ಸಿಹಿ ಎಂದಾಕ್ಷಣ ಸಾಮಾನ್ಯವಾಗಿ ಹೋಳಿಗೆ, ಜಾಮೂನು, ಕೇಸರಿಬಾತ್, ಶ್ಯಾವಿಗೆ ಪಾಯಸದಂತಹ ಖಾದ್ಯಗಳು ಹೆಚ್ಚಾಗಿ ನೆನಪಿಗೆ ಬರುತ್ತವೆ. ಆದರೆ, ಕೆಲವೇ ಸಾಮಗ್ರಿ ಬಳಸಿ, ಕಡಿಮೆ ಅವಧಿಯಲ್ಲಿ ಸುಲಭವಾಗಿ ತಯಾರಿಸುವ ವಿಶೇಷ ಸಿಹಿ ತಿನಿಸುಗಳೂ ಇವೆ. ಅಂಥ ಖಾದ್ಯಗಳ ರೆಸಿಪಿಗಳನ್ನು ವನಿತಾ ಜೈನ್ ಇಲ್ಲಿ ಪರಿಚಯಿಸಿದ್ದಾರೆ.

ಗೇವರ್
ಬೇಕಾಗುವ ಸಾಮಗ್ರಿಗಳು: ಮೈದಾ ಹಿಟ್ಟು- 1 ಕಪ್, ತುಪ್ಪ - 2 ಚಮಚ, ಐಸ್ ಕ್ಯೂಬ್- 3, ಹಾಲು- 1 ಸಣ್ಣ ಲೋಟ, ಚಿಟಿಕೆ ಸೋಡ, ಅಡುಗೆ ಎಣ್ಣೆ – ಅರ್ಧ ಲೀಟರ್, ಸಕ್ಕರೆ - 1ಕಪ್.

ಮಾಡುವ ವಿಧಾನ: ಮೊದಲ ಹಂತದಲ್ಲಿ ಒಂದು ಕಪ್ ಮೈದಾ ಹಿಟ್ಟು, 2 ಚಮಚ ತುಪ್ಪ ಮತ್ತು 3 ಐಸ್ ಕ್ಯೂಬ್ ತೆಗೆದುಕೊಳ್ಳಿ. ಈ ಮೂರನ್ನು ಸೇರಿಸಿ ಹಿಟ್ಟು ಗಂಟು ಬಾರದ ರೀತಿಯಲ್ಲಿ ಚೆನ್ನಾಗಿ ನುಣ್ಣಗೆ ಕೈಯಲ್ಲಿ ಕಲೆಸಬೇಕು. ನಂತರ ಒಂದು ಸಣ್ಣ ಲೋಟ ಹಾಲನ್ನು ಸೇರಿಸಿ ಪುನಃ ನುಣ್ಣಗೆ ಮಾಡಿಕೊಳ್ಳಬೇಕು. ಈ ಮಿಶ್ರಣ ದೋಸೆ ಹಿಟ್ಟಿನ ಹದಕ್ಕಿಂತ ತೆಳ್ಳಗೆ ಇರಬೇಕು. ಎರಡನೇ ಹಂತದಲ್ಲಿ ಒಂದು ಲೋಟ ನೀರು, ಒಂದು ಕಪ್ ಸಕ್ಕರೆ ಸೇರಿಸಿ ಒಂದು ಎಳೆ ಬರುವಷ್ಟರ ಮಟ್ಟಿಗೆ ಕುದಿಸಿ ಸಕ್ಕರೆ ಪಾಕ ತಯಾರು ಮಾಡಬೇಕು. ನಂತರ ತಳ ಅಗಲ ಇರುವ ಬಾಣಲೆಯನ್ನು ತೆಗೆದುಕೊಂಡು ಅರ್ಧ ಲೀಟರ್ ಎಣ್ಣೆಯನ್ನು ಹಾಕಿ ಬಿಸಿ ಮಾಡಿ.ಎಣ್ಣೆ ಬಿಸಿಯಾದ ನಂತರ, ಅದಕ್ಕೆ ಕಲಸಿದ ಮೈದಾಹಿಟ್ಟಿನ ಮಿಶ್ರಣವನ್ನು ಒಂದು ಸಣ್ಣ ಲೋಟದಲ್ಲಿ ಹಾಕಿಕೊಂಡು ನಿಧಾನವಾಗಿ ವೃತ್ತಾಕಾರದಲ್ಲಿ ಹಾಕಬೇಕು.

ಅದು ಸ್ವಲ್ಪ ಕಂದು ಬಣ್ಣಕ್ಕೆ ಬಂದ ನಂತರ ತೆಗೆದು ಒಂದು ಪಾತ್ರೆಗೆ ಹಾಕಬೇಕು. ನಂತರ ಅದು ತಣ್ಣಗಾದ ಮೇಲೆ ವೃತ್ತಕಾರದಲ್ಲಿ ಹಲವು ಪದರಗಳಲ್ಲಿರುವ ಸಿಹಿಯ ಮೇಲೆ, ಈ ಮೊದಲೇ ತಯಾರಿಸಿಕೊಂಡಿದ್ದ ಸಕ್ಕರೆ ಪಾಕವನ್ನು ಹಾಕಬೇಕು. ಒಂದು ಗಂಟೆ ನೆನೆಯಲು ಬಿಡಬೇಕು. ಕೊನೆಗೆ ಅಲಂಕಾರಕ್ಕೆ ಬೇಕಾದಲ್ಲಿ ಬಾದಾಮಿ, ಪಿಸ್ತಾ ಚೂರುಗಳನ್ನು ಬಳಸಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.