ಬಹುತೇಕ ಹೊಸಬರೇ ಕೂಡಿ ಸಿದ್ಧಪಡಿಸಿರುವ ‘ಗೋಪಿಲೋಲ’ ಚಿತ್ರದ ಟ್ರೇಲರ್ ಇತ್ತೀಚೆಗಷ್ಟೇ ಬಿಡುಗಡೆಗೊಂಡಿದೆ. ನಟರಾದ ದೊಡ್ಡಣ್ಣ, ಶ್ರೀನಗರ ಕಿಟ್ಟಿ ಚಿತ್ರದ ಟ್ರೇಲರ್ ಬಿಡುಗಡೆಗೊಳಿಸಿ ತಂಡಕ್ಕೆ ಶುಭ ಹಾರೈಸಿದರು.

ಸುಕೃತಿ ಚಿತ್ರಾಲಯ ಲಾಂಛನದಲ್ಲಿ ಎಸ್.ಆರ್ ಸನತ್ ಕುಮಾರ್ ನಿರ್ಮಿಸಿರುವ ಚಿತ್ರಕ್ಕೆ ಆರ್. ರವೀಂದ್ರ ನಿರ್ದೇಶನವಿದೆ. ನೈಸರ್ಗಿಕ ಕೃಷಿ, ಪ್ರೇಮ ಕುರಿತಾದ ಕಥೆಯನ್ನು ಹೊಂದಿರುವ ಚಿತ್ರ ಅಕ್ಟೋಬರ್ 4ರಂದು ತೆರೆಗೆ ಬರಲಿದೆ.

‘ಚಿತ್ರದ ನಿರ್ಮಾಪಕರೇ ಕಥೆ ಬರೆದಿದ್ದಾರೆ. ನೈಸರ್ಗಿಕ ಕೃಷಿಯ ಕುರಿತಾದ ಹಾಗೂ ಸುಂದರ ಪ್ರೇಮಕಥೆಯುಳ್ಳ ಚಿತ್ರ. ಒಂದೊಳ್ಳೆ ಸಂದೇಶ ಕೂಡ ಇದೆ. ಆ್ಯಕ್ಷನ್, ಲವ್, ಸಸ್ಪೆನ್ಸ್–ಹೀಗೆ ನೋಡುಗನಿಗೆ ಬೇಕಾದ ಎಲ್ಲಾ ಅಂಶಗಳು ನಮ್ಮ ಚಿತ್ರದಲ್ಲಿದೆ. ಎಲ್ಲಕ್ಕಿಂತ ಹೆಚ್ಚಾಗಿ ಒಳ್ಳೆ ಕಂಟೆಂಟ್ ಇದೆ’ ಎಂದರು ನಿರ್ದೇಶಕರು.

ಆರು ಹಾಡುಗಳಿಗೆ ಮಿಥುನ್ ಅಶೋಕನ್ ಸಂಗೀತ ಸಂಯೋಜಿಸಿದ್ದಾರೆ. ಮಂಜುನಾಥ್ ಅರಸ್ ಚಿತ್ರದ ನಾಯಕ. ಅವರಿಗೆ ನಿಮಿಷ ಜೋಡಿಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.