ಬೆಂಗಳೂರು:  ಬೆಂಗಳೂರು ನಗರದ 106 ಕೆರೆಗಳಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ ನೀರಿನ ಗುಣಮಟ್ಟವನ್ನು ಪರೀಕ್ಷಿಸುತ್ತಿದೆ. ಇದರಲ್ಲಿ 66 ಕೆರೆಗಳ ನೀರು ಮಾತ್ರ ವನ್ಯಜೀವಿಗಳು ಕುಡಿಯಲು ಮತ್ತು ಮೀನುಗಾರಿಕೆಗೆ ಯೋಗ್ಯ. ಉಳಿದ ಕೆರೆಗಳಲ್ಲಿ ಲೋಹ, ಒಳಚರಂಡಿ ತ್ಯಾಜ್ಯ ಸೇರಿಕೊಂಡು ಕಲ್ಮಶದ ತಾಣವಾಗಿವೆ.

ರಾಜರಾಜೇಶ್ವರಿನಗರ ವ್ಯಾಪ್ತಿಯ ಸುಬ್ರಮಣ್ಯಪುರ, ಮಲ್ಲತ್ತಹಳ್ಳಿ, ದೊರೆಕೆರೆ, ಹೊಸಕೆರೆಹಳ್ಳಿ, ಶಿವಪುರ, ಕರಿಹೋಬನಹಳ್ಳಿ, ದಾಸರಹಳ್ಳಿ ವ್ಯಾಪ್ತಿಯ ಗಂಗೊಂಡನಹಳ್ಳಿ, ಅಂದ್ರಹಳ್ಳಿ, ಕಾಚೋಹಳ್ಳಿ, ವಿಶ್ವನೀಡಂ, ಮಾಚೋಹಳ್ಳಿ, ದೊಡ್ಡಬಿದರಕಲ್ಲು, ಬೊಮ್ಮನಹಳ್ಳಿ ವ್ಯಾಪ್ತಿಯ ಮಡಿವಾಳ, ಹುಳಿಮಾವು, ಸಿಂಗಸಂದ್ರ, ಪರಪ್ಪನ ಅಗ್ರಹಾರ, ಹರಳೂರು, ಮಹದೇವಪುರ ವ್ಯಾಪ್ತಿಯ ಕಲ್ಕೆರೆ, ಸಾದರಮಂಗಲ, ಗರುಡಾಚಾರ್ ಪಾಳ್ಯ, ರಾಂಪುರ, ವಿಭೂತಿಪುರ, ಯಲಹಂಕ ವ್ಯಾಪ್ತಿಯ ಚೆಲ್ಲಕೆರೆ, ಸಿಂಗಾಪುರ, ನರಸೀಪುರ, ರಾಚೇನಹಳ್ಳಿ, ಕೋಗಿಲು, ಪೂರ್ವ ಭಾಗದ ಹಲಸೂರು, ಬೈರಸಂದ್ರ ಕೆರೆಗಳು ಲೋಹಯುಕ್ತ ಕಲ್ಮಶದ ತಾಣಗಳಾಗಿವೆ. ಎ,ಬಿ,ಸಿ ವರ್ಗದಲ್ಲಿ ಯಾವುದೇ ಕೆರೆಗಳಿಲ್ಲ. ‘ಡಿ’ ವರ್ಗದಲ್ಲಿ 66 ಹಾಗೂ ‘ಇ’ ವರ್ಗದಲ್ಲಿ 40 ಕೆರೆಗಳಿವೆ. ಅಕ್ಟೋಬರ್ಗೆ ಹೋಲಿಸಿದರೆ ನವೆಂಬರ್ನಲ್ಲಿ ‘ಇ’ ವರ್ಗದಲ್ಲಿ ಕೆರೆಗಳ ಸಂಖ್ಯೆ ಹೆಚ್ಚಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.