ಬೆಂಗಳೂರು: ನಟ ಧನಂಜಯ್ ತಮ್ಮ ಅಭಿಮಾನಿಗಳಿಂದ ಹಣ ಸಂಗ್ರಹಿಸಿ, ಕೇರಳ– ಕೊಡಗು ಸಂತ್ರಸ್ತರಿಗೆ ನೆರವಾಗಲು ಸ್ಥಾಪಿಸಿರುವ ‘ಡೆಕ್ಕನ್ ಹೆರಾಲ್ಡ್– ಪ್ರಜಾವಾಣಿ ರಿಲೀಫ್ ಟ್ರಸ್ಟ್’ಗೆಅದನ್ನು ನೀಡಿದ್ದಾರೆ.ಶುಕ್ರವಾರ ಟ್ರಸ್ಟ್ಗೆ ₹ 50,000 ವರ್ಗಾಯಿಸಿದ್ದಾರೆ.

‘ಆಗಸ್ಟ್ 23ರಂದು ನನ್ನ ಜನ್ಮದಿನವಿತ್ತು. ಅದಕ್ಕೆ ಒಂದು ದಿನ ಮೊದಲು ಸಾಮಾಜಿಕ ಜಾಲತಾಣಗಳಲ್ಲಿ ಒಂದು ವಿಡಿಯೊ ಬಿಡುಗಡೆ ಮಾಡಿ ನನ್ನ ಹುಟ್ಟುಹಬ್ಬಕ್ಕೆ ಶುಭಕೋರಲು ನೀವು, ಹೂವು, ಹಣ್ಣು, ಕೇಕ್ಗಳಿಗೆ ಹಣ ವ್ಯಯಿಸುವ ಬದಲು ಆ ಹಣವನ್ನು ನನಗೆ ನೀಡಿ. ನಾವು ಕೊಡಗಿನಲ್ಲಿ ಪ್ರಕೃತಿ ವಿಕೋಪದಿಂದ ಸಂಕಟಪಡುತ್ತಿರುವವರಿಗೆ ನೆರವಾಗೋಣ ಎಂದು ಅಭಿಮಾನಿಗಳಲ್ಲಿ ಕೇಳಿಕೊಂಡಿದ್ದೆ. ಹುಟ್ಟುಹಬ್ಬಕ್ಕೆ ಶುಭಕೋರಲು ಬಂದು ಸೆಲ್ಫಿ ತೆಗೆದುಕೊಂಡವರ ಬಳಿಯೆಲ್ಲ ಕೇಳಿ ಹಣ ಸಂಗ್ರಹಿಸಿದ್ದೇನೆ. ಹಣ ನೀಡುವುದೇನೂ ಕಡ್ಡಾಯ ಆಗಿರಲಿಲ್ಲ. ಆದರೆ ಸಾಕಷ್ಟು ಜನರು ಸ್ವಯಂಪ್ರೇರಿತರಾಗಿ ತಮ್ಮ ಕೈಲಾದಷ್ಟು ಹಣ ನೀಡಿ ನೆರವಾಗಿದ್ದಾರೆ. ಐದು, ಹತ್ತು ರೂಪಾಯಿಗಳಿಂದ ಹಿಡಿದು ಎರಡು ಸಾವಿರ ರೂಪಾಯಿ ತನಕ ಸಹಾಯ ಮಾಡಿದ್ದಾರೆ. ಅದು ₹12,740ರಷ್ಟಿದೆ. ಅದಕ್ಕೆ ಇನ್ನೊಂದಿಷ್ಟು ಹಣ ಸೇರಿಸಿ ಕೊಡಗಿನ ಸಂತ್ರಸ್ತರಿಗೆ ನೀಡುತ್ತಿದ್ದೇನೆ’ ಎಂದು ಅವರು ತಿಳಿಸಿದರು.

‘ಪಕ್ಕದ ಮನೆಯವರು– ನಮ್ಮವರು ಸಂಕಷ್ಟದಲ್ಲಿರುವಾಗ ನಾವು ಸಂಭ್ರಮಾಚರಣೆ ಮಾಡಲು ಮನಸ್ಸು ಹೇಗೆ ಬರುತ್ತದೆ? ಕೇರಳ– ಕೊಡಗಿನ ದುರಂತದ ದೃಶ್ಯಾವಳಿಯನ್ನುಟಿ.ವಿ.ಗಳಲ್ಲಿ ನೋಡಿ ತುಂಬಾ ನೋವಾಗಿದೆ. ಅವರಿಗೆ ನನ್ನ ಕೈಲಾದಷ್ಟು ಮಟ್ಟಿಗೆ ನೆರವಾಗುವುದು ನನ್ನ ಕರ್ತವ್ಯ ಎನಿಸಿದೆ. ಆ ಕರ್ತವ್ಯವನ್ನು ನಿರ್ವಹಿಸುತ್ತಿದ್ದೇನೆ’ ಎಂದೂ ಅವರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.