ಹಿರಿಯ ನಟ ಹಾಗೂ ನಿರ್ಮಾಪಕ ದ್ವಾರಕೀಶ್ ಅವರು ತಮ್ಮ ಚಿತ್ರ ನಿರ್ಮಾಣ ಸಂಸ್ಥೆ ಆರಂಭಿಸಿ ಐವತ್ತು ವರ್ಷಗಳು ಸಂದಿವೆ. ಐವತ್ತು ವರ್ಷಗಳ ಹಿಂದೆ ಅವರು ನಿರ್ಮಾಣ ಮಾಡಿದ ಮೊದಲ ಚಿತ್ರ ಡಾ.ರಾಜ್‌ಕುಮಾರ್ ಅಭಿನಯದ ‘ಮೇಯರ್ ಮುತ್ತಣ್ಣ’.

ತಮ್ಮ ನಿರ್ಮಾಣ ಸಂಸ್ಥೆಗೆ ಐವತ್ತು ವರ್ಷ ತುಂಬುತ್ತಿರುವ ಹೊತ್ತಿನಲ್ಲಿ ದ್ವಾರಕೀಶ್ ಅವರು ನಿರ್ಮಿಸುತ್ತಿರುವ ಸಿನಿಮಾ ‘ಆಯುಷ್ಮಾನ್ ಭವ’. ಇದರಲ್ಲಿ ನಾಯಕನಾಗಿ ನಟಿಸುತ್ತಿರುವವರು ಡಾ.ರಾಜ್ ಅವರ ಪುತ್ರ ಶಿವರಾಜ್ ಕುಮಾರ್... ಇಷ್ಟೆಲ್ಲ ವಿಚಾರಗಳನ್ನು ನೆನಪಿಸಿಕೊಂಡು, ಹೇಳಿದ್ದು ದ್ವಾರಕೀಶ್.‘ಆಯುಷ್ಮಾನ್ ಭವ’ ಚಿತ್ರಕ್ಕೆ ಸಂಬಂಧಿಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದ್ವಾರಕೀಶ್, ‘ಐವತ್ತು ವರ್ಷಗಳಿಂದ ಸತತವಾಗಿ ಚಿತ್ರ ನಿರ್ಮಾಣದಲ್ಲಿ ತೊಡಗಿರುವ ಸಂಸ್ಥೆಗಳು ದೇಶದಲ್ಲಿ ಕೆಲವು ಮಾತ್ರ. ಅದರಲ್ಲಿ ನಮ್ಮದೂ ಒಂದು’ ಎಂದರು.

ಇಪ್ಪತ್ತು ವರ್ಷಗಳ ಆಲೋಚನೆ

ದ್ವಾರಕೀಶ್ ನಿರ್ಮಾಣದಲ್ಲಿ ಶಿವಣ್ಣ ಅಭಿನಯದ ಸಿನಿಮಾ ಮಾಡಬೇಕು ಎಂಬುದು ಇಪ್ಪತ್ತು ವರ್ಷಗಳಿಂದ ಇದ್ದ ಆಲೋಚನೆಯಂತೆ. ಇದನ್ನು ತಿಳಿಸಿದ್ದು ದ್ವಾರಕೀಶ್ ಅವರ ಮಗ ಯೋಗಿ.‘ನಾವು ನಿರ್ಮಾಣ ಮಾಡಿದ ಅಮ್ಮ ಐ ಲವ್ ಯೂ ಸಿನಿಮಾ ಅಷ್ಟೇನೂ ಯಶಸ್ಸು ಕಾಣಲಿಲ್ಲ. ಆ ಸಂದರ್ಭದಲ್ಲಿ ಶಿವಣ್ಣ ಅವರನ್ನು ಭೇಟಿ ಮಾಡಿದೆ. ಅವರು ನಾವೊಂದು ಸಿನಿಮಾ ಮಾಡೋಣ ಎಂದರು. ಅದರ ಪರಿಣಾಮವಾಗಿ ಮೂಡಿಬಂದಿದೆ ಆಯುಷ್ಮಾನ್ ಭವ’ ಎಂದರು ಯೋಗಿ. ನಿಧಿ ಸುಬ್ಬಯ್ಯ ಮತ್ತು ರಚಿತಾ ರಾಮ್ ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರ ನ. 1ರಂದು ತೆರೆಗೆ ಬರುವ ನಿರೀಕ್ಷೆ ಇದೆ.

ಭಾವನೆ, ಪಯಣ

ಸುದ್ದಿಗೋಷ್ಠಿಯ ಕೇಂದ್ರಬಿಂದು ಶಿವಣ್ಣ. ಆದರೆ, ಅವರು ಮಾತನಾಡಿದ್ದು ಮಾತ್ರ ಕೊನೆಯಲ್ಲಿ. ‘ದ್ವಾರಕೀಶ್ ಸಿನಿಮಾ ಸಂಸ್ಥೆಯ ಜೊತೆ ಕೆಲಸ ಮಾಡುತ್ತಿರುವುದು ಸಂತಸ ತಂದಿದೆ’ ಎನ್ನುತ್ತ ಮಾತು ಆರಂಭಿಸಿದರು.‘ಮನುಷ್ಯನ ಜೀವನವೇ ಒಂದು ಪಯಣ. ಅದಕ್ಕೆ ಆಯಸ್ಸು ಬಹಳ ಮುಖ್ಯವಾಗುತ್ತದೆ. ಈ ಚಿತ್ರದಲ್ಲಿ ನಿರ್ದೇಶಕ ಪಿ. ವಾಸು ಅವರು ಪ್ರತಿ ಪಾತ್ರಕ್ಕೂ ಸೂಕ್ತ ಆದ್ಯತೆ ನೀಡಿದ್ದಾರೆ. ಈ ಚಿತ್ರ ಒಂದು ಪಯಣಕ್ಕೆ ಸಂಬಂಧಿಸಿದ್ದು. ಆ ಪಯಣದಲ್ಲಿ ಭಾವನೆಗಳು ಮಿಳಿತವಾಗಿವೆ. ಸಂಗೀತವು ಚಿತ್ರದಲ್ಲಿ ಬಹಳ ಪ್ರಮುಖ ಪಾತ್ರವಹಿಸುತ್ತದೆ ಎಂದರು.

‘ನಾನು ಸಂಗೀತ ನಿರ್ದೇಶನ ಮಾಡಿದ 50ನೆಯ ಸಿನಿಮಾ ಸತ್ಯ ಇನ್ ಲವ್. ಅದರಲ್ಲಿ ಶಿವಣ್ಣ ನಟಿಸಿದ್ದರು. ಆಯುಷ್ಮಾನ್ ಭವ ನನಗೆ ನೂರನೆಯ ಚಿತ್ರ. ಇದರಲ್ಲೂ ಶಿವಣ್ಣ ಇದ್ದಾರೆ. ಇದು ನನ್ನ ಅದೃಷ್ಟ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.