ನುಗ್ಗೆಸೊಪ್ಪಿನ ಅಕ್ಕಿ ರೊಟ್ಟಿ

ಬೇಕಾಗುವ ಸಾಮಗ್ರಿಗಳು: ಹುರಿದು ಸಿಪ್ಪೆ ಬಿಡಿಸಿದ ಶೇಂಗಾ 3 ಟೇಬಲ್ ಚಮಚ, 3 ಟೇಬಲ್ ಚಮಚ ಹುರಿಗಡಲೆ, 3 ಕಪ್ (ಮುಕ್ಕಾಲು ಲೀಟರ್) ನೀರು, ಜೀರಿಗೆ 1 ಟೀ ಚಮಚ, ಚಿಕ್ಕದಾಗಿ ಕತ್ತರಿಸಿದ ಈರುಳ್ಳಿ 2, ನುಗ್ಗೆಸೊಪ್ಪು 1 ಕಪ್ (150 ಗ್ರಾಂ), ತೆಂಗಿನತುರಿ 4 ಟೇಬಲ್ ಚಮಚ, ಹಸಿಮೆಣಸಿನಕಾಯಿ ಚಿಕ್ಕದಾಗಿ ಹೆಚ್ಚಿದ್ದು 2, ಹಸಿಶುಂಠಿ ಚಿಕ್ಕದಾಗಿ ಕತ್ತರಿಸಿದ್ದು 1 ಇಂಚು, ಅಕ್ಕಿಹಿಟ್ಟು 3 ಕಪ್ (500 ಗ್ರಾಂ), ಎಣ್ಣೆ ಅಥವಾ ತುಪ್ಪ ಬೇಯಿಸಲು.

ತಯಾರಿಸುವ ವಿಧಾನ: ಶೇಂಗಾ ಮತ್ತು ಹುರಿಗಡಲೆಯನ್ನು ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಿ. ಬಾಣಲೆಗೆ ನೀರನ್ನು ಹಾಕಿ ಕುದಿ ಬರಿಸಿ. ಒಲೆಯನ್ನು ಆರಿಸಿ ತಿಳಿಸಿರುವ ಎಲ್ಲಾ ಸಾಮಗ್ರಿಗಳನ್ನು ಬಿಸಿ ನೀರಿಗೆ ಸೇರಿಸಿ ಹಿಟ್ಟು ಗಂಟಾಗದ ರೀತಿ ಮಿಶ್ರಣ ಮಾಡಿ. ಬಳಿಕ ಒಂದೇ ರೀತಿಯಲ್ಲಿ ಹಿಟ್ಟಿನಿಂದ ಉಂಡೆ ಗಳನ್ನು ಕಟ್ಟಿಕೊಳ್ಳಿ. ತಯಾರಿಸಿದ ಹಿಟ್ಟಿನ ಉಂಡೆಗಳನ್ನು ತವಾಕ್ಕೆ ತುಪ್ಪವನ್ನು ಹಾಕಿ ಕೈಯಲ್ಲಿ ತೆಳುವಾಗಿ ತಟ್ಟಿಕೊಳ್ಳಿ. ಬಾಳೆಎಲೆ ಅಥವಾ ಬೈಂಡಿಂಗ್ ಪೇಪರಿನಲ್ಲೂ ತಟ್ಟಿ ಕೊಳ್ಳಬಹುದು. ಬಳಿಕ ಬೇಯಿಸುವಾಗ ರೊಟ್ಟಿಯ ಮೇಲೆ ತುಪ್ಪ ಅಥವಾ ಎಣ್ಣೆಯನ್ನು ಹಾಕಿ ಎರಡೂ ಬದಿಯನ್ನು ಚೆನ್ನಾಗಿ ಬೇಯಿಸಿಕೊಳ್ಳಿ.

