ನೆಂಟರು, ಗೆಳೆಯರು ಅಥವಾ ಸಂಬಂಧಿಕರು ಮನೆಗೆ ಹಠಾತನೇ ಬಂದಾಗ ತಕ್ಷಣದಲ್ಲಿ ಯಾವ ಅಡುಗೆ ಮಾಡುವುದು ಎಂಬ ಯೋಚನೆ!? ಮೊಟ್ಟೆ ಇದ್ದರಂತೂ ಹತ್ತು ನಿಮಿಷದಲ್ಲಿ ಎಗ್‌ರೈಸ್ ಮಾಡಿ ನೆಂಟರು, ಗೆಳೆಯರ ಮನ ತಣಿಸಬಹುದು. ಎಗ್‌ರೈಸ್ ಮಾಡಲು ಬೇಕಾಗುವ ಸಾಮಗ್ರಿ ಮತ್ತು ವಿಧಾನವನ್ನು ಇಲ್ಲಿ ನೀಡಲಾಗಿದೆ.

ಸಾಮಾಗ್ರಿಗಳು
1. ಬೇಯಿಸಿದ ಅನ್ನ - ಒಂದು ಕಪ್
2. ಹಸಿಮೆಣಸಿನ ಕಾಯಿ – 4
3. ಈರುಳ್ಳಿ ಹೆಚ್ಚಿದ್ದು – 1
4. ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಸ್ಪೂನ್
5. ಅರಿಶಿನ -ಸ್ವಲ್ಪ
6. ಧನಿಯಾ ಪುಡಿ - 1/2 ಚಮಚ
7. ಖಾರದ ಪುಡಿ - 1/2 ಚಮಚ
8. ಕೊತ್ತಂಬರಿ/ ಪುದೀನ ಸೊಪ್ಪು - ಸ್ವಲ್ಪ
9. ಚಕ್ಕೆ, ಲವಂಗ, ಏಲಕ್ಕಿ - 2
10. ಬಿರಿಯಾನಿ ಎಲೆ - 1
11. ನಿಂಬೆರಸ - 1 ಚಮಚ
12. ಉಪ್ಪು - ಸ್ವಲ್ಪ
13. ಎಣ್ಣೆ - 3 ದೊಡ್ಡ ಚಮಚ
14. ಬೇಯಿಸಿದ ಮೊಟ್ಟೆ - 3
ಮಾಡುವ ವಿಧಾನ: ಮೊದಲು ಅನ್ನ ಬೇಯಿಸಿಡಿ. ಆಮೇಲೆ ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ, ಚಕ್ಕೆ ಲವಂಗ, ಏಲಕ್ಕಿ, ಹೆಚ್ಚಿದ ಈರುಳ್ಳಿ, ಬಿರಿಯಾನಿ ಎಲೆ, ಸೇರಿಸಿ ಬಾಡಿಸಿ. ನಂತರ ಶುಂಠಿ ಬೆಳ್ಳುಳ್ಳಿ ಪೇಸ್ಟ್, ಉದ್ದಕ್ಕೆ ಸೀಳಿದ ಹಸಿಮೆಣಸಿನ ಕಾಯಿ, ಅರಿಶಿನ, ಧನಿಯಾ ಪುಡಿ, ಖಾರದ ಪುಡಿ, ಉಪ್ಪು, ಕೊತ್ತಂಬರಿ ಸೊಪ್ಪು, ಪುದೀನ ಸೊಪ್ಪು ಸೇರಿಸಿ 2 ನಿಮಿಷ ಬೇಯಿಸಿ. ಇದಕ್ಕೆ ಅನ್ನ ಹಾಕಿ ಬೆರೆಸಿ. ಮೆಲಿಂದ ನಿಂಬೆ ರಸ ಹಿಂಡಿ. ಬೇಯಿಸಿದ ಮೊಟ್ಟೆಯನ್ನು ಕತ್ತರಿಸಿ ಇದಕ್ಕೆ ಸೇರಿಸಿ. ನಿಧಾನವಾಗಿ ಬೆರೆಸಿ. ಕೊತ್ತಂಬರಿ ಸೊಪ್ಪಿಂದ ಅಲಂಕರಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.