ಬೆಂಗಳೂರು: ಲೈಂಗಿಕ ದೌರ್ಜನ್ಯ ಎದುರಿಸಿದವರು ಮಿಟೂ ಆಂದೋಲನದ ಮೂಲಕ ಬಚ್ಚಿಟ್ಟ ನೋವಿನ ಸಿಟ್ಟನ್ನು ಹೊರಹಾಕುತ್ತಿದ್ದಾರೆ. ಗಣ್ಯಾತಿಗಣ್ಯರ ಹೆಸರುಗಳು ಈ ಸಾಲಿನಲ್ಲಿ ಸೇರಿ ಹೋಗಿದ್ದು, ಕನ್ನಡ ಚಿತ್ರರಂಗದಲ್ಲಿಯೂ ಇದು ಸ್ಫೋಟಗೊಂಡಿದೆ. ಚಿತ್ರರಂಗದಲ್ಲಿ ತಾನು ಅನುಭವಿಸಿರುವ ಕಷ್ಟಗಳನ್ನು ನಟಿ ಶ್ರುತಿ ಹರಿಹರನ್ ಸುಧಾ ವಾರಪತ್ರಿಕೆಯಲ್ಲಿ ಹಂಚಿಕೊಂಡಿದ್ದಾರೆ.

ಕರಾಳ ಕಥೆಗಳನ್ನು ಬಹಿರಂಗ ಪಡಿಸುವ ಧೈರ್ಯ ತೋರಿರುವ ಅವರು ಚಿತ್ರೀಕರಣದ ವೇಳೆ ಸಹ ನಟನಿಂದ ಅನುಭವಿಸಿದ ಕಿರುಕುಳನ್ನು ಹೇಳಿಕೊಂಡಿದ್ದಾರೆ. ಸುಧಾ ವಾರಪತ್ರಿಕೆಯಲ್ಲಿನ ಲೇಖನ ಜನರ ನಡುವೆ ಭಾರೀ ಚರ್ಚೆಗೆ ಗ್ರಾಸವಾಗುತ್ತಿದ್ದಂತೆ ಶ್ರುತಿ ಹರಿಹರನ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ವೊಂದನ್ನು ಪ್ರಕಟಿಸಿದ್ದಾರೆ.

ಸುಧಾ ವಾರಪತ್ರಿಕೆಯಲ್ಲಿ ಬಿಚ್ಚಿಟ್ಟ ಸತ್ಯಗಳು...

’ವಿಸ್ಮಯ’ ಸಿನಿಮಾದ ಚಿತ್ರೀಕರಣದ ಸಮಯದಲ್ಲಿ ತಾವು ಅನುಭವಿಸಿದ ಅಹಿತಕ ಪ್ರಸಂಗವನ್ನು ಅವರು ಇಲ್ಲಿ ನೆನಪಿಸಿಕೊಂಡಿದ್ದಾರೆ. ಲೈಂಗಿಕ ಶೋಷಣೆಯ ಅನುಭವ ಮನಸ್ಸಿನ ಮೇಲೆ ಮಾಡುವ ಆಘಾತದಿಂದ ಹೊರಗೆ ಬರುವುದು ಸುಲಭವಲ್ಲ. ಅದಕ್ಕೆ ಸಾಕಷ್ಟು ಸಮಯ ಬೇಕಾಗುತ್ತದೆ. ತನ್ನನ್ನು ಶೋಷಿಸಿದ ವ್ಯಕ್ತಿಯ ಹೆಸರನ್ನು ಹೇಳುವುದಿದೆಯಲ್ಲ, ಅದು ಖಂಡಿತ ಸಣ್ಣ ವಿಷಯ ಅಲ್ಲವೇ ಅಲ್ಲ ಎಂದಿರುವ ಶ್ರುತಿ ತಮ್ಮ ಬದುಕಿನಲ್ಲಿ ಎದುರಿಸಿದ ಅನೇಕ ಇರುಸುಮುರುಸಿನ ಸನ್ನಿವೇಶಗಳನ್ನು ಪ್ರಸ್ತಾಪಿಸಿದ್ದಾರೆ.

'....ವಿಸ್ಮಯಸಿನಿಮಾಗೂ ಮುನ್ನ ನಾನು ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದೇನೆ. ತುಂಬ ನಟರ ಜತೆ ಕೆಲಸ ಮಾಡಿದ್ದೇನೆ. ಇಂದಿಗೂ ನನಗೆ ಬೇರೆ ನಟರ ಜೊತೆ ನಟಿಸುವಾಗ ಯಾವ ತೊಂದರೆಯೂ ಆಗಿಲ್ಲ. ನಾವೆಲ್ಲ ಪರಸ್ಪರ ಗೌರವದಿಂದಲೇ ನಡೆದುಕೊಳ್ಳುತ್ತಿದ್ದೆವು. ನಾಯಕ–ನಾಯಕಿ ನಡುವಿನ ಪ್ರಣಯದ ದೃಶ್ಯಗಳನ್ನು ಚಿತ್ರೀಕರಿಸುವಾಗ ಕಲಾವಿದರ ನಡುವೆ ಬಹುಸೂಕ್ಷ್ಮವಾದ ಒಂದು ಗಡಿರೇಖೆ ಇರುತ್ತದೆ. ಆ ಸೂಕ್ಷ್ಮವಾದ ಗಡಿಯನ್ನು ದಾಟಿದರೆ ಹೆಣ್ಣಿಗೆ ಅನ್ಕಂಫರ್ಟಬಲ್ ಆಗಲು ಶುರುವಾಗುತ್ತದೆ. ವಿಸ್ಮಯ ಚಿತ್ರೀಕರಣದ ಸಂದರ್ಭದಲ್ಲಿ ಆ ಗಡಿರೇಖೆಯನ್ನು ಅರ್ಜುನ್ ಸರ್ಜಾ ದಾಟಿದ್ದರು....'

ಶ್ರುತಿ ಹರಿಹರನ್ ತೆರೆದಿಟ್ಟ ಕರಾಳ ಕಥೆಗಳ ಪೂರ್ಣ ಓದು ಅಕ್ಟೋಬರ್ 25ರ ಸುಧಾ ವಾರಪತ್ರಿಕೆಯಲ್ಲಿ ಲಭ್ಯವಿದೆ.

ಇದನ್ನೂ ಓದಿ:ಸ್ಯಾಂಡಲ್ವುಡ್ನಲ್ಲಿ ಮಿಟೂ: ಚಿತ್ರರಂಗಕ್ಕೆ ಸಂಗೀತಾ ಭಟ್ ವಿದಾಯ!

ಇನ್ನಷ್ಟುಓದಿ:

ನಿರ್ಮಾಪಕರು ನನ್ನನ್ನು ಹಂಚಿಕೊಳ್ಳಲು ಬಯಸಿದ್ದರು: ನಟಿ ಶ್ರುತಿ ಹರಿಹರನ್

ಗಂಡಸರಿಗೆ ನಡುಕ ಶುರುವಾಗಿದೆ: ಶ್ರುತಿ ಹರಿಹರನ್

ಸುದೀರ್ಘ ಬರಹ: ಬಬ್ಲಿ ಬಬ್ಲಿ ಜಗತ್ತಿನ ಬುದ್ಧಿವಂತೆ ಶ್ರುತಿ ಹರಿಹರನ್

ಮೀ-ಟೂ ಕಿಡಿಗೆ ‘ಫೈರ್’ ಮದ್ದು!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.