‘ಅಗ್ನಿಸಾಕ್ಷಿ’, ‘ನಾಗಿಣಿ’ ಧಾರಾವಾಹಿಗಳ ನಿರ್ದೇಶಕ ಹಯವದನ ಆ್ಯಕ್ಷನ್ ಕಟ್ ಹೇಳಿರುವ ಚೊಚ್ಚಲ ಸಿನಿಮಾ ‘ಎಲ್ಲೋ ಜೋಗಪ್ಪ ನಿನ್ನರಮನೆ’ ಬಿಡುಗಡೆಗೆ ಸಜ್ಜಾಗುತ್ತಿದೆ. ಇತ್ತೀಚೆಗೆ ಸಿನಿಮಾದ ‘ಜಾಣಮರಿ’ ಎಂಬ ಹಾಡು ಬಿಡುಗಡೆಯಾಗಿದೆ.

ಹಾಡಿಗೆ ಪ್ರಮೋದ್ ಮರವಂತೆ ಸಾಹಿತ್ಯವಿದ್ದು, ರಕ್ಷಿತಾ ಸುರೇಶ್ ಹಾಗೂ ವಿಶಾಖ್ ನಾಗಲಾಪುರ ಧ್ವನಿಯಾಗಿದ್ದಾರೆ. ಶಿಯೋಮ್ ಈ ಹಾಡಿಗೆ ಸಂಗೀತ ನಿರ್ದೇಶನ ಮಾಡಿದ್ದಾರೆ. ಹಾಡಿನಲ್ಲಿ ನಾಯಕ ಅಂಜನ್ ನಾಗೇಂದ್ರ ಹಾಗೂ ನಾಯಕಿ ವೆನ್ಯಾ ರೈ ಹೆಜ್ಜೆ ಹಾಕಿದ್ದು, ಕನ್ನಡ ಹುಡುಗನಾಗಿ ಅಂಜನ್ ಪಾತ್ರವಿದ್ದರೆ, ವೆನ್ಯಾ ರೈ ಮರಾಠಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ಮಹಾರಾಷ್ಟ್ರದ ಪಂಢರಪುರದಲ್ಲಿ ಇಡೀ ಹಾಡಿನ ಚಿತ್ರೀಕರಣ ನಡೆದಿದೆ. ನಾಯಕ ಹಾಗೂ ನಾಯಕಿ ನಡುವಿನ ಪ್ರೇಮಗೀತೆ ಇದಾಗಿದೆ. ಚಿತ್ರದಲ್ಲಿ ಸಂಜನಾ ದಾಸ್ ಕೂಡ ಒಂದು ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಬಿರಾದಾರ್, ಶರತ್ ಲೋಹಿತಾಶ್ವ, ದಾನಪ್ಪ, ಸ್ವಾತಿ, ದಿನೇಶ್ ಮಂಗಳೂರು, ಲಕ್ಷ್ಮೀ ನಾಡಗೌಡ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

ಚಿತ್ರಕ್ಕೆ ಶಿವಪ್ರಸಾದ್ ಸಂಗೀತ, ನಟರಾಜ್ ಮದ್ದಾಲ ಛಾಯಾಚಿತ್ರಗ್ರಹಣ, ರವಿಚಂದ್ರನ್ ಸಂಕಲನವಿದೆ. ‘ಪೆಂಡೋರಾಸ್ ಬಾಕ್ಸ್ ಪ್ರೊಡಕ್ಷನ್’ ಮತ್ತು ‘ಕೃಷ್ಣಛಾಯಾ ಚಿತ್ರ’ ಬ್ಯಾನರ್ ಮೂಲಕ ಪವನ್ ಸಿಮಿಕೇರಿ ಹಾಗೂ ಸಿಂಧು ಹಯವದನ ಅವರು ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.