ಬೆಂಗಳೂರು: ಪ್ರಭಾಸ್ ಹಾಗೂ ಪೃಥ್ವಿರಾಜ ಸುಕುಮಾರನ್ ಮುಖ್ಯ ಪಾತ್ರದಲ್ಲಿರುವ ಪ್ರಶಾಂತ್ ನೀಲ್ ನಿರ್ದೇಶನದ ಸಲಾರ್ ಚಿತ್ರ ಬಿಡುಗಡೆಯಾಗಿ ಒಂದು ವಾರವಾಗಿದೆ. ಸದ್ಯ ಚಿತ್ರದ ಗಳಿಕೆ ಜಾಗತಿಕ ಮಟ್ಟದಲ್ಲಿ ₹550 ಕೋಟಿ ಎಂದು ಹೊಂಬಾಳೆ ಫಿಲ್ಮ್ಸ್ ಹೇಳಿದೆ.

ಜತೆಗೆ ನಿರ್ಮಾಣ ಸಂಸ್ಥೆಯಲದ್ದೇ ಎನ್ನಲಾದ @SalaarTheSaga ಸಲಾರ್ ದಿ ಸಾಗಾ ಎಂಬ ಎಕ್ಸ್ ಖಾತೆಯಲ್ಲೂ ಈ ಕುರಿತು ಮಾಹಿತಿ ಹಂಚಿಕೊಳ್ಳಲಾಗಿದೆ.

ಶಾರುಕ್ ಖಾನ್ ಅವರ ಡಂಕಿ ಚಿತ್ರ ಹಾಗೂ ಸಲಾರ್ ಒಂದೇ ದಿನ (ಡಿಸೆಂಬರ್ 22) ಬಿಡುಗಡೆಯಾಗಿದ್ದವು. ಹೀಗಾಗಿ ಈ ಎರಡೂ ಚಿತ್ರಗಳ ಸೋಲು–ಗೆಲುವಿನ ಬಗ್ಗೆ ಫ್ಯಾನ್ಸ್ ವಾರ್ ನಡೆಯುತ್ತಿದೆ.

ಅದಾಗ್ಯೂ ಸಲಾರ್ ಚಿತ್ರ ಬಾಕ್ಸ್ ಆಫೀಸ್‌ನಲ್ಲಿ ಒಂದು ವಾರದಲ್ಲಿ ₹550 ಕೋಟಿಗೂ ಅಧಿಕ ಗಳಿಕೆ ಕಂಡಿತ್ತು ಎಂದು ಚಿತ್ರ ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲ್ಮ್ಸ್ ತಿಳಿಸಿದೆ. ಆದರೆ ಇದು ಸುಳ್ಳು ಎಂಬ ಚರ್ಚೆಗಳು ಸಾಮಾಜಿಕ ಜಾಲತಾಣದಲ್ಲಿ ನಡೆದಿವೆ.

ಸಲಾರ್ ಹಾಗೂ ಡಂಕಿ ಎರಡೂ ಚಿತ್ರಗಳು ಒಂದೇ ದಿನ ಬಿಡುಗಡೆಯಾಗಿದ್ದರಿಂದ, ಸಲಾರ್ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ ಎಂದೂ ಹಲವರು ಇದೇ ವೇದಿಕೆಯಲ್ಲಿ ಚರ್ಚಿಸುತ್ತಿದ್ದಾರೆ.

ನಿರ್ದೇಶಕ ಪ್ರಶಾಂತ್ ನೀಲ್ ಕೂಡಾ ಸಂದರ್ಶನ ಒಂದರಲ್ಲಿ ಈ ಕುರಿತು ಮೌನ ಮುರಿದಿದ್ದಾರೆ, ‘ಸಲಾರ್ ವಿರುದ್ಧ ವ್ಯವಸ್ಥಿತ ಸಂಚು ನಡೆಸಲಾಗಿದೆ. ಆದರೆ ಯಾವುದು ನಿಜ ಎಂಬುದನ್ನು ಜನರಿಗೆ ಗೊತ್ತಿದೆ’ ಎಂದಿದ್ದಾರೆ.

ಸಲಾರ್ ಚಿತ್ರ ಬಿಡುಗಡೆಯಾದ ದಿನ ಜಾಗತಿಕವಾಗಿ ₹178 ಕೋಟಿ ಗಳಿಕೆ ಮಾಡಿತ್ತು ಎಂದು ಹೊಂಬಾಳೆ ಫಿಲ್ಮ್ಸ್ ಹೇಳಿಕೊಂಡಿತ್ತು. ಪ್ರಭಾಸ್ ಅಭಿಮಾನಿಗಳು ಸಲಾರ್ ಚಿತ್ರ ಇದುವರೆಗೆ ₹500 ಕೋಟಿಗೂ ಅಧಿಕ ಗಳಿಕೆ ಕಂಡಿದೆ ಎಂದು ಹೇಳುತ್ತಿದ್ದಾರೆ.

ಅತ್ತ, ಡಂಕಿ ಚಿತ್ರ ಒಂದು ವಾರದಲ್ಲಿ ₹305 ಕೋಟಿ ಗಳಿಕೆ ಕಂಡಿದೆ ಎಂದು ಚಿತ್ರ ನಿರ್ಮಾಣ ಸಂಸ್ಥೆ ರೆಡ್ ಚಿಲ್ಲಿ ಎಂಟರ್‌ಟೈನ್ಮೆಂಟ್ ಹೇಳಿಕೊಂಡಿದೆ.

ಸಲಾರ್‌ನಲ್ಲಿ ದೇವ ಪಾತ್ರದಲ್ಲಿ ಪ್ರಭಾಸ್ ಕಾಣಿಸಿಕೊಂಡಿದ್ದರೆ, ವರದ ಪಾತ್ರದಲ್ಲಿ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ನಟಿಸಿದ್ದಾರೆ. ಶ್ರುತಿ ಹಾಸನ್, ಜಗಪತಿ ಬಾಬು, ಈಶ್ವರಿ ರಾವ್ ಹಾಗೂ ಶ್ರೀಯಾ ರೆಡ್ಡಿ ತಾರಾಗಣದಲ್ಲಿದ್ದಾರೆ. ಚಿತ್ರದ ಬಗ್ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿವೆ.
.ಸಲಾರ್ ಚಿತ್ರಕ್ಕೆ ಸೆನ್ಸಾರ್ನಿಂದ ‘A’ ಪ್ರಮಾಣಪತ್ರ: ಪ್ರಶಾಂತ್ ನೀಲ್ ಏನಂದ್ರು?.3 ದಿನಗಳಲ್ಲಿ ₹400 ಕೋಟಿ ದಾಟಿದ ‘ಸಲಾರ್’ ಚಿತ್ರದ ಗಳಿಕೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.