ಹಾಸ್ಯ ಕಾರ್ಯಕ್ರಮಗಳ ಮೂಲಕ ಪ್ರಸಿದ್ಧಿ ಪಡೆದಿರುವ ಕಪಿಲ್ ಶರ್ಮಾ ಅವರು ನೆಟ್‌ಫ್ಲಿಕ್ಸ್‌ನಲ್ಲಿ ತಮ್ಮ ಬದುಕಿನ ಕಥೆಯನ್ನು ಹೇಳಲು ಸಿದ್ಧರಾಗಿದ್ದಾರೆ.

'I am Not Done Yet' ಎಂಬಕಾರ್ಯಕ್ರಮದಲ್ಲಿ ಅವರು ಮಾತನಾಡಲಿದ್ದಾರೆ.ಇದು ಜನವರಿ 28ರಿಂದ ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಆಗಲಿದೆ ಎಂದು ಕಪಿಲ್ ಶರ್ಮಾ ಹೇಳಿದ್ದಾರೆ.

ಈ ಕುರಿತು ಇನ್‌ಸ್ಟಾಗ್ರಾಂನಲ್ಲಿ ವಿಡಿಯೊ ಹಂಚಿಕೊಂಡಿರುವ ಅವರು, ‘ನಾನು ಈಗ 25 ವರ್ಷಗಳಿಂದ ಹಾಸ್ಯ ಕಾರ್ಯಕ್ರಮಗಳಲ್ಲಿಕೆಲಸ ಮಾಡುತ್ತಿದ್ದೇನೆ.ವಾಸ್ತವವಾಗಿ, ನಾನು ಹಾಸ್ಯವನ್ನು ಎಂದಿಗೂ ಗಂಭೀರವಾಗಿ ತೆಗೆದುಕೊಂಡಿಲ್ಲ. ಏಕೆಂದರೆ ಪಂಜಾಬಿಗಳಾದ ನಾವು ಯಾವಾಗಲೂ ತಮಾಷೆ ಮಾಡುತ್ತೇವೆ. ನಮಗಿದುಸ್ವಾಭಾವಿಕವಾಗಿ ಬರುವ ಗುಣವಾಗಿದೆ. ಇದರಿಂದಹಣ ಪಡೆಯಬಹುದು ಎಂಬವಿಚಾರನನಗೆ ತಿಳಿದಿರಲಿಲ್ಲ’ ಎಂದು ಹೇಳಿದ್ದಾರೆ.

‘ಒಬ್ಬ ಕಲಾವಿದನಲ್ಲಿ ಯಾವಾಗಲೂ ಆಂತರಿಕವಾದ ಧ್ವನಿ ಇರುತ್ತದೆ.ನಾನು ಸೃಜನಶೀಲ ಕೆಲಸಗಳನ್ನು ಮಾಡುವುದುಇನ್ನೂ ಮುಗಿದಿಲ್ಲ. ಬೇರೆ ಏನಾದರೂ ಮಾಡಬೇಕು ಎಂಬುದುಧ್ವನಿಯಿಂದ ಕೇಳಿಬರುತ್ತದೆ. ಈ ಹಿನ್ನೆಲೆಯಲ್ಲಿನೆಟ್‌ಫ್ಲಿಕ್ಸ್‌ನ ವೇದಿಕೆ ನನ್ನನ್ನು ಆಕರ್ಷಿಸಿತು. ನೆಟ್‌ಪ್ಲಿಕ್ಸ್‌ನವರೂಸಹ ನನ್ನ ಕಥೆಯನ್ನು ಕೇಳಲು ಆಸಕ್ತಿ ಹೊಂದಿದ್ದಾರೆ’ ಎಂದು ಕಪಿಲ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.