ಲಾಸ್ ಏಂಜಲೀಸ್: ಅಮೆರಿಕ ಮೂಲದ ಹಾಲಿವುಡ್ ನಟ ಪಾಟ್ರಿಕ್ ಡೆಂಪ್ಸಿ (Patrick Dempsey) ಅವರು 2023 ನೇ ಸಾಲಿನ ಜಗತ್ತಿನ ಸೆಕ್ಸಿಯಸ್ಟ್ ಪುರುಷ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಅಮೆರಿಕದ People ಮ್ಯಾಗ್ಜೀನ್ ಪ್ರಕಾರ ಅವರು ಈ ಖ್ಯಾತಿಗೆ ಪಾತ್ರರಾಗಿದ್ದಾರೆ. ಜಗತ್ತಿನ ಸೆಕ್ಸಿಯಸ್ಟ್ ಪುರುಷ ಎಂಬ ಗೌರವ ಅವರಿಗೆ ಲಭಿಸಿದೆ.

ಜನಪ್ರಿಯ ಕಿರುತೆರೆ ಸರಣಿ Grey's Anatomy ಯಲ್ಲಿ ಅವರ ಪಾತ್ರ ಜನಮನಸೋರೆಗೊಂಡಿತ್ತು.

ಕಳೆದ ವರ್ಷ ಮಾರ್ವೆಲ್ ಸರಣಿ ಖ್ಯಾತಿಯ ನಟ ಕ್ರಿಸ್ ಇವಾನ್ ಅವರು ಜಗತ್ತಿನ ಸೆಕ್ಸಿಯಸ್ಟ್ ಬಿರುದು ಪಡೆದಿದ್ದರು.

ಈ ಬಗ್ಗೆ ಅಭಿಪ್ರಾಯ ಹಂಚಿಕೊಂಡಿರುವ Patrick Dempsey ನನ್ನ ಜೀವನದ ಈ ಹಂತದಲ್ಲಿ ಇದು ನಡೆಯುತ್ತದೆ ಎಂದು ನಾನು ಎಂದುಕೊಂಡಿರಲಿಲ್ಲ. ಇದು ಘೋಷಣೆಯಾದಾಗ ನನಗೆ ನಂಬಿಕೆ ಬಂದಿರಲಿಲ್ಲ. ಇದು ನನ್ನ ಜೀವನದಲ್ಲಿ ಮತ್ತೊಂದು ಧನಾತ್ಮಕ ಬದಲಾವಣೆಗೆ ಕಾರಣವಾಗುತ್ತದೆ ಎಂದು ಹೇಳಿಕೊಂಡಿದ್ದಾರೆ.

57 ವರ್ಷದ ಪಾಟ್ರಿಕ್ ಅವರು ವೃತ್ತಿಪರ ರೇಸರ್ ಕೂಡ ಹೌದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.