ಚಂದನವನದ ಚೆಂದದ ನಟಿ ಶ್ವೇತಾ ಶ್ರೀವಾತ್ಸವ್. ಇವರು ನಟಿಸಿರುವ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’, ‘ಕಿರಗೂರಿನ ಗಯ್ಯಾಳಿಗಳು’ ಸೂಪರ್ಹಿಟ್ ಎನಿಸಿಕೊಂಡಿವೆ. ಪರಿಪಕ್ವ ಅಭಿನಯದಿಂದ ಸಿನಿರಸಿಕರ ಗಮನ ಸೆಳೆದಿದ್ದ ನಟಿ ಶ್ವೇತಾ ಈಗ ಲೇಖಕಿಯಾಗಿಯೂ ಗುರುತಿಸಿಕೊಂಡಿದ್ದಾರೆ.

ಚಲನಚಿತ್ರೋದ್ಯಮದಲ್ಲಿ ವಿವಾಹಿತ ಮಹಿಳೆಯಾಗಿ ಅಭೂತಪೂರ್ವ ಪ್ರವೇಶ ಹಾಗೂ ಪಯಣ ಎಂಬ ವಿಷಯ ಇರಿಸಿಕೊಂಡು ‘ರೆಕ್ಕೆ ಇದ್ದರೆ ಸಾಕೆ’ ಎಂಬ ಪುಸ್ತಕವನ್ನೂ ಬರೆದಿದ್ದಾರೆ. ಎರಡು ದಶಕಗಳ ಸಿನಿಜರ್ನಿಯ ಅನುಭವಗಳನ್ನು ಇದರಲ್ಲಿ ದಾಖಲಿಸಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ಪುಸ್ತಕ
ಪ್ರಕಟಗೊಂಡಿದ್ದು, ಇದು 15 ದೇಶಗಳಲ್ಲಿ ಬಿಡುಗಡೆಯಾಗಿದೆ.

ಸಂಸ್ಕೃತಿ, ಸಂಪ್ರದಾಯಗಳನ್ನು ಇಷ್ಟಪಡುವ, ಅವುಗಳ ಆಚರಣೆಯನ್ನು ಮುಂದುವರಿಸಿಕೊಂಡು ಬಂದಿರುವ ನಟಿ ಶ್ವೇತಾ ದೀಪಾವಳಿ ಹಬ್ಬವನ್ನು ಆಚರಿಸುವ ಬಗೆ ಹೇಳಿಕೊಂಡಿದ್ದಾರೆ.

ಯಾವುದೇ ಹಬ್ಬ ಬಂದರೂ ನಮಗೆ ತುಂಬ ಸ್ಪೆಷಲ್. ಅದರಲ್ಲೂ ದೀಪಾವಳಿಯನ್ನು ಸಡಗರದಿಂದ ಆಚರಿಸುತ್ತೇವೆ. ಮನೆಯಲ್ಲಿ ಹೆಣ್ಣುಮಕ್ಕಳು ಇರುವಾಗ ಅಲಂಕಾರ ಮುಖ್ಯ. ಹಬ್ಬಕ್ಕೆ ಚೆಂದವಾಗಿ ರೆಡಿ ಆಗುವುದೇ ಹೆಚ್ಚು ಖುಷಿ ಕೊಡುತ್ತದೆ.

ಹಬ್ಬದ ದಿನ ಬೆಳಿಗ್ಗೆ ಬೇಗ ಎದ್ದು ಎಣ್ಣೆ ಸ್ನಾನ ಮಾಡುವುದು ಕಡ್ಡಾಯ. ಹಬ್ಬಕ್ಕೆ ಕಜ್ಜಾಯವಂತೂ ಇದ್ದೇ ಇರುತ್ತದೆ. ಹೊಸಬಟ್ಟೆ, ಬಾಳೆಎಲೆ ಊಟ ನೆನಪಿಸಿಕೊಂಡರೆ ಪುಳಕ ನೀಡುತ್ತದೆ.

ಮಕ್ಕಳಿರುವ ಮನೆಯಲ್ಲಿ ಪಟಾಕಿ ಹೊಡೆಯುವ ಸಂಭ್ರಮವೇ ಬೇರೆ. ಪಟಾಕಿ ಇಲ್ಲದೇ ಹಬ್ಬದ ಆಚರಣೆ ಪೂರ್ಣ ಅನಿಸುವುದಿಲ್ಲ. ದೀಪಾವಳಿಯಲ್ಲಿ ಸುರ್ಸುರ್ ಬತ್ತಿ, ಭೂಚಕ್ರವನ್ನಾದರೂ ಹಚ್ಚಬೇಕು. ದೊಡ್ಡ ಸದ್ದು ಮಾಡುವ ಪಟಾಕಿ ಹಚ್ಚಲು ಇಷ್ಟವಿಲ್ಲ. ಅಂತಹ ಪಟಾಕಿಗಳನ್ನು ಹಚ್ಚುವವರು ಪರಿಸರದ ಬಗ್ಗೆಯೂ ಯೋಚಿಸಬೇಕು. ಪ್ರಾಣಿ, ಪಕ್ಷಿಗಳ ಬಗ್ಗೆ ಕಾಳಜಿ ಮಾಡಬೇಕು.

ಈಗ ಸೋಷಿಯಲ್ ಮೀಡಿಯಾ ಎಂಬುದು ಎಲ್ಲರ ಜೀವನದಲ್ಲಿ ಹಾಸುಹೊಕ್ಕಾಗಿದೆ. ನಮ್ಮ ಮನೆಯಲ್ಲಿ ಮಾಡಿದ ಹಬ್ಬದ ಸಂಭ್ರಮಾಚರಣೆಯ ಫೋಟೊಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತೇನೆ. ಈ ಮೂಲಕ ಸೋಷಿಯಲ್ ಮೀಡಿಯಾ ಸ್ನೇಹಿತರ ಜತೆಗೂ ಹಬ್ಬವನ್ನು ಸಂಭ್ರಮಿಸುತ್ತೇನೆ ಎಂದು ಅವರು ಹಬ್ಬದ ಖುಷಿಯನ್ನು ಮೆಲುಕು ಹಾಕಿದರು.

ಕರಾವಳಿ ಚೆಲುವೆಯ ದೀಪಾವಳಿ ನೆನಪು

‘ರಾಮಧಾನ್ಯ’ ಸಿನಿಮಾದಲ್ಲಿ ಐತಿಹಾಸಿಕ ಪಾತ್ರಕ್ಕೆ ಬಣ್ಣ ಹಚ್ಚಿ ಸಿನಿರಸಿಕರ ಮನ ಗೆದ್ದವರು ನಟಿ ನಿಮಿಕಾ ರತ್ನಾಕರ್. ಚಿತ್ರರಂಗಕ್ಕೆ ಕಾಲಿಡುವ ಮುನ್ನ ಮಾಡೆಲಿಂಗ್ನಲ್ಲಿ ಮಿಂಚು ಹರಿಸಿದವರು.

ಫ್ಯಾಷನ್ ಕ್ಷೇತ್ರವನ್ನೇ ಚಿಮ್ಮುಹಲಗೆಯಾಗಿಸಿಕೊಂಡು ಚಿತ್ರರಂಗಕ್ಕೆ ಜಿಗಿದ ನಿಮಿಕಾ, ಚಿತ್ರೋದ್ಯಮಕ್ಕೆ ಕಾಲಿಟ್ಟ ಚಿಕ್ಕ ಸಮಯದಲ್ಲೇ ದೊಡ್ಡ ನಟರೊಂದಿಗೆ ನಟಿಸುವ ಅದೃಷ್ಟ ಪಡೆದುಕೊಂಡವರು. ಸದ್ಯಕ್ಕೆ ಓಂಪ್ರಕಾಶ್ರಾವ್ ನಿರ್ದೇಶನದ ಮಹಿಳಾ ಪ್ರಧಾನ ಚಿತ್ರ ‘ಫಿನಿಕ್ಸ್’ ಸಿನಿಮಾದಲ್ಲಿ ಲೀಡ್ ರೋಲ್ ನಿರ್ವಹಿಸುತ್ತಿದ್ದಾರೆ.

ಫ್ಯಾಷನ್ ಮತ್ತು ಟ್ರಡೀಷನಲ್ ಎರಡು ಬಗೆಯ ಪಾತ್ರ ನಿರ್ವಹಣೆಗೆ ಹೊಂದಿಕೊಳ್ಳುವ ಕರಾವಳಿ ಚೆಲುವೆಗೆ ದೀಪಾವಳಿ ಅಂದರೆ ಬಾಲ್ಯ ನೆನಪಾಗುತ್ತದೆ
ಯಂತೆ. ಬೆಳಕಿನ ಹಬ್ಬದ ಸಂಭ್ರಮವನ್ನು ಅವರು ನೆನಪಿಸಿಕೊಳ್ಳುವುದು ಹೀಗೆ...

‘ದೀಪಾವಳಿ ನನಗೆ ಒಂದು ರೀತಿಯ ರೋಮಾಂಚನಕಾರಿ ಅನುಭವ ನೀಡುವ ಹಬ್ಬ. ಹಬ್ಬದ ದಿನ ಬೆಳಿಗ್ಗೆ ಬೇಗ ಎದ್ದು ಎಣ್ಣೆ ಸ್ನಾನ ಮಾಡಿ ದೇವರಿಗೆ ಪೂಜೆ ಮಾಡುವುದೇ ಒಂದು ಸಡಗರ. ಮನೆ ಮುಂದೆ ರಂಗೋಲಿ ಬಿಡುವುದು, ರಾತ್ರಿ ವೇಳೆ ದೀಪ ಹಚ್ಚುವುದು ತುಂಬ ಖುಷಿ ಕೊಡುತ್ತದೆ.

‘ಕರಾವಳಿ ಭಾಗದಲ್ಲಿ ದೀಪಾವಳಿ ಹಬ್ಬದಂದು ಅವಲಕ್ಕಿ, ಬೆಲ್ಲ, ಕಾಯಿ ಹಾಕಿ ತಯಾರಿಸಿದ ತಿನಿಸು ಮಾಡಲಾಗುತ್ತದೆ. ಮಧ್ಯಾಹ್ನ ಪಾಯಸ, ಹೋಳಿಗೆ ಸೇರಿದಂತೆ ವಿವಿಧ ತಿನಿಸುಗಳ ಹಬ್ಬದೂಟ ಮಾಡುತ್ತೇವೆ.

‘ಎಲ್ಲಕ್ಕಿಂತ ಹೆಚ್ಚಾಗಿ ಅಪ್ಪ ತಂದು ಕೊಟ್ಟ ಪಟಾಕಿ
ಗಳನ್ನೆಲ್ಲ ಸಿಡಿಸಿ, ಪಕ್ಕದ ಮನೆಗಳಿಗೂ ಹೋಗಿ ಸ್ನೇಹಿತರ ಜತೆಗೂಡಿ ಅಲ್ಲೂ ಪಟಾಕಿ ಹಚ್ಚುತ್ತಿದ್ದೆವು. ಈಗಲೂ ಸುರ್ಸುರ್ಬತ್ತಿ, ವಿಷ್ಣುಚಕ್ರ ಹಚ್ಚಿ ಖುಷಿ ಪಡುತ್ತೇನೆ. ಸ್ನೇಹಿತರು, ಆಪ್ತರೊಂದಿಗೆ ಊಟ ಮಾಡಿ ಖುಷಿ ಪಡುತ್ತೇನೆ’ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.