ಮುಂಬೈ: ತಮ್ಮ ಮುಂದಿನ ಸಿನಿಮಾ ‘ಬಸ್ತರ್’ ಎಂದು ‘ದಿ ಕೇರಳ ಸ್ಟೋರಿ’ ನಿರ್ದೇಶಕರಾದ ಸುದೀಪ್ತೊ ಸೆನ್ ಮತ್ತು ನಿರ್ಮಾಪಕ ವಿಪುಲ್ ಶಾ ಅವರು ಸೋಮವಾರ ಘೋಷಿಸಿದ್ದಾರೆ.

‘ಬಸ್ತರ್’ ಸಿನಿಮಾವು ನೈಜ ಘಟನೆಯಾಧರಿತವಾಗಿದ್ದು 2024 ಏಪ್ರಿಲ್ 5ರಂದು ತೆರೆಕಾಣಲಿದೆ ಎಂದಿದ್ದಾರೆ.

ಶಾ ಅವರ ಸನ್ಶೈನ್ ಪಿಕ್ಚರ್ಸ್ ಅಡಿಯಲ್ಲಿ ಈ ಚಿತ್ರವನ್ನು ನಿರ್ಮಿಸಲಾಗುವುದು ಎಂದೂ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಕೇರಳದ ಮಹಿಳೆಯರು ಬಲವಂತವಾಗಿ ಮತಾಂತರಗೊಂಡು ಐಎಸ್ ಸಂಘಟನೆಗೆ ಸೇರಿದ್ದಾರೆ ಎಂಬ ಕಥಾಹಂದರವನ್ನು ಹೊಂದಿದ್ದ ‘ದಿ ಕೇರಳ ಸ್ಟೋರಿ’ ಸಿನಿಮಾವು ವಿವಾದಕ್ಕೆ ಒಳಗಾಗಿತ್ತು.

ಬಿಜೆಪಿ ಆಡಳಿತವಿರುವ ಕೆಲವು ರಾಜ್ಯಗಳಲ್ಲಿ ಈ ಸಿನಿಮಾಗೆ ತೆರಿಗೆ ವಿನಾಯಿತಿ ಘೋಷಿಸಲಾಗಿತ್ತು. ಪಶ್ಚಿಮ ಬಂಗಾಳ ಸರ್ಕಾರವು ಈ ಚಿತ್ರದ ಪ್ರದರ್ಶನಕ್ಕೆ ನಿಷೇಧ ಹೇರಿತ್ತು ಮತ್ತು ತಮಿಳುನಾಡಿನಲ್ಲಿ ತಡೆಯೊಡ್ಡಲಾಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.