ದೆಹಲಿ: 'ತಾಂಡವ್' ವೆಬ್ ಸರಣಿಯ ಕುರಿತ ವಿವಾದಕ್ಕೆ ಸಂಬಂಧಿಸಿದಂತೆ ಆನ್ಲೈನ್ ಸ್ಟ್ರೀಮಿಂಗ್ ವೇದಿಕೆ 'ಅಮೆಜಾನ್ ಪ್ರೈಮ್' ಮಂಗಳವಾರ ಬೇಷರತ್ ಕ್ಷಮೆ ಕೋರಿದೆ. ಅಲ್ಲದೆ, ಆಕ್ಷೇಪಿಸಲಾದ ದೃಶ್ಯಾವಳಿಗಳನ್ನು ತೆಗೆದುಹಾಕಿರುವುದಾಗಿ ಖಚಿತಪಡಿಸಿದೆ.

ಇದನ್ನೂ ಓದಿ:'ತಾಂಡವ್'ನಲ್ಲಿ ಹಿಂದೂ ದೇವರು, ದೇವತೆಗಳ ಲೇವಡಿ; ವಿವರಣೆ ಕೇಳಿದ ಕೇಂದ್ರ ಸರ್ಕಾರ

ಸೈಫ್ ಅಲಿ ಖಾನ್ ಮತ್ತು ಮೊಹಮ್ಮದ್ ಝೀಷನ್ ಅಯೂಬ್ ಅಭಿನಯದ, ರಾಜಕೀಯ ಕಥಾಹಂದರದ ವೆಬ್ ಸರಣಿಯ ಕಾಲೇಜಿನ ನಾಟಕದ ದೃಶ್ಯಕ್ಕೆ ಸಂಬಂಧಿಸಿದಂತೆ ಭಾರಿ ವಿವಾದ ಉಂಟಾಗಿತ್ತು. ಈ ಕಾರ್ಯಕ್ರಮವು ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟುಮಾಡಿದೆ ಎಂದು ಆರೋಪಿಸಿ ಹಲವು ಎಫ್ಐಆರ್ ದಾಖಲಾಗಿದ್ದವು.

ಇದನ್ನೂ ಓದಿ:ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪ: ಕ್ಷಮೆ ಕೋರಿದ 'ತಾಂಡವ್' ತಂಡ

'ಇತ್ತೀಚೆಗೆ ಪ್ರಾರಂಭವಾದ ವೆಬ್ ಸರಣಿ 'ತಾಂಡವ್'ನಲ್ಲಿ ಕೆಲವು ದೃಶ್ಯಗಳನ್ನು ಆಕ್ಷೇಪಾರ್ಹವೆಂದು ವೀಕ್ಷಕರು ಪರಿಗಣಿಸಿದ್ದಾರೆ. ಇದು ನಮ್ಮ ಉದ್ದೇಶವಾಗಿರಲಿಲ್ಲ. 'ಅಮೆಜಾನ್ ಪ್ರೈಮ್' ಮತ್ತೊಮ್ಮೆ ತೀವ್ರ ವಿಷಾದ ವ್ಯಕ್ತಪಡಿಸುತ್ತಿದೆ. ಆಕ್ಷೇಪಿಸಿದ ದೃಶ್ಯಗಳನ್ನು ನಮ್ಮ ಗಮನಕ್ಕೆ ಬಂದ ಕೂಡಲೇ ತೆಗೆದುಹಾಕಲಾಗಿದೆ,' ಎಂದು ಪ್ರೈಮ್ ತಿಳಿಸಿದೆ.

ಇದನ್ನೂ ಓದಿ:‘ತಾಂಡವ್’ ವೆಬ್ ಸರಣಿ ವಿರುದ್ಧ ಎಫ್ಐಆರ್ ದಾಖಲು

ವಿವಾದಕ್ಕೆ ಸಂಬಂಧಿಸಿದಂತೆ ವೆಬ್ ಸರಣಿಯ ನಿರ್ದೇಶ ಅಲಿ ಅಬ್ಬಾಸ್ ಜಾಫರ್ ಮತ್ತು ತಂಡದವರು ಈಗಾಗಲೇ ಕ್ಷಮೆ ಕೋರಿದ್ದಾರೆ.

ಇದನ್ನೂ ಓದಿ:ಒಟಿಟಿ ನಿಯಂತ್ರಣಕ್ಕೆ ಕ್ರಮ: ಮಾಹಿತಿ ನೀಡಲು ಕೇಂದ್ರಕ್ಕೆ ನೋಟಿಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.