ಮಂಡ್ಯ: ‘ಮಧುಚಂದ್ರವನ್ನು ಅರ್ಧಕ್ಕೆ ನಿಲ್ಲಿಸಿ ವಾಪಸ್ ಬಂದಿದ್ದಕ್ಕೆ ಬೇಸರವಿದೆ. ನಾವು ನೆದರ್‌ಲೆಂಡ್‌ಗೆ ತೆರಳಿದ್ದೆವು. ಆದರೆ ಇಟಲಿಗೆ ತೆರಳಿದ್ದೆವು ಎಂಬ ಸುಳ್ಳು ಸುದ್ದಿ ಹರಿದಾಡುತ್ತಿದೆ’ ಎಂದು ಬಿಗ್‌ಬಾಸ್ ಖ್ಯಾತಿಯ ಚಂದನ್‌ಶೆಟ್ಟಿ– ನಿವೇದಿತಾ ದಂಪತಿ ಶನಿವಾರ ಬೇಸರ ವ್ಯಕ್ತಪಡಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ‘ನಾವು ಇಟಲಿಗೆ ತೆರಳಿದ್ದೆವು ಎಂಬುದಕ್ಕೆ ಸಾಕ್ಷಿ ಇಲ್ಲ. ಆದರೂ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ನೆದರ್‌ಲೆಂಡ್ ಹೋಗಿದ್ದ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದೇವೆ. ಅಲ್ಲಿ ಕೊರೊನಾ ಸೋಂಕಿನ ಭೀತಿ ಇರಲಿಲ್ಲ. ಆದರೂ ಆರೋಗ್ಯ ದೃಷ್ಟಿಯಿಂದ ಮಧುಚಂದ್ರವನ್ನು ಅರ್ಧಕ್ಕೆ ನಿಲ್ಲಿಸಿ ವಾಪಸ್ ಮರಳಿದೆವು’ ಎಂದು ಹೇಳಿದರು.

‘ವಾಪಸ್ ಬಂದ ಕೂಡಲೇ ರಕ್ತ ಪರೀಕ್ಷೆ ಸೇರಿ ಎಲ್ಲಾ ರೀತಿಯ ಪರೀಕ್ಷೆ ಮಾಡಿಸಿಕೊಂಡಿದ್ದು ಆರೋಗ್ಯದಿಂದ ಇದ್ದೇವೆ. ಮುಂದೆಯೂ ಎಲ್ಲಾ ರೀತಿಯ ಆರೋಗ್ಯ ಪರೀಕ್ಷೆಗೆ ಸಿದ್ಧರಿದ್ದೇವೆ. ಕೋವಿಡ್– 19 ಭೀತಿ ಮುಗಿದ ನಂತರ ಮತ್ತೆ ಮಧುಚಂದ್ರಕ್ಕೆ ತೆರಳುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.