ಡೆಹ್ರಾಡೂನ್:ಕೇದರ್‌ನಾಥ್ ಸಿನಿಮಾ ಪ್ರದರ್ಶಿಸಿದರೆಅಹಿತಕರ ಘಟನೆಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ನೈನಿತಾಲ್ ಮತ್ತು ಉದ್ದಮ್ ಸಿಂಗ್ ನಗರದ ಜಿಲ್ಲಾ ಮೆಜಿಸ್ಟ್ರೇಟ್‍ಗಳು ಈಸಿನಿಮಾಕ್ಕೆ ಗುರುವಾರ ನಿಷೇಧ ಹೇರಿವೆ.ಆದಾಗ್ಯೂ, ಈ ಸಿನಿಮಾಕ್ಕೆ ಅಧಿಕೃತವಾಗಿ ನಿಷೇಧ ಹೇರಿಲ್ಲ ಎಂದು ರಾಜ್ಯ ಸರ್ಕಾರ ಹೇಳಿದೆ.

ಶುಕ್ರವಾರ ಕೇದರ್‌ನಾಥ್ಸಿನಿಮಾ ದೇಶದಾದ್ಯಂತ ತೆರೆ ಕಂಡಿದೆ.ಉತ್ತರಾಖಂಡದ ಕೆಲವು ಜಿಲ್ಲೆಗಳಲ್ಲಿ ಈ ಸಿನಿಮಾ ಪ್ರದರ್ಶನಗೊಂಡರೆ ಪ್ರತಿಭಟನೆಕಾರರು ರೊಚ್ಚಿಗೇಳುವ ಸಾಧ್ಯತೆ ಇದೆ.ಹಾಗಾಗಿ ಸಿನಿಮಾ ಪ್ರದರ್ಶನಕ್ಕೆ ನಿಷೇಧ ಹೇರಲಾಗಿದೆ ಎಂದು ಮೆಜಿಸ್ಟ್ರೇಟ್ ಅಭಿಪ್ರಾಯಪಟ್ಟಿದ್ದಾರೆ.

ಈ ಬಗ್ಗೆ ಮಧ್ಯಪ್ರವೇಶಿಸಲು ನಿರಾಕರಿಸಿರುವ ಉತ್ತರಾಖಂಡ ಹೈಕೋರ್ಟ್, ಸಿನಿಮಾ ನಿಷೇಧಿಸಬೇಕೆಂಬ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನುನಿರಾಕರಿಸಿದೆ.

ಸಿನಿಮಾದಲ್ಲಿ ಏನಿದೆ?
2013ರಲ್ಲಿನ ಪ್ರವಾಹದ ಕಥಾಹಂದರವನ್ನು ಹೊಂದಿರುವ ಈ ಸಿನಿಮಾದಲ್ಲಿ ಕೇದಾರನಾಥ ತೀರ್ಥಯಾತ್ರೆ ವೇಳೆ ಹಿಂದೂ ಹುಡುಗಿಯೊಬ್ಬಳು ಮುಸ್ಲಿಂ ಯುವಕನನ್ನು ಪ್ರೀತಿಸುವ ಕಥೆ ಇದೆ.ಸುಶಾಂತ್ ಸಿಂಗ್ ರಜಪೂತ್ ಮತ್ತು ಸಾರ ಅಲಿ ಖಾನ್ ನಾಯಕ ನಾಯಕಿಯಾಗಿದ್ದಾರೆ.

ಈ ಸಿನಿಮಾ ಲವ್ ಜಿಹಾದ್‍ನ್ನು ಪ್ರೋತ್ಸಾಹಿಸುತ್ತಿದೆ ಎಂದು ಉತ್ತರಾಖಂಡದಲ್ಲಿ ಸಿನಿಮಾಕ್ಕೆ ವಿರೋಧ ವ್ಯಕ್ತವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.