ನುಗ್ಗೆ ಸೊಪ್ಪಿನ ದಾಲ್

ಬೇಕಾಗುವ ಸಾಮಗ್ರಿಗಳು: ಹೆಸರುಬೇಳೆ 1/2 ಕಪ್, ತೊಗರಿಬೇಳೆ 1/2 ಕಪ್, ಕಡಲೆಬೇಳೆ 1/2 ಕಪ್, ಈರುಳ್ಳಿ ಚಿಕ್ಕದಾಗಿ ಕತ್ತರಿಸಿದ್ದು 1, ಟೊಮೆಟೊ 1, ಅರಿಶಿಣಪುಡಿ 1/2 ಟೀ ಚಮಚ, ಎಣ್ಣೆ, ನೀರು 5 ಕಪ್, ತುಪ್ಪ 2 ಟೇಬಲ್ ಚಮಚ, ಸಾಸಿವೆ 1 ಟೀ ಚಮಚ, ಜೀರಿಗೆ 1 ಟೀ ಚಮಚ, ಇಂಗು 1/4 ಟೀ ಚಮಚ, 2 ತುಂಡು ಮಾಡಿದ ಒಣಮೆಣಸಿನಕಾಯಿ, ಕರಿಬೇವು 10, ಬೆಳ್ಳುಳ್ಳಿ 10 ರಿಂದ 15, ಶುಂಠಿ 1 ಇಂಚು, ಹಸಿಮೆಣಸಿನಕಾಯಿ ಐದಾರು, ಸಾಂಬಾರ್ ಈರುಳ್ಳಿ 1 ಕಪ್, ನುಗ್ಗೆಸೊಪ್ಪು 200ಗ್ರಾಂ, ನಿಂಬೆ ಗಾತ್ರದ ಹುಣಸೆಹಣ್ಣು, ರುಚಿಗೆ ತಕ್ಕಷ್ಟು ಉಪ್ಪು, ತೆಂಗಿನ ತುರಿ 2 ಟೇಬಲ್ ಚಮಚ.
ತಯಾರಿಸುವ ವಿಧಾನ: ತಿಳಿಸಿರುವ ಬೇಳೆಗಳನ್ನು ತೊಳೆದು ಅರ್ಧ ಗಂಟೆ ನೀರಿನಲ್ಲಿ ನೆನೆಸಿಡಿ. ಬಳಿಕ ನೀರನ್ನು ಸೋಸಿಕೊಂಡು ಕುಕ್ಕರಿಗೆ ಹಾಕಿ. ಜೊತೆಗೆ ಕತ್ತರಿಸಿದ ಈರುಳ್ಳಿ, ಟೊಮೆಟೊ, ಅರಿಶಿನಪುಡಿ, 1 ಟೀ ಚಮಚ ಎಣ್ಣೆ, ಮೂರು ಕಪ್ ನೀರು ಸೇರಿಸಿ ಕುಕ್ಕರಿನ ಮುಚ್ಚಳ ಮುಚ್ಚಿ 5 ವಿಷಲ್ ಬರುವರೆಗೆ ಬೇಯಿಸಿ. ಬಾಣಲೆಗೆ ತುಪ್ಪವನ್ನು ಹಾಕಿ ಬಿಸಿ ಮಾಡಿಕೊಳ್ಳಿ. ಸಾಸಿವೆ, ಜೀರಿಗೆ, ಇಂಗು, ಒಣಮೆಣಸಿನಕಾಯಿ, ಕರಿಬೇವು, ಬೆಳ್ಳುಳ್ಳಿ, ಶುಂಠಿ, ಹಸಿಮೆಣಸಿನಕಾಯಿ ಹಾಕಿ ಬಣ್ಣ ಬದಲಾಗುವರೆಗೆ ಹುರಿಯಿರಿ. ಬಳಿಕ ಸಾಂಬಾರ್ ಈರುಳ್ಳಿಯನ್ನು ಸೇರಿಸಿ ಸಣ್ಣ ಉರಿಯಲ್ಲಿ 5 ನಿಮಿಷ ಹುರಿಯಿರಿ. ಈಗ ನುಗ್ಗೆಸೊಪ್ಪನ್ನು ಸೇರಿಸಿ 2 ನಿಮಿಷ ಬಾಡಿಸಿ. ನಂತರ ಹುಣಸೆಹಣ್ಣಿನ ರಸವನ್ನು ತಯಾರಿಸಿ ಮಿಶ್ರಣಕ್ಕೆ ಸೇರಿಸಿ. ಬಳಿಕ ಕುಕ್ಕರಿನಲ್ಲಿ ಬೇಯಿಸಿದ ಬೇಳೆಯನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈಗ 2 ಕಪ್ ನೀರನ್ನು ಸೇರಿಸಿ ಮಿಶ್ರಣಕ್ಕೆ ಸೇರಿಸಿ ಮಿಶ್ರಣ ಮಾಡಿ. ನಂತರ ರುಚಿಗೆ ತಕ್ಕಷ್ಟು ಉಪ್ಪನ್ನು ಸೇರಿಸಿ ಮಿಶ್ರಣ ಮಾಡಿ 5 ನಿಮಿಷ ಮುಚ್ಚಳ ಮುಚ್ಚಿ ಬೇಯಿಸಿ. ಕುದಿ ಬಂದ ಬಳಿಕ ಮುಚ್ಚಳ ತೆಗೆದು ತೆಂಗಿನತುರಿ ಸೇರಿಸಿ ಒಲೆಯಿಂದ ಇಳಿಸಿ. ರುಚಿಕರವಾದ ನುಗ್ಗೆಸೊಪ್ಪಿನ ದಾಲ್ ಸವಿಯಲು ಸಿದ್ಧ.

ನುಗ್ಗೆ ಸೊಪ್ಪಿನ ಪುಲಾವ್

ಬೇಕಾಗುವ ಸಾಮಗ್ರಿಗಳು: ತುಪ್ಪ 2 ಟೇಬಲ್ ಚಮಚ, ಜೀರಿಗೆ 1 ಟೀ ಚಮಚ, ಪುಲಾವ್ಎಲೆ 1, ಚಕ್ಕೆ 1 ಇಂಚು, ಲವಂಗ 4, ಏಲಕ್ಕಿ 2, ಕಾಳುಮೆಣಸು 10, ಕತ್ತರಿಸಿದ ಹಸಿಮೆಣಸಿನಕಾಯಿ 2, ಈರುಳ್ಳಿ ಚಿಕ್ಕದಾಗಿ ಕತ್ತರಿಸಿದ್ದು 2, ಶುಂಠಿಬೆಳ್ಳುಳ್ಳಿ ಪೇಸ್ಟ್ 1 ಟೀ ಚಮಚ, ಟೊಮೆಟೊ 2 ಚಿಕ್ಕದಾಗಿ ಕತ್ತರಿಸಿಕೊಳ್ಳಿ, ಅರಿಶಿಣ 1/2 ಟೀ ಚಮಚ, ಅಚ್ಚಖಾರದಪುಡಿ 1/2 ಟೀ ಚಮಚ, ಧನಿಯಾಪುಡಿ 1/2 ಟೀ ಚಮಚ, ಜೀರಿಗೆ ಪುಡಿ 1/2 ಟೀ ಚಮಚ, ಗರಂಮಸಾಲೆ 1/2 ಟೀ ಚಮಚ, ನುಗ್ಗೆಸೊಪ್ಪು 200ಗ್ರಾಂ, ಬಟಾಣಿ 100ಗ್ರಾಂ, ಬಾಸುಮತಿ ಅಕ್ಕಿ 1 ಕಪ್, ತೆಂಗಿನ ಹಾಲು 1 ಕಪ್, ನೀರು 1 ಕಪ್, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಕುಕ್ಕರಿಗೆ ತುಪ್ಪವನ್ನು ಹಾಕಿ ಬಿಸಿ ಮಾಡಿಕೊಳ್ಳಿ. ಬಳಿಕ ಜೀರಿಗೆ, ಪುಲಾವ್ ಎಲೆ, ಚಕ್ಕೆ, ಲವಂಗ, ಏಲಕ್ಕಿ, ಕಾಳುಮೆಣಸು ಹಾಕಿ ಕೆಲವು ಸೆಕೆಂಡುಗಳ ಕಾಲ ಹುರಿಯಿರಿ. ನಂತರ ಈರುಳ್ಳಿ ಮತ್ತು ಹಸಿಮೆಣಸಿಕಾಯಿ ಹಾಕಿ ಬಾಡಿಸಿ. ಈಗ ಶುಂಠಿಬೆಳ್ಳುಳ್ಳಿ ಪೇಸ್ಟ್ ಹಾಕಿ ಹಸಿ ವಾಸನೆ ಹೋಗುವರೆಗೆ ಹುರಿಯಿರಿ. ನಂತರ ಟೊಮೆಟೊ ಸೇರಿಸಿ ಮೆತ್ತಗಾಗುವರೆಗೆ ಹುರಿಯಿರಿ. ಬಳಿಕ ತಿಳಿಸಿರುವ ಮಸಾಲ ಸಾಮಗ್ರಿಗಳನ್ನು ಸೇರಿಸಿ ಮಿಶ್ರಣ ಮಾಡಿ. ಈಗ ನುಗ್ಗೆಸೊಪ್ಪು ಸೇರಿಸಿ ಕೆಲವು ಸೆಕೆಂಡುಗಳ ಕಾಲ ಹುರಿಯಿರಿ. ಬಟಾಣಿ ಸೇರಿಸಿ ಮಿಶ್ರಣ ಮಾಡಿ. ನಂತರ ತೊಳೆದು 20 ನಿಮಿಷ ಹಾಗೇ ಇಟ್ಟಿರುವ ಬಾಸುಮತಿ ಅಕ್ಕಿಯನ್ನು ಸೇರಿಸಿ ಮಿಶ್ರಣ ಮಾಡಿ. ಈಗ ನೀರು, ತೆಂಗಿನಹಾಲು, ಉಪ್ಪನ್ನು ಸೇರಿಸಿ ಮಿಶ್ರಣ ಮಾಡಿ. ಕುಕ್ಕರಿನ ಮುಚ್ಚಳ ಮುಚ್ಚಿ ಮೂರು ವಿಷಲ್ ಬರುವವರೆಗೆ ಬೇಯಿಸಿ. ರುಚಿಕರವಾದ ನುಗ್ಗೆಸೊಪ್ಪಿನ ಪುಲಾವ್ ಅನ್ನು ರಾಯಿತದೊಂದಿಗೆ ಸವಿಯಿರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.