ಬೆಂಗಳೂರು: ಇದೇ ಮೊದಲ ಬಾರಿಗೆ ಭಾರತೀಯ ಜಾಹೀರಾತು ಜಗತ್ತಿಗೆ ಅಮೆರಿಕ ಮೂಲದ ನೀಲಿ ಚಿತ್ರಗಳ ತಾರೆ ಜಾನಿ ಸಿನ್ಸ್ (Johnny Sins) ಪ್ರವೇಶ ಮಾಡಿದ್ದಾರೆ.

ಹೌದು, ಮುಂಬೈ ಮೂಲದ Bold care ಎನ್ನುವ ಲೈಂಗಿಕ ಹಾಗೂ ವಯಸ್ಕರ ಸಂಬಂಧಿ ಉತ್ಪನ್ನಗಳ ತಯಾರಿಕಾ ಕಂಪನಿಯ ಹೊಸ ಜಾಹೀರಾತಿನಲ್ಲಿ ಬಾಲಿವುಡ್ ನಟ ರಣವೀರ್ ಸಿಂಗ್ ಜೊತೆ ಜಾನಿ ಸಿನ್ಸ್ ಕಾಣಿಸಿಕೊಂಡಿದ್ದಾರೆ.

1.49 ನಿಮಿಷದ ಈ ಜಾಹೀರಾತು ಇಂಟರ್ನೆಟ್ನಲ್ಲಿ ಭಾರಿ ಸದ್ದು ಮಾಡಿದ್ದು, ರಣವೀರ್ ಸಿಂಗ್ ಅವರು ತಮ್ಮ ಅಧಿಕೃತ ಇನ್ಸ್ಟಾಗ್ರಾಂ ಖಾತೆಯಲ್ಲೂ ಹಂಚಿಕೊಂಡಿದ್ದಾರೆ. Bold care ಕೂಡ ಹಂಚಿಕೊಂಡಿದೆ.

ಹಿಂದಿ ಭಾಷೆಯಲ್ಲಿ ಮೂಡಿಬಂದಿರುವ ಈ ಜಾಹೀರಾತಿನ ಕ್ರಿಯೇಟಿವಿಟಿಯನ್ನು ಹಲವರು ಮೆಚ್ಚಿಕೊಂಡಿದ್ದು, ಜಾನಿ ಸಿನ್ಸ್ ಅವರ ನಟನೆಯನ್ನು ಹಲವರು ಕೊಂಡಾಡಿದ್ದಾರೆ. ಅಲ್ಲದೇ ಇದರ ಕುರಿತು ನೆಟ್ಟಿಗರು ತಹರೇವಾರಿ ಚರ್ಚೆ ನಡೆಸುತ್ತಿದ್ದಾರೆ.

ಜಾಹೀರಾತಿನಲ್ಲಿ ಏನಿದೆ?

ಒಂದು ಸಂಪ್ರದಾಯ ಕುಟುಂಬದಲ್ಲಿ ವಿವಾಹಿತ ಮಹಿಳೆ (ಸೊಸೆ) ಕೋಣೆಯಿಂದ ಹೊರಬಂದು ತಾನು ಮನೆ ಬಿಟ್ಟು ಹೋಗುವುದಾಗಿ ಕುಟುಂಬದ ಎಲ್ಲರ ಎದುರು ಹೇಳುತ್ತಾರೆ. ತನ್ನ ಗಂಡನಿಗೆ (ಜಾನಿ ಸಿನ್ಸ್) ಲೈಂಗಿಕ ದೌರ್ಬಲ್ಯ ಇದೆ ಎಂದು ಅತ್ತೆ, ಮಾವನ ಎದುರು ಅವರು ಹೇಳುತ್ತಾರೆ. ಇದರಿಂದ ಹಾಲ್ನಲ್ಲಿ ಕೂತಿದ್ದ ಮನೆ ಮಂದಿ ಆಘಾತಗೊಳ್ಳುತ್ತಾರೆ.

ಆಗ ಜಾಹೀರಾತಿನಲ್ಲಿ ಜಾನಿ ಸಿನ್ಸ್ ಸಹೋದರ ರಣವೀರ್ ಸಿಂಗ್ ಅವರು ಜಾನಿ ಸಿನ್ಸ್ ಬಳಿ ಸಮಜಾಯಿಷಿ ಕೇಳುತ್ತಾರೆ. ಅಷ್ಟರಲ್ಲಿ ಸೊಸೆ ಮಾತು ಕೇಳಿಸಿಕೊಂಡು ಅತ್ತೆ, ಸೊಸೆಗೆ ಜೋರಾಗಿ ಕೆನ್ನೆಗೆ ಬಾರಿಸುತ್ತಾರೆ. ಆಗ ಅಟ್ಟದಿಂದ ಸೊಸೆ ಬೀಳುವಾಗ ರಣವೀರ್ ಅವರು ಜಾನಿ ಸಿನ್ಸ್ ಅವರನ್ನು ಎಚ್ಚರಿಸಿ Bold care ಉತ್ಪನ್ನವೊಂದನ್ನು ಎಸೆಯುತ್ತಾರೆ. ಅದನ್ನು ತೆಗೆದುಕೊಂಡ ಜಾನಿ ಸಿನ್ಸ್ ತಮ್ಮ ಹೆಂಡತಿಯನ್ನು ಕೆಳಗೆ ಬೀಳದ ಹಾಗೆ ಜಂಪ್ ಮಾಡಿ ರಕ್ಷಿಸುತ್ತಾರೆ. ಅಲ್ಲಿಗೆ ‘ಸುಖಾಂತ್ಯ’ವಾಗುತ್ತದೆ.

ಅಯ್ಯಪ್ಪ ಕೆ.ಎಂ ಎನ್ನುವರ ಕಲ್ಪನೆಯಲ್ಲಿ ಈ ಜಾಹೀರಾತು ಮೂಡಿ ಬಂದಿದ್ದು, ತನ್ಮಯ್ ಭಟ್, ದೇವಯ್ಯ ಭೂಪಣ್ಣ ಎನ್ನುವರು ಸ್ಕ್ರಿಪ್ಟ್ ಬರೆದಿದ್ದಾರೆ.

ಜಾನಿ ಸಿನ್ಸ್ ಅವರು ಅಮೆರಿಕ ಮೂಲದ ಒಬ್ಬ ಖ್ಯಾತ ನೀಲಿ ಚಿತ್ರಗಳ ತಾರೆಯಾಗಿದ್ದು, ಅಲ್ಲದೇ ಅವರು ಅಮೆರಿಕದಲ್ಲಿ ಈಗಾಗಲೇ ಹಲವು ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು.
.ತಮಿಳುನಾಡು: ನಟ ದಳಪತಿ ವಿಜಯ್ ಹೊಸ ಪಕ್ಷ ಘೋಷಣೆ– ಸೂಪರ್ ಸ್ಟಾರ್ ಹೇಳಿದ್ದೇನು?.ಕುಣಿಗಲ್: ವಾಮಾಚಾರ ಮಾಡುತ್ತಿದ್ದ ಸರ್ಕಾರಿ ಶಾಲೆಯ ಅತಿಥಿ ಶಿಕ್ಷಕನ ಭೀಕರ ಕೊಲೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.