ಬೆಂಗಳೂರು: ನಟ ಯಶ್ ಅವರ 19 ನೇ ಚಿತ್ರ ಟಾಕ್ಸಿಕ್ (TOXIC) ತಯಾರಿ ಜೋರು ನಡೆಯುತ್ತಿದೆ. ಈ ಚಿತ್ರವನ್ನು ಮಲಯಾಳಂನ ಗೀತು ಮೋಹನ್‌ದಾಸ್ ನಿರ್ದೇಶಿಸುತ್ತಿದ್ದಾರೆ.

ಆದರೆ, ಈ ಸಿನಿಮಾದ ನಾಯಕಿ ಸೇರಿದಂತೆ ಸಹಪಾತ್ರಗಳ ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ.

ಸಹಪಾತ್ರಗಳ ಆಯ್ಕೆಗೆ ನಿರ್ಮಾಣ ಸಂಸ್ಥೆ ಕೆವಿಎನ್ ಫ್ರೊಡಕ್ಸನ್ ಕಾಸ್ಟಿಂಗ್ ಕಾಲ್ ಕೊಟ್ಟಿದೆ. ಆಸಕ್ತ ಪುರುಷ, ಮಹಿಳೆ, ಮಕ್ಕಳು ತಮ್ಮ ಪ್ರತಿಭೆ ತೋರಿಸುವ ವಿಡಿಯೊ ತುಣಕನ್ನು ಕೆವಿಎನ್‌ಗೆ ಕಳುಹಿಸಿಕೊಡಬೇಕು. ಈ ಕುರಿತು ಕೆವಿಎನ್ ಎಕ್ಸ್‌ನಲ್ಲಿ ಕಾಸ್ಟಿಂಗ್ ಕಾಲ್ ಪೋಸ್ಟರ್ ಹಂಚಿಕೊಂಡಿದೆ.

ಯಶ್ ಎದುರು ನಾಯಕಿಯಾಗಿ ಕರೀನಾ ಕಪೂರ್ ಖಾನ್ ಅವರು ನಟಿಸಲಿದ್ದಾರೆ ಎಂದು ಈ ಹಿಂದೆ ಹಲವು ಬಾರಿ ಕೇಳಿ ಬಂದಿತ್ತು. ಆದರೆ, ಇದೀಗ ಕರೀನಾ ಕಪೂರ್ ಅವರನ್ನು ಕೈ ಬಿಡಲಾಗಿದ್ದು ಅವರು ಬದಲಿಗೆ ಕಿಯಾರಾ ಅಡ್ವಾಣಿ ಅವರಿಗೆ ಕರೆ ಹೋಗಿದೆ ಎನ್ನಲಾಗುತ್ತಿದೆ. ಈ ಕುರಿತು ಕೆಲ ಮಾಧ್ಯಮಗಳು ವರದಿ ಮಾಡಿವೆ.

ಏತನ್ಮಧ್ಯೆ ನಾಯಕಿ ಸೇರಿದಂತೆ ಇತರ ಸಹಪಾತ್ರಗಳ ಆಯ್ಕೆ ಇನ್ನೂ ಅಂತಿಮಗೊಂಡಿಲ್ಲ ಎಂದು ಕೆವಿಎನ್ ಹೇಳಿದೆ. ಅದಕ್ಕಾಗಿಯೇ ಕಾಸ್ಟಿಂಗ್ ಕಾಲ್ ಮೊರೆ ಹೋಗಿದೆ ಎನ್ನಲಾಗಿದೆ.

ಕನ್ನಡಕ್ಕೆ RRR ಅಂತಹ ಮಹತ್ವದ ಚಿತ್ರವನ್ನು ತಂದ ‘ಕೆವಿಎನ್ ಫ್ರೊಡಕ್ಸನ್’ ಟಾಕ್ಸಿಕ್ ಚಿತ್ರವನ್ನು ನಿರ್ಮಿಸುತ್ತಿದೆ. ಮೂಲಗಳ ಪ್ರಕಾರ ಯಶ್ ಅವರ ‘ Monster Mind Creations’ ಕೂಡ ಈ ಚಿತ್ರಕ್ಕೆ ಹಣ ಹೂಡುತ್ತಿದೆ ಎನ್ನಲಾಗಿದ್ದು, ಇದೊಂದು ಕಂಟೆಂಟ್ ಆಧಾರಿತ ಚಿತ್ರ. ಅಷ್ಟೇ ಅಲ್ಲದೇ ಬಿಗ್ ಬಜೆಟ್ ಚಿತ್ರವೂ ಹೌದು ಎನ್ನಲಾಗುತ್ತಿದೆ.

ಅಂದಹಾಗೇ ಟಾಕ್ಸಿಕ್ ಅಂದರೆ ವಿಷಪೂರಿತ ಎಂಬ ಅರ್ಥ. ಈ ಮೂಲಕ ಗೀತು ಹಾಗೂ ಯಶ್ ಅವರು ಭಾರತೀಯ ಅಪರಾಧ ಲೋಕದಲ್ಲಿನ ಕರಾಳ ಡ್ರಗ್ಸ್ ಕಥೆಯನ್ನು ಹೇಳಲು ಹೊರಟಿದ್ದಾರೆಯೇ? ಎಂಬ ಕುತೂಹಲ ಮೂಡುತ್ತಿದೆ.

ಟಾಕ್ಸಿಕ್ ಚಿತ್ರವನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಇನ್ನೂ ಒಂದೂವರೆ ವರ್ಷ ಕಾಯಲೇಬೇಕು. ಚಿತ್ರತಂಡ ಹೇಳಿಕೊಂಡಿರುವ ಪ್ರಕಾರ 2025 ರ ಏಪ್ರಿಲ್ 10 ರಂದು ಕನ್ನಡ, ಇಂಗ್ಲಿಷ್, ಹಿಂದಿ, ತಮಿಳು, ತೆಲುಗು, ಮಲಯಾಳಂನಲ್ಲಿ ಈ ಚಿತ್ರ ಬಿಡುಗಡೆಯಾಗಲಿದೆ.
.ಬಾಲಿವುಡ್ ನಟಿ ನೇಹಾ ಶರ್ಮಾ ರಾಜಕೀಯಕ್ಕೆ?.ಬಂಧನವಾದರೂ ಸಂತ್ರಸ್ತ ಬಾಲಕಿಯ ಫೋಟೊಗಳನ್ನು Instaದಿಂದ ಡಿಲೀಟ್ ಮಾಡದ ಸೋನು ಗೌಡ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.