ. ದರ್ಶನ್ ಅಭಿನಯದ ಯಜಮಾನ ಚಿತ್ರದ ‘ಶಿವನಂದಿ’ ಸಾಹಿತ್ಯದ ಹಾಡು ಅತಿ ವೇಗವಾಗಿ ಹೆಚ್ಚಿನ ವೀಕ್ಷಣೆ ಪಡೆದಿದೆ. ಇದು ಸಾರ್ವಕಾಲಿಕ ದಾಖಲೆ,’ ಎಂದು ಕಮೆಂಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಂಗೀತ ನಿರ್ದೇಶಕ ಅರ್ಜುನ್ ಜನ್ಯಾ ಅವರಿಂದ ಮೂಡಿ ಬಂದಿರುವ ‘ಆಕಾಶನೆ ಅಧಿರಿಸುವ’ ಎಂಬ ಹಾಡನ್ನು ಆನಂದ್ ಆಡಿಯೊ ತನ್ನ ಯೂಟ್ಯೂಬ್ ಚಾನೆಲ್‌ನಲ್ಲಿ ಸೋಮವಾರ ಬಿಡುಗಡೆ ಮಾಡಿದೆ. ಈ ಹಾಡು ಬಿಡುಗಡೆಯಾದ 3 ಗಂಟೆ 20 ನಿಮಿಷಗಳಲ್ಲಿ 10 ಲಕ್ಷ ವೀಕ್ಷಣೆ ಪಡೆದಿದೆ ಎಂದು ಆನಂದ್ ಆಡಿಯೊ ಹೇಳಿಕೊಂಡಿದೆ.

‘ಆಕಾಶ ಅದರಿಸುವ’ ಮತ್ತು ‘ಶಿವನಂದಿ’ ಹಾಡಿಗೆ ಸಂಬಂಧಿಸಿದಂತೆ ಸುದೀಪ್ ಮತ್ತು ದರ್ಶನ್ ಅಭಿಮಾನಿಗಳ ನಡುವೆ ಜಟಾಪಟಿಯನ್ನೂ ಸೃಷ್ಟಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.