ಮುಂಬೈ: ವಿಜಯ್ ದೇವರಕೊಂಡ, ಮೃಣಾಲ್ ಠಾಕೂರ್ ನಟನೆಯ ತೆಲುಗಿನನ ‘ದಿ ಫ್ಯಾಮಿಲಿ ಸ್ಟಾರ್’ ಚಿತ್ರ ಒಟಿಟಿಗೆ ಬರುತ್ತದೆ. ಇದೇ 26ರಂದು ಅಮೇಜಾನ್ ಪ್ರೈಮ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ ಎಂದು ಅಮೇಜಾನ್ ಪ್ರೈಮ್ ವಿಡಿಯೊ ಬುಧವಾರ ಹೇಳಿದೆ.

ಪರಶುರಾಮ್ ಅವರು ಬರೆದು ನಿರ್ದೇಶಿಸಿರುವ ‘ದಿ ಫ್ಯಾಮಿಲಿ ಸ್ಟಾರ್’ ಸಿನಿಮಾ ಏ.5ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಗೊಂಡಿತ್ತು.

ಈ ಚಿತ್ರ ಪ್ರೈಮ್ ವಿಡಿಯೊದಲ್ಲಿ ಭಾರತವೂ ಸೇರಿದಂತೆ 240 ದೇಶ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ತೆಲುಗು, ತಮಿಳು, ಮಲಯಾಳಂ ಹಾಗೂ ಕನ್ನಡದಲ್ಲಿ ಡಬ್ಬಿಂಗ್ ಆಗಿ ಬಿಡುಗಡೆಗೊಳ್ಳಲಿದೆ ಎಂದು ಪ್ರೈಮ್ ವಿಡಿಯೊ ಹೇಳಿದೆ.

ವಿಜಯ್ ದೇವರಕೊಂಡ ಅವರ ಲೈಗರ್, ಖುಷಿ ಚಿತ್ರಗಳು ನಿರೀಕ್ಷೆಯಷ್ಟು ಯಶಸ್ಸು ಕಾಣಲಿಲ್ಲ. ಈಗ ಫ್ಯಾಮಿಲಿ ಸ್ಟಾರ್ ಚಿತ್ರ ಕೂಡ ಚಿತ್ರಮಂದಿಗಳಲ್ಲಿ ಹೆಚ್ಚು ಸುದ್ದಿ ಮಾಡಲಿಲ್ಲ. ಇದೀಗ ಸಿನಿಮಾ ಬಿಡುಗಡೆಯಾಗಿ 20 ದಿನದ ಅಂತರದಲ್ಲೇ ಒಟಿಟಿಗೆ ಬರಲು ಸಜ್ಜಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.