ದೇವಭೂಮಿ ದ್ವಾರಕಾ: ಬಾಲಿವುಡ್ ನಟಿ ಕಂಗನಾ ರನೌತ್ ಅವರು ರಾಜಕೀಯ ಪ್ರವೇಶ ಮಾಡುವ ಸುಳಿವು ನೀಡಿದ್ದಾರೆ. ‘ಶ್ರೀಕೃಷ್ಣ ಆಶೀರ್ವಾದ ಮಾಡಿದರೆ ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತೇನೆ’ ಎಂದು ಹೇಳಿದ್ದಾರೆ.

ದ್ವಾರಕಾದಲ್ಲಿರುವ ಶ್ರೀಕೃಷ್ಣನ ದ್ವಾರಕದೀಶ್ ದೇಗುಲದಲ್ಲಿ ಇಂದು (ಶುಕ್ರವಾರ) ಬೆಳಿಗ್ಗೆ ಪ್ರಾರ್ಥನೆ ಸಲ್ಲಿಸಿದರು. ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವಿರಾ ಎನ್ನುವ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರ ಅವರು, ‘ಶ್ರೀಕೃಷ್ಣ ಆಶೀರ್ವದಿಸಿದರೆ ಸ್ಪರ್ಧಿಸುತ್ತೇನೆ’ ಎಂದರು.
.‘ತೇಜಸ್’ ಸಿನಿಮಾ ನೋಡಿ ಯೋಗಿ ಆದಿತ್ಯನಾಥ ಭಾವುಕರಾದರು: ಕಂಗನಾ ರನೌತ್.
ಇದೇ ವೇಳೆ ರಾಮ ಮಂದಿರ ನಿರ್ಮಾಣ ಸಾಧ್ಯವಾಗಿಸಿದ್ದಕ್ಕೆ ಕೇಂದ್ರದ ಬಿಜೆಪಿ ನೇತೃತ್ವದ ಸರ್ಕಾರವನ್ನು ಅವರು ಹೊಗಳಿದರು. ‘ಬಿಜೆಪಿ ಸರ್ಕಾರದ ಪ್ರಯತ್ನದಿಂದಾಗಿ 600 ವರ್ಷಗಳ ಹೋರಾಟ ಬಳಿಕ, ನಾವು ಭಾರತೀಯರು ಈ ದಿನವನ್ನು ನೋಡುತ್ತಿದ್ದೇವೆ. ವಿಜೃಂಭನೆಯಿಂದ ನಾವು ದೇವಸ್ಥಾನವನ್ನು ಅಲ್ಲಿ ಸ್ಥಾಪಿಸುತ್ತಿದ್ದೇವೆ. ಸನಾತನ ಧರ್ಮದ ಧ್ವಜ ಜಗತ್ತಿನೆಲ್ಲೆಡೆ ಹಾರಿಸಬೇಕು’ ಎಂದು ರನೌತ್ ಹೇಳಿದರು.

ಸಮುದ್ರದಲ್ಲಿ ಮುಳುಗಿರುವ ದ್ವಾರಕಾ ನಗರಕ್ಕೆ ಪ್ರವಾಸಿಗರು ಭೇಟಿ ನೀಡಲು ಅನುಕೂಲವಾಗುವಂತೆ ಸೌಲಭ್ಯ ಕಲ್ಪಿಸಬೇಕು ಎಂದು ಅವರು ಸರ್ಕಾರಕ್ಕೆ ಮನವಿ ಮಾಡಿರು. ದ್ವಾರಕಾ ನಗರವು ದೈವಿಕ ನಗರವಾಗಿದ್ದು, ಇಲ್ಲಿ ಎಲ್ಲವೂ ಅದ್ಭುತವಾಗಿದೆ ಎಂದು ಕಂಗನಾ ಹೇಳಿದರು.
.ಇಂದಿರಾ ಗಾಂಧಿ ಪಾತ್ರದಲ್ಲಿ ಕಂಗನಾ ರನೌತ್: 2024ಕ್ಕೆ ‘ಎಮರ್ಜೆನ್ಸಿ’ ಬಿಡುಗಡೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.