ಸಂಜೆಯ ಕಾಫಿಯೊಂದಿಗೆ ಮನೆಯಲ್ಲೇ ತಯಾರಿಸಿ ಸವಿಯಿರಿ ಸ್ನ್ಯಾಕ್ಸ್ ರೆಸಿಪಿ

ಆಲೂ ಬಾಲ್ಸ್

ಬೇಕಾಗುವ ಸಾಮಗ್ರಿಗಳು: ಆಲೂಗೆಡ್ಡೆ 4, ಈರುಳ್ಳಿ 1 ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ, ಹಸಿಮೆಣಸಿನಕಾಯಿ 2 ಚಿಕ್ಕದಾಗಿ ಹೆಚ್ಚಿಟ್ಟುಕೊಳ್ಳಿ, ಶುಂಠಿಬೆಳ್ಳುಳ್ಳಿ ಪೇಸ್ಟ್ 1 ಟೀ ಚಮಚ, ಚಿಲ್ಲಿ ಪ್ಲಾಕ್ಸ್ 1 ಟೇಬಲ್ ಚಮಚ, ಮಿಕ್ಸೆಡ್ ಹರ್ಬ್ 1/2 ಟೀ ಚಮಚ, ಗರಂಮಸಾಲೆ 1/2 ಟೀ ಚಮಚ, ಜೀರಿಗೆಪುಡಿ 1 ಟೀ ಚಮಚ, ಧನಿಯಾಪುಡಿ 1 ಟೀ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಬ್ರೆಡ್ ಕ್ರಮ್ಬ್ಸ್ 1/2 ಕಪ್, ಕೊತ್ತಂಬರಿ ಸೊಪ್ಪು 2 ಟೇಬಲ್ ಚಮಚ.

ಪೇಸ್ಟ್ ತಯಾರಿಸಿಲು: ಕಾರ್ನ್ ಫ್ಲೋರ್ 2 ಟೇಬಲ್ ಚಮಚ, ಮೈದಾಹಿಟ್ಟು 2 ಟೇಬಲ್ ಚಮಚ, 1 ಟೇಬಲ್ ಚಮಚ ಚಿಲ್ಲಿ ಪ್ಲಾಕ್ಸ್, 1/4 ಟೀ ಚಮಚ ಉಪ್ಪು, ಬ್ರೆಡ್ ಕ್ರಮ್ಬ್ಸ್ ಸ್ವಲ್ಪ, ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ಆಲೂಗೆಡ್ಡೆಯನ್ನು ಬೇಯಿಸಿ ನುಣ್ಣಗೆ ಪುಡಿ ಮಾಡಿಕೊಂಡು ಬಟ್ಟಲಿಗೆ ಹಾಕಿ. ಜೊತೆಗೆ ಮೇಲೆ ತಿಳಿಸಿರುವ ಎಲ್ಲಾ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಈ ಮಿಶ್ರಣದಿಂದ ಚಿಕ್ಕ ಚಿಕ್ಕ ಉಂಡೆಗಳನ್ನು ತಯಾರಿಸಿಕೊಳ್ಳಿ. ಒಂದು ಚಿಕ್ಕ ಬಟ್ಟಲಿಗೆ ಕಾರ್ನ್ ಫ್ಲೋರ್, ಮೈದಾ ಹಿಟ್ಟು ಮತ್ತು ಚಿಲ್ಲಿಪ್ಲಾಕ್ಸ್ ಮತ್ತು ಉಪ್ಪನ್ನು ಹಾಕಿ ನೀರನ್ನು ಸೇರಿಸಿ ದೋಸೆ ಹಿಟ್ಟಿಗಿಂತ ಸ್ವಲ್ಪ ತಳ್ಳಗೆ ಕಲಸಿಕೊಳ್ಳಿ. ತಯಾರಿಸಿಕೊಂಡ ಉಂಡೆಗಳನ್ನು ಹಿಟ್ಟಿನಲ್ಲಿ ಅದ್ದಿ ಬಳಿಕ ಬ್ರೆಡ್ ಕ್ರಮ್ಬ್ಸ್ ನಲ್ಲಿ ಉರುಳಿಸಿ. ಎಲ್ಲವನ್ನೂ ಹಾಗೆ ಮಾಡಿಕೊಂಡು ತಟ್ಟೆಯಲ್ಲಿಟ್ಟುಕೊಳ್ಳಿ. ನಂತರ ಎಣ್ಣೆಯನ್ನು ಬಿಸಿ ಮಾಡಿಕೊಂಡು ತಯಾರಿಸಿದ ಆಲೂ ಬಾಲ್ಸ್ ಹಾಕಿ. ಎರಡೂ ಬದಿ ಕೆಂಬಣ್ಣ ಬಂದಾಗ ಎಣ್ಣೆಯಿಂದ ತೆಗೆಯಿರಿ.

ವೆಜಿಟೇಬಲ್ ಸ್ಯಾಂಡ್ವಿಚ್

ಬೇಕಾಗುವ ಸಾಮಗ್ರಿಗಳು: ಆಲೂಗೆಡ್ಡೆ 2, ಚಿಕ್ಕದಾಗಿ ಹೆಚ್ಚಿದ ಈರುಳ್ಳಿ 1, ಬೇಯಿಸಿದ