ತುಮಕೂರು: ನಿಗದಿತ ಪ್ರಮಾಣಕ್ಕಿಂತ ಹೆಚ್ಚು ಹೊಗೆ ಉಗುಳುವ ವಾಹನದ ಪಕ್ಕದಲ್ಲಿ ಸುಸ್ಥಿತಿಯಲ್ಲಿ ಇರುವ ಮತ್ತೊಂದು ವಾಹನ ನಿಲ್ಲಿಸಿ, ಮಾಪಕದ ನಳಿಕೆಯನ್ನು ಇದೇ ವಾಹನದ ಸೈಲೆನ್ಸರ್ ಒಳಗೆ ಹಾಕಲಾಗುತ್ತದೆ. ಕ್ಯಾಮೆರಾವನ್ನು ಹೊಗೆ ಹೆಚ್ಚು ಉಗುಳುವ ವಾಹನದ ಮುಂದೆ ಹಿಡಿದು ತಪಾಸಣೆ ಮಾಡುತ್ತಿರುವಂತೆ ತೋರಿಸಿ ಪ್ರಮಾಣಪತ್ರ ಸಿದ್ಧಪಡಿಸುವ ಜಾಲ ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸುತ್ತಿದೆ.

ಇಂತಹ ‘ಕಾರ್ಯವಿಧಾನ’ದಿಂದಾಗಿ ಎಷ್ಟೇ ಹೊಗೆ ಉಗುಳುವ ವಾಹನಕ್ಕಾದರೂ ಸುಲಭವಾಗಿ ಪ್ರಮಾಣ ಪತ್ರ ಪಡೆಯಬಹುದು ಎಂಬುದು ಜಾಲದ ಒಳಹೊರಗನ್ನೂ ಬಲ್ಲವರ ಅನುಭವದ ಮಾತುಗಳು.

ರಸ್ತೆಗಿಳಿಯುವ ಪ್ರತಿ ವಾಹನವೂ ಮಾಲಿನ್ಯ ನಿಯಂತ್ರಣ ಪ್ರಮಾಣ ಪತ್ರ ಹೊಂದಿರಬೇಕು. ಆದರೆ, ಈ ಪ್ರಮಾಣ ಪತ್ರವನ್ನು ನೀಡುವುದು ನೋಂದಾಯಿತ ಖಾಸಗಿ ಸಂಸ್ಥೆಯವರು. ಇದು ಭ್ರಷ್ಟಾಚಾರದ ಇನ್ನೊಂದು ಮೂಲ ಎನ್ನುತ್ತಾರೆ ಅನುಭವಸ್ಥರು.

ಸಾರಿಗೆ ಇಲಾಖೆಯಲ್ಲಿ ಮಾಲಿನ್ಯ ತಪಾಸಣೆ ಮಾಡಲು ಬೇರೆ ವ್ಯವಸ್ಥೆ ಇಲ್ಲವಾಗಿದ್ದು, ವಾಹನ ಸುಸ್ಥಿತಿಯಲ್ಲಿದೆ ಎಂಬುದನ್ನು ಖಚಿತಪಡಿಸಿಕೊಳ್ಳಲು ಖಾಸಗಿಯವರು ನೀಡುವ ಪ್ರಮಾಣ ಪತ್ರವನ್ನೇ ಅವಲಂಬಿಸಬೇಕಾಗಿದೆ. ಹೀಗಾಗಿ ಪ್ರಮಾಣಪತ್ರ ನೀಡುವ ಪ್ರತಿಯೊಂದು ಕೇಂದ್ರದಿಂದಲೂ ಇಲಾಖೆಗೆ ತಿಂಗಳಿಗೆ ಇಂತಿಷ್ಟು ಎಂದು ನಿಗದಿಯಾಗಿರುತ್ತದೆ ಎಂಬ ಆರೋಪ ಸಾಮಾನ್ಯ.

ವಾಹನಗಳ ವಾಯುಮಾಲಿನ್ಯ ತಪಾಸಣಾ ಕೇಂದ್ರದಲ್ಲಿ ಒಂದು ವರ್ಷದ ಅವಧಿಗೆ ನೀಡಬೇಕಿದ್ದ ಪ್ರಮಾಣ ಪತ್ರವನ್ನು ಕೇವಲ ಆರು ತಿಂಗಳಿಗೆ ನೀಡುತ್ತಿದ್ದು, ವಾಹನ ಮಾಲೀಕರು ವರ್ಷಕ್ಕೆ ಎರಡು ಬಾರಿ ತಪಾಸಣೆ ಮಾಡಿಸಬೇಕಿರುವುದು ದುಬಾರಿಯಾಗಿ ಪರಿಣಮಿಸಿದೆ. 2018ರ ಏಪ್ರಿಲ್ 1ರ ನಂತರ ಖರೀದಿಯಾದ ತ್ರಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ಒಂದು ವರ್ಷದವರೆಗೆ ಹಾಗೂ ಉಳಿದ ಎಲ್ಲಾ ವಾಹನಗಳಿಗೆ ಆರು ತಿಂಗಳವರೆಗೆ ಮಾತ್ರ ಪ್ರಮಾಣ ಪತ್ರ ನೀಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.