ಮುಂಬೈ: ಬಾಲಿವುಡ್ ನಟಿ, ಮಾದಕ ತಾರೆ ಸನ್ನಿ ಲಿಯೋನ್ ಅವರು ಇಂದು (ಶುಕ್ರವಾರ) 41ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ.

ನೆಚ್ಚಿನ ನಟಿಯ ಹುಟ್ಟುಹಬ್ಬದ ಅಂಗವಾಗಿ ಚಿತ್ರರಂಗದ ಗಣ್ಯರು ಸೇರಿದಂತೆ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಶುಭ ಹಾರೈಸಿದ್ದಾರೆ.

ಓದಿ...ಸುಧಾ ಮೂರ್ತಿ ಅವರನ್ನು ಭೇಟಿಯಾದ ರಾಬರ್ಟ್ ಬೆಡಗಿ ‘ಆಶಾ ಭಟ್’; ಫೋಟೊ ವೈರಲ್

ಇಂಟರ್ನೆಟ್ನಲ್ಲಿ ತಮ್ಮ ಮಾದಕ ಭಂಗಿಗಳ ಮೂಲಕ ನೋಡುಗರ ಎದೆಯಲ್ಲಿ ಕಿಚ್ಚು ಹಚ್ಚುವ ಕಲೆಯನ್ನು ಸನ್ನಿ ಚೆನ್ನಾಗಿಯೇ ಕರಗತ ಮಾಡಿಕೊಂಡಿದ್ದಾರೆ. ಪ್ರವಾಸ, ಫೋಟೊಶೂಟ್, ಹೊಸ ಉಡುಪು ಹಾಗೂ ಇನ್ನಿತರ ವಿಚಾರಗಳಿಗೆ ಸಂಬಂಧಿಸಿದ ಚಿತ್ರಗಳು, ವಿಡಿಯೊ ತುಣುಕುಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳುವ ಮೂಲಕ ಅವರು ತಮ್ಮ ಅಭಿಮಾನಿಗಳೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರುತ್ತಾರೆ.

ಓದಿ...ನ್ಯೂಯಾರ್ಕ್ನಲ್ಲಿರುವ ಪ್ರಿಯಾಂಕಾ ರೆಸ್ಟೋರೆಂಟ್ಗೆ ವಿಕ್ಕಿ– ಕತ್ರಿನಾ ಭೇಟಿ

ಸನ್ನಿ ಬಗ್ಗೆ ತಿಳಿಯಬೇಕಾದ ಅಂಶಗಳು:

1) ಸನ್ನಿ ಲಿಯೋನ್ ಅವರು ಕೆನಡದಲ್ಲಿ ಜನಿಸಿದರು. ಅವರದ್ದು ಮೂಲತಃ ಪಂಜಾಬಿ ಕುಟುಂಬ. ಅವರ ಮೊದಲ ಹೆಸರು ಕರಂಜೀತ್ ಕೌರ್ ವೋಹ್ರಾ.

2) ಸನ್ನಿ 15 ವರ್ಷದವರಿದ್ದಾಗ ಜರ್ಮನಿಯ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದರು.

3) ಸನ್ನಿ ಲಿಯೋನ್ ಶಾಲೆಯಲ್ಲಿ ಓದುತ್ತಿದ್ದಾಗ ಅವರನ್ನು ಎಲ್ಲರೂ ಗೇಲಿ ಮಾಡುತ್ತಿದ್ದರು. ಅವರ ಲುಕ್ (ನೋಟ) ಸರಿಯಿಲ್ಲ ಎಂದು ಅನೇಕರು ಅವಮಾನ ಮಾಡಿದ್ದರಂತೆ.

4) ನರ್ಸಿಂಗ್ ಕಲಿಕೆ ಹಾಗೂ ಮಾಡಲಿಂಗ್ನಲ್ಲಿ ಆಸಕ್ತಿ ಹೊಂದಿದ್ದ ಕರಂಜೀತ್ ಕೌರ್, ಖಾಸಗಿ ನಿಯತಕಾಲಿಕೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ‘ಸನ್ನಿ ಲಿಯೋನ್’ ಎಂದು ಹೆಸರು ಬದಲಾಯಿಸಿಕೊಂಡರು.

5) ‘ಜಿಸ್ಮ್–2’ ಸಿನಿಮಾದಲ್ಲಿ ನಟಿಸುವ ಮೂಲಕ ಸನ್ನಿ ಲಿಯೋನ್ ಬಾಲಿವುಡ್ನಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದರು.

6) ಬಿಬಿಸಿ ಪಟ್ಟಿ ಮಾಡಿದ್ದ ವಿಶ್ವದ 100 ಅತ್ಯಂತ ಪ್ರಭಾವಿ ಮಹಿಳೆಯರಲ್ಲಿ ಸನ್ನಿ ಲಿಯೋನ್ ಕೂಡ ಒಬ್ಬರು. ಆಕೆಯ ಜೊತೆಗೆ ಇತರೆ ನಾಲ್ವರು ಭಾರತೀಯ ಮಹಿಳೆಯರು ಆ ಪಟ್ಟಿಯಲ್ಲಿದ್ದರು.

7) ಸನ್ನಿ ಲಿಯೋನ್– ಡೇನಿಯಲ್ ವೆಬರ್ ದಂಪತಿ ಹೆಣ್ಣು ಮಗುವನ್ನು ದತ್ತು ಪಡೆದುಕೊಂಡಿದ್ದಾರೆ. ಆಕೆಗೆ ನಿಶಾ ಕೌರ್ ವೆಬರ್ ಎಂದು ಹೆಸರಿಟ್ಟಿದ್ದಾರೆ. ಸನ್ನಿ –ವೆಬರ್ ದಂಪತಿಗೆ ಇಬ್ಬರು ಗಂಡು ಮಕ್ಕಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.