ಜೈಪುರ: ಬಾಲಿವುಡ್ ಜನಪ್ರಿಯ ಜೋಡಿ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾಣಿ ಇದೇ(ಫೆಬ್ರುವರಿ) 6ರಂದು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಸೆಲೆಬ್ರೆಟಿ ಫ್ಯಾಷನ್ ಡಿಸೈನರ್ ಮನೀಶ್ ಮಲ್ಹೋತ್ರಾ ಅವರು, ಕಿಯಾರಾ ಅಡ್ವಾಣಿ ಹಾಗೂ ಸಿದ್ಧಾರ್ಥ್ ಮಲ್ಹೋತ್ರಾ ಅವರ ಮದುವೆಯ ಉಡುಪುಗಳನ್ನು ಸಿದ್ಧಪಡಿಸಲಿದ್ದಾರೆ. ವಿಶೇಷವಾಗಿ ಕಿಯಾರಾ ಲೆಹಂಗಾದಲ್ಲಿ ಮತ್ತು ಸಿದ್ಧಾರ್ಥ್ ಶೆರ್ವಾನಿಯಲ್ಲಿ ಮಿಂಚಲಿದ್ದಾರೆ.

ಮನೀಶ್ ಮಲ್ಹೋತ್ರಾ ತಂಡವು ಮೆಹೆಂದಿ, ಹಳದಿ ಶಾಸ್ತ್ರ ಸೇರಿದಂತೆ ವಿವಾಹಪೂರ್ವ ಕಾರ್ಯಕ್ರಮಗಳ ಉಡುಗೆಗಳನ್ನು ಸಹ ಸಿದ್ಧಗೊಳಿಸಿದೆ. ಎರಡೂ ಕುಟುಂಬದ ಸದಸ್ಯರ ಉಡುಪುಗಳನ್ನೂ ವಿನ್ಯಾಸಗೊಳಿಸಿದೆ. ಮನೀಷ್ ಶನಿವಾರ ಮಧ್ಯಾಹ್ನ ಕಿಯಾರಾ ಜೊತೆಯೇ ಜೈಸಲ್ಮೇರ್ ತಲುಪಿದ್ದಾರೆ.

ರಾಜಸ್ತಾನದ ಜೈಸಲ್ಮೇರ್‌ನಲ್ಲಿರುವ ಐಷಾರಾಮಿ ಸೂರ್ಯಘರ್ ಹೋಟೆಲ್‌ನಲ್ಲಿ ಫೆಬ್ರುವರಿ 4ರಿಂದಲೇ ಸಂಗೀತಾ, ಮೆಹಂದಿ ಕಾರ್ಯಕ್ರಮಗಳು ಜರಗುತ್ತಿವೆ. ಫೆಬ್ರುವರಿ 12ರಂದು ಆರತಕ್ಷತೆ ನಡೆಯಲಿದೆ. ಮದುವೆಯಲ್ಲಿ ಆತ್ಮೀಯ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರಷ್ಟೇ ಭಾಗಿಯಾಗಲಿದ್ದಾರೆ.

ಈ ಹಿಂದೆ ಕಾಜೋಲ್, ಕರೀನಾ ಕಪೂರ್, ಆಲಿಯಾ ಭಟ್, ಸಲ್ಮಾನ್ ಖಾನ್, ಶಾರುಖ್ ಖಾನ್ ಸೇರಿದಂತೆ ಅನೇಕ ನಟ-ನಟಿಯರ ಉಡುಪುಗಳನ್ನು ಮನೀಶ್ ಮಲ್ಹೋತ್ರಾ ವಿನ್ಯಾಸಗೊಳಿಸಿದ್ದಾರೆ.

ಇದನ್ನು ನೋಡಿ: Video| ‘ಅಶ್ವಿನಿ ಪುನೀತ್ ರಾಜ್ಕುಮಾರ್ ನನ್ನ ಶಕ್ತಿ’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.