ಈಗ ಚಳಿಗಾಲ. ಚಳಿಗಾಲದಲ್ಲಿ ಖಾರದ ಖಾದ್ಯಗಳು ಬಾಯಿಗೂ ದೇಹಕ್ಕೂ ಹಿತವೆನ್ನಿಸುತ್ತವೆ. ಅದರಲ್ಲೂ ಮಾಂಸಾಹಾರಗಳಂತೂ ಚಳಿಗಾಲಕ್ಕೆ ಹೇಳಿ ಮಾಡಿಸಿದಂತಹವು. ಖಾರ, ಖಾರವಾಗಿ ಮಸಾಲೆ ಅರೆದು ಮಾಡಿದ ಖಾದ್ಯಗಳು ಚಳಿಯನ್ನು ಓಡಿಸುತ್ತವೆ. ನಾಲಿಗೆಗೆ ಮತ್ತಷ್ಟು ರುಚಿ ಕೊಡುವ ಮಟನ್ ಬಿರಿಯಾನಿ, ಮಟನ್ ಕರಿ, ಕೋಳಿ ಸಾರಿನ ರೆಸಿಪಿ ನೀಡಿದ್ದಾರೆ ದೀಪಕ್ ಎನ್.

ಮಟನ್ ಬಿರಿಯಾನಿ

ಬೇಕಾಗುವ ಸಾಮಗ್ರಿಗಳು: ಕುರಿ ಮಾಂಸ – ಅರ್ಧ ಕೆ.ಜಿ, ಬಾಸುಮತಿ ಅಕ್ಕಿ – 1/2 ಕೆ.ಜಿ, ಶುಂಠಿ - ಬೆಳ್ಳುಳ್ಳಿ ಪೇಸ್ಟ್ 2 ಚಮಚ, ಕೊತ್ತಂಬರಿಸೊಪ್ಪು, ಪುದಿನಸೊಪ್ಪು, ಹಸಿಮೆಣಸಿನಕಾಯಿ – 15, ಮೊಸರು – 2 ಚಮಚ, ಖಾರದಪುಡಿ – 2 ಚಮಚ, ಕೊತ್ತಂಬರಿಪುಡಿ – 1 ಚಮಚ, ಅರಿಸಿನ ಪುಡಿ – ಸ್ವಲ್ಪ, ಬಿರಿಯಾನಿ ಮಸಾಲೆ – 2 ಚಮಚ, ಪತ್ರೆ – 2 ಎಸಳು, ಗೋಡಂಬಿ – 10, ಕಾಳುಮೆಣಸು – 20, ಏಲಕ್ಕಿ – 2, ಲವಂಗ – 5, ಚಕ್ಕೆ – 2 ಇಂಚು ಉದ್ದದ್ದು, ಪಲಾವ್ ಎಲೆ – 2, ಮೊರಾಠಿ ಮೊಗ್ಗು – 2, ಈರುಳ್ಳಿ – 5, ಟೊಮೆಟೊ – 3, ಎಣ್ಣೆ, ತುಪ್ಪ, ಸಾಸಿವೆ, ಉಪ್ಪು ರುಚಿಗೆ ತಕ್ಕಷ್ಟು.

ತಯಾರಿಸುವ ವಿಧಾನ: ಚೆನ್ನಾಗಿ ತೊಳೆದ ಮಾಂಸಕ್ಕೆ, ನೀರು, ಅರಿಸಿನ ಪುಡಿ, ಸ್ವಲ್ಪ ಉಪ್ಪನ್ನು ಬೆರೆಸಿ ಕುಕರ್‌ನಲ್ಲಿ ಚೆನ್ನಾಗಿ ಬೇಯಿಸಿಕೊಳ್ಳಿ. ಈರುಳ್ಳಿ, ಹಸಿಮೆಣಸಿನಕಾಯಿ, ಟೊಮೆಟೊ, ಕೊತ್ತಂಬರಿ ಮತ್ತು ಪುದಿನ ಕತ್ತರಿಸಿಟ್ಟುಕೊಳ್ಳಿ. ಅಗಲವಾದ ತೆರೆದ ಪಾತ್ರೆಗೆ ಎಣ್ಣೆ ಮತ್ತು ತುಪ್ಪ ಸಮ ಪ್ರಮಾಣದಲ್ಲಿ ಹಾಕಿ ಕಾದ ನಂತರ ಸಾಸಿವೆ ಸಿಡಿಸಿ ಚಕ್ಕೆ, ಲವಂಗ, ಮೆಣಸು, ಏಲಕ್ಕಿ, ಪತ್ರೆ, ಪಲಾವ್ ಎಲೆ, ಮರಾಠಿ ಮೊಗ್ಗು, ಹಸಿಮೆಣಸಿನಕಾಯಿ, ಗೋಡಂಬಿ, ಈರುಳ್ಳಿ ಹಾಕಿ ಕಂದು ಬಣ್ಣ ಬರುವರೆಗೆ ಹುರಿದುಕೊಳ್ಳಿ. ನಂತರ ಬೇಯಿಸಿದ ಮಾಂಸ, ಶುಂಠಿ - ಬೆಳ್ಳುಳ್ಳಿ ಪೇಸ್ಟ್, ಉಪ್ಪು, ಬಿರಿಯಾನಿ ಮಸಾಲೆ, ಖಾರದ ಪುಡಿ, ಕೊತ್ತಂಬರಿ ಪುಡಿ, ಅರಿಸಿನ ಪುಡಿ, ರುಬ್ಬಿದ ಕೊತ್ತಂಬರಿ ಮತ್ತು ಪುದಿನ, 2 ಕಪ್ ಮೊಸರು ಹಾಕಿ ಹಸಿ ವಾಸನೆ ಹೋಗುವತನಕ ಹುರಿದುಕೊಳ್ಳಿ. ನಂತರ ಟೊಮೆಟೊ ಹಾಕಿ ಮತ್ತೆ ಹುರಿಯಿರಿ. ಎಣ್ಣೆ ಬಿಡುವವರೆಗೂ ಕುದಿಸಿ. ಅಗತ್ಯಕ್ಕೆ ತಕ್ಕಷ್ಟು ಮಾಂಸ ಬೇಯಿಸಿದ ನೀರನೇ ಬಳಸಿಕೊಳ್ಳಿ. ಅಕ್ಕಿಯನ್ನು ಈ ಮಿಶ್ರಣಕ್ಕೆ ಸೇರಿಸಿ ರುಚಿ ನೋಡಿ ಉಪ್ಪು, ಖಾರ ಕಡಿಮೆಯಿದ್ದನ್ನು ಸೇರಿಸಿ. ಅಕ್ಕಿ ಮುಕ್ಕಾಲು ಭಾಗ ಬೆಂದಾಗ (ನೀರು ಕಡಿಮೆಯಾದಾಗ) ಕತ್ತರಿಸಿದ ಕೊತ್ತಂಬರಿ ಮತ್ತು ಪುದಿನವನ್ನು ಉದುರಿಸಿ ಮುಚ್ಚಳ ಮುಚ್ಚಿ ಕುಕರ್ ಅನ್ನು ಬೇಯಲು ಇಡಿ. 15ರಿಂದ 20 ನಿಮಿಷದ ನಂತರ ಮುಚ್ಚಳ ತೆಗೆದು ಚೆನ್ನಾಗಿ ಮಿಶ್ರಣ ಮಾಡಿ.

ಮಟನ್ ಕರಿ

ಬೇಕಾಗುವ ಸಾಮಗ್ರಿಗಳು: ಈರುಳ್ಳಿ – 2, ಟೊಮೆಟೊ – 2, ಶುಂಠಿ–ಬೆಳ್ಳುಳ್ಳಿ ಪೇಸ್ಟ್ – 3 ಚಮಚ, ಗರಂಮಸಾಲೆ – 2 ಚಮಚ, ಕೊತ್ತಂಬರಿ ಪುಡಿ – 2 ಚಮಚ, ಜೀರಿಗೆ ಪುಡಿ – 2 ಚಮಚ, ಅರಿಸಿನ – ಅರ್ಧ ಚಮಚ, ಖಾರದಪುಡಿ – ಅರ್ಧ ಚಮಚ, ಕುರಿ ಮಾಂಸ – ಅರ್ಧ ಕೆ.ಜಿ, ಉಪ್ಪು – ರುಚಿಗೆ, ಎಣ್ಣೆ– ಸ್ವಲ್ಪ, ಕೊತ್ತಂಬರಿ ಸೊಪ್ಪು.

ತಯಾರಿಸುವ ವಿಧಾನ: ಕುಕರ್‌ನಲ್ಲಿ 1 ಕೆ.ಜಿ ಮಟನ್, 2 ಕಪ್ ನೀರು ಅದಕ್ಕೆ ಸ್ವಲ್ಪ ಉಪ್ಪು ಮತ್ತು ಅರಿಸಿನ ಪುಡಿ ಹಾಕಿ ಬೇಯಿಸಿ ಇಟ್ಟುಕೊಳ್ಳಿ. ಪಕ್ಕದಲ್ಲಿ ಮತ್ತೊಂದು ಪಾತ್ರೆಯಲ್ಲಿ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ಅದಕ್ಕೆ ಈರುಳ್ಳಿ ಹಾಕಿ ಬಣ್ಣ ಬದಲಾಗುವವರೆಗೂ ಹುರಿಯಿರಿ. ನಂತರ ಟೊಮೆಟೊ, ಶುಂಠಿ–ಬೆಳ್ಳುಳ್ಳಿ ಪೇಸ್ಟ್ ಸೇರಿಸಿ ಬೆರೆಸಿ ಹುರಿದುಕೊಳ್ಳಿ. ಇದಕ್ಕೆ ಯಾವುದೇ ರೀತಿಯ ಮಸಾಲೆ ರುಬ್ಬುವ ಅಗತ್ಯ ಇರುವುದಿಲ್ಲ. ಅದಕ್ಕೆ ಅರ್ಧ ಚಮಚ ಅರಿಸಿನ ಪುಡಿ, 1 ಚಮಚ ದನಿಯಾ ಪುಡಿ, 2 ಚಮಚ ಕಾರದ ಪುಡಿ, ಅರ್ಧ ಚಮಚ ಗರಂಮಸಾಲೆ, ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಎಣ್ಣೆ ಬಿಡುವವರೆಗೂ ಕುದಿಸಿ. ಕುರಿ ಮಾಂಸವನ್ನು ಈ ಮಿಶ್ರಣಕ್ಕೆ ಸೇರಿಸಿ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಮಸಾಲೆ ಹೋಳುಗಳಿಗೆ ಹಿಡಿಯುವವರೆಗೆ ಕೈಯಾಡಿಸಿ. ನಂತರ ಒಂದು ಕಪ್ ನೀರು ಹಾಕಿ ಮತ್ತೆ ಎಲ್ಲವನ್ನೂ ಮಿಶ್ರಣ ಮಾಡಿ ಸಣ್ಣ ಉರಿಯಲ್ಲಿ ಕುರಿ ಮಾಂಸ ಬೇಯುವವರೆಗೆ ಬೇಯಿಸಿ. ಚೆನ್ನಾಗಿ ಕುದಿದು, ಮಾಂಸ ಬೆಂದು ಮಂದ ಆಗುವವರೆಗೂ ಕುದಿಸಿ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಕೊತ್ತಂಬರಿ ಸೊಪ್ಪನ್ನು ಉದುರಿಸಿ.

ಚಪ್ಪಾತಿ, ದೋಸೆ, ಮುದ್ದೆ, ಅನ್ನದ ಜೊತೆಗೆ ಗ್ರೇವಿ ಬೆರೆಸಿಕೊಳ್ಳಬೇಕಾದರೆ ಮಾತ್ರ 2 ಕಪ್ ಮಟನ್ ಬೇಯಿಸಿದ ನೀರನ್ನು ಹಾಕಿಕೊಂಡು ಕುದಿಸಬೇಕು. ತಳ ಹಿಡಿಯದಂತೆ ಕೈಯಾಡಿಸುತ್ತಾ ಇರಬೇಕು.

ಕೋಳಿ ಸಾರು

ಸಾಮಗ್ರಿ: ಚಿಕನ್ 1 ಕೆ.ಜಿ, ಶುಂಠಿ 2 ಇಂಚು ಉದ್ದದ್ದು, ಬೆಳ್ಳುಳ್ಳಿ 2 ಉಂಡೆ, ಕೊತ್ತಂಬರಿ ಸ್ವಲ್ಪ, ಪುದೀನ ಸೊಪ್ಪು ಸ್ವಲ್ಪ, ದನಿಯಾಪುಡಿ 2 -ಚಮಚ, ಖಾರದಪುಡಿ 2 -ಚಮಚ, ಅರಿಶಿನ ಪುಡಿ ಸ್ವಲ್ಪ, ಪೆಪ್ಪರ್ (ಕಾಳುಮೆಣಸು) 5, ಲವಂಗ 3, ಚಕ್ಕೆ 1 ಇಂಚು ಉದ್ದದ್ದು, ಈರುಳ್ಳಿ 2, ಟೊಮೆಟೊ 1, ಕಾಯಿ ಅರ್ಧ ಹೋಳು, ಸಾಸಿವೆ, ಎಣ್ಣೆ, ತುಪ್ಪ, ರುಚಿಗೆ ತಕ್ಕಷ್ಟು ಉಪ್ಪು.

ತಯಾರಿಸುವ ವಿಧಾನ: ಈರುಳ್ಳಿ, ಟೊಮೆಟೊ ಕೊತ್ತಂಬರಿ, ಪುದೀನ, ಅರಿಶಿನ ಪುಡಿ, ಪೆಪ್ಪರ್, ಚಕ್ಕೆ- ಲವಂಗ ಶುಂಠಿ, ಬೆಳ್ಳುಳ್ಳಿ, ದನಿಯಾಪುಡಿ, ಖಾರದಪುಡಿಗೆ ನೀರು ಹಾಕಿ ರುಬ್ಬಿಟ್ಟುಕೊಳ್ಳಿ. ಕುಕ್ಕರ್‌ಗೆ ಎಣ್ಣೆ ಹಾಕಿ ಕಾದ ನಂತರ ಸಾಸಿವೆ ಸಿಡಸಿ ನಂತರ ತೊಳೆದ ಚಿಕನ್ ಹಾಕಿ ಸ್ವಲ್ಪ ಫ್ರೈ ಮಾಡಿ. ನಂತರ ರುಬ್ಬಿದ ಖಾರದ ಮಿಶ್ರಣವನ್ನು ಹಾಕಿ, ಸ್ವಲ್ಪ ಪ್ರಮಾಣದಲ್ಲಿ ನೀರು ಹಾಕಿ ಕುಕ್ಕರ್ ಮುಚ್ಚಳ ಮುಚ್ಚಿ ಮೂರು ವಿಷಲ್ ಹಾಕಿಸಿ, ಮುಚ್ಚಳ ತೆಗೆದು ಮಸಾಲೆ ಹಾಕಿ ಚೆನ್ನಾಗಿ ಬೇಯಿಸಿ, ಬೆಂದ ನಂತರ ಬೇಕೆಂದರೆ ಕೊತ್ತಂಬರಿ ಉದುರಿಸಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.