ಚಿತ್ರದುರ್ಗ: ವಿತಕರಕರೊಬ್ಬರಿಗೆ ಜೀವ ಬೆದರಿಕೆ ಹಾಕಿದ ಆರೋಪದಡಿ‘ಕೋಟಿಗೊಬ್ಬ–3’ ನಿರ್ಮಾಪಕ ಎಂ.ಬಿ.ಬಾಬು (ಸೂರಪ್ಪ ಬಾಬು) ವಿರುದ್ಧ ಇಲ್ಲಿನ ನಗರ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 506 (ಜೀವ ಬೆದರಿಕೆ) ಹಾಗೂ 504 (ಉದ್ದೇಶಪೂರ್ವಕವಾಗಿ ಅವಮಾನ ಮಾಡುವುದು) ಆರೋಪದಡಿ ವಿತರಕ ಖಾಜಾಪೀರ್ ಎಂಬುವರು ದೂರು ದಾಖಲಿಸಿದ್ದಾರೆ. ನಿರ್ಮಾಪಕರು ಬೆದರಿಸುತ್ತಿದ್ದಾರೆ ಎಂದು ಶನಿವಾರ ಇವರು ದೂರಿದ್ದರು.

ತಾಂತ್ರಿಕ ಕಾರಣದಿಂದ ಬಿಡುಗಡೆ ವಿಳಂಬವಾಗಿ ಪ್ರೇಕ್ಷಕರ ಆಕ್ರೋಶಕ್ಕೆ ಗುರಿಯಾಗಿದ್ದ ‘ಕೋಟಿಗೊಬ್ಬ–3’ ಚಿತ್ರದ ವಿವಾದ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಬಳ್ಳಾರಿ, ದಾವಣಗೆರೆ ಹಾಗೂ ಚಿತ್ರದುರ್ಗದ ವಿತರಣೆಯ ಹಕ್ಕನ್ನು ಖಾಜಾಪೀರ್ ಹಾಗೂ ಇತರರು ಪಡೆದಿದ್ದರು. ಕೊನೆಯ ಗಳಿಗೆಯಲ್ಲಿ ವಿತರಣೆಯ ಹಕ್ಕನ್ನು ನಿರ್ಮಾಪಕರು ಮತ್ತೊಬ್ಬರಿಗೆ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ ಎನ್ನಲಾಗಿದೆ.

‘ಮೂರು ಜಿಲ್ಲೆಯಲ್ಲಿ ಕೋಟಿಗೊಬ್ಬ–3 ವಿತರಣೆ ಮತ್ತು ಪ್ರದರ್ಶನದ ಹಕ್ಕು ಪಡೆಯಲು ₹ 2.9 ಕೋಟಿಗೆ ಒಪ್ಪಂದವಾಗಿತ್ತು. ಈ ಸಂಬಂಧ ನಿರ್ಮಾಪಕ ಎಂ.ಬಿ.ಬಾಬು ಮಾಲಿಕತ್ವದ ರಾಮ್ ಬಾಬು ಪ್ರೊಡೆಕ್ಷನ್ಗೆ ₹ 60 ಲಕ್ಷ ಪಾವತಿ ಮಾಡಲಾಗಿತ್ತು. ಚಿತ್ರ ಬಿಡುಗಡೆಯ ಮಾಹಿತಿ ತಿಳಿದು ನಿರ್ಮಾಪಕರನ್ನು ಸಂಪರ್ಕಿಸಿದಾಗ ಮತ್ತೊಬ್ಬರಿಗೆ ಹಕ್ಕು ವಿತರಣೆ ಮಾಡಿರುವುದ ಗೊತ್ತಾಯಿತು. ಹಣವನ್ನು ಮರಳಿಸುವಂತೆ ಕೇಳಿದ್ದಕ್ಕೆ ನಿರ್ಮಾಪಕರು ಜೀವ ಬೆದರಿಕೆ ಹಾಕಿದ್ದಾರೆ’ ಎಂದು ಖಾಜಾಪೀರ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.