ಮೈಸೂರು ಜಿಲ್ಲೆ ಹುಣಸೂರು ತಾಲ್ಲೂಕಿನ ಗಾವಡಗೆರೆ ಗ್ರಾಮದ ಕೆಪಿಎಸ್ ನೋಟ
ಕಲಬುರಗಿ ಜಿಲ್ಲೆ ಚಿಂಚೋಳಿಯಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆ ಶಿಥಿಲಾವಸ್ಥೆ ತಲುಪಿದೆ.
ಕೆ.ಆರ್.ಪೇಟೆ ಕೆಪಿಎಸ್‌ಗೆ ಮಕ್ಕಳನ್ನು ಸೇರಿಸಲು ಪೋಷಕರು ಸಾಲುಗಟ್ಟಿ ನಿಂತಿದ್ದರು
ಚಿತ್ರದುರ್ಗ ತಾಲ್ಲೂಕು ಹಿರಿಯೂರಿನ ಹೊಸ ಯಳನಾಡು ಕೆಪಿಎಸ್ ಶಾಲೆಯ ಪೂರ್ವ ಪ್ರಾಥಮಿಕ ಮಕ್ಕಳಿಗೆ ಪಾಠ
ಕೆ.ಆರ್.ಪೇಟೆ ತಾಲ್ಲೂಕು ಕಿಕ್ಕೇರಿಯ ಕೆಪಿಎಸ್ ಹೊರನೋಟ
ಎರಡು ವರ್ಷಗಳಲ್ಲಿ ಇನ್ನೂ 200 ಕೆಪಿಎಸ್
ಹೋಬಳಿ ಮಟ್ಟದಲ್ಲಿ ಪಬ್ಲಿಕ್ ಶಾಲೆ ಆರಂಭಿಸಲು ಸಾಕಷ್ಟು ಬೇಡಿಕೆ ಇದೆ. ಈಗಾಗಲೇ ಕೆಪಿಎಸ್ ಶಾಲೆಗಳ ಸಂಖ್ಯೆ 300 ಗಡಿ ತಲುಪಿದೆ. ಎರಡು ವರ್ಷದಲ್ಲಿ ಇನ್ನೂ 200 ಶಾಲೆಗಳನ್ನು ತೆರೆಯಲಾಗುವುದು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಅಗತ್ಯ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಶೌಚಾಲಯ, ಸ್ವಚ್ಛತೆ ನಿರ್ವಹಣೆಗಾಗಿಯೇ ₹153 ಕೋಟಿ, ಕೊಠಡಿಗಳ ನಿರ್ಮಾಣಕ್ಕಾಗಿ ₹550 ಕೋಟಿ, ಶೌಚಾಲಯಗಳ ನಿರ್ಮಾಣಕ್ಕೆ ₹ 200 ಕೋಟಿ, ಶಿಥಿಲಗೊಂಡಿರುವ ಶಾಲೆಗಳ ದುರಸ್ತಿಗೆ ₹100 ಕೋಟಿ ಒದಗಿಸಲಾಗಿದೆ. ಹಂತಹಂತವಾಗಿ ಎಲ್ಲ ಶಾಲೆಗಳಿಗೂ ಸುಸಜ್ಜಿತ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮಾಹಿತಿ ನೀಡಿದರು.
ಕೆಪಿಎಸ್‌ನ ಮೂರು ವಿಭಾಗಗಳನ್ನು ಶೀಘ್ರ ಆಡಳಿತಾತ್ಮಕವಾಗಿ ಒಂದುಗೂಡಿಸಲಾಗುವುದು
–ಬಿ.ವಿ.ಕಾವೇರಿ, ಆಯುಕ್ತರು, ಶಾಲಾ ಶಿಕ್ಷಣ ಇಲಾಖೆಹಲವೆಡೆ ಕೆಪಿಎಸ್ ಶಾಲೆಗಳು ಖಾಸಗಿ ಶಾಲೆಗಳನ್ನೂ ಮೀರಿಸಿವೆ. ಎಲ್ಲಾ ಶಾಲೆಗಳೂ ಆ ರೀತಿಯಾಗಲು ಅವಕಾಶವಿದೆ
–ಎಂ.ರೇಣುಕಮ್ಮ , ಹಿರಿಯ ಸಹ ಶಿಕ್ಷಕಿ, ಮಂಡ್ಯ ಕೆಪಿಎಸ್ಕಟಕೋಳ ಕೆಪಿಎಸ್‌ನಲ್ಲಿ ಕಲಿಕಾ ಚಟುವಟಿಕೆ ಉತ್ತಮವಾಗಿದೆ. ಇಂಗ್ಲಿಷ್ ವಿಭಾಗಕ್ಕೆ ಪ್ರತ್ಯೇಕವಾಗಿ ಶಿಕ್ಷಕರನ್ನು ನೇಮಿಸಬೇಕು
–ಸುಶೀಲ ಕುಮಾರ ತಂಗೋಜಿ, ವಿದ್ಯಾರ್ಥಿಯ ತಂದೆ, ಕಟಕೋಳ ಬೆಳಗಾವಿ ಜಿಲ್ಲೆ