ಮುಂಬೈ: ಗೋವಾದಲ್ಲಿ ನಡೆಯಲಿರುವ 52ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದ (ಐಎಫ್ಎಫ್ಐ) ಇಂಡಿಯನ್ ಪನೋರಮಾ ವಿಭಾಗಕ್ಕೆ ಕನ್ನಡದ ನಾಲ್ಕು ಸಿನಿಮಾಗಳು ಆಯ್ಕೆಯಾಗಿವೆ.

ಇದೇ ನ.20ರಿಂದ 28ರ ವರೆಗೂ 9 ದಿನಗಳ ಕಾಲ ಗೋವಾ ಚಲನಚಿತ್ರೋತ್ಸವ ನಡೆಯಲಿದೆ.

ಪನೋರಮಾ ವಿಭಾಗಕ್ಕೆ ಒಟ್ಟು 25 ಫೀಚರ್ ಹಾಗೂ 20 ನಾನ್‌ಫೀಚರ್ ಚಿತ್ರಗಳನ್ನು ಆಯ್ಕೆ ಮಾಡಲಾಗಿದೆ. ಈ ಚಿತ್ರಗಳನ್ನು ಇದೇ 20ರಿಂದ 28ರವರೆಗೆ ಪ್ರದರ್ಶಿಸಲಾಗುತ್ತದೆ.

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ಮತ್ತು ಗೋವಾ ಸರ್ಕಾರದ ಸಹಭಾಗಿತ್ವದಲ್ಲಿ ಈ ಬಾರಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು ಆಯೋಜಿಸಲಾಗಿದೆ.

ಸಾಗರ ಪುರಾಣಿಕ ನಿರ್ದೇಶನದ ’ಡೊಳ್ಳು’, ಪ್ರವೀಣ ಕೃಪಾಕರ ಅವರ ’ತಲೆದಂಡ’, ಮನಸೊರೆ ನಿರ್ದೇಶನದ ’ಆಕ್ಟ್ 1978’ ಮತ್ತು ಗಣೇಶ ಹೆಗಡೆ ನಿರ್ದೇಶನದ ’ನೀಲಿ ಹಕ್ಕಿ’ ಕನ್ನಡ ಚಿತ್ರಗಳು ಪ್ರದರ್ಶನಗೊಳ್ಳಲಿವೆ.

ಫೀಚರ್ಸ್ ಫಿಲ್ಮ್ ವಿಭಾಗದಲ್ಲಿ ಕನ್ನಡದ ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರಸಿಂಗ್ ಬಾಬು ಅವರ ನೇತೃತ್ವದಲ್ಲಿ 12 ಮಂದಿ ಸದಸ್ಯರನ್ನು ನೇಮಿಸಲಾಗಿದೆ ಎಂದು ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯ ತಿಳಿಸಿದೆ.

2021ರ ಆಗಸ್ಟ್ 12ರ ಒಳಗಾಗಿ ಇಂಡಿಯನ್ ಪನೋರಮಾ ವಿಭಾಗಕ್ಕೆ ಆನ್‌ಲೈನ್‌ನಲ್ಲಿ ಅರ್ಜಿಗಳನ್ನು ಸಲ್ಲಿಸಬಹುದಾಗಿತ್ತು. ಆನ್‌ಲೈನ್‌ನಲ್ಲಿ ಸಲ್ಲಿಸಿದ ಅರ್ಜಿಯ ಮುದ್ರಿತ ಪ್ರತಿಯನ್ನು ಆಗಸ್ಟ್ 23ರ ಒಳಗೆ ಅಗತ್ಯ ದಾಖಲೆಗಳೊಂದಿಗೆ ಸ್ವೀಕರಿಸಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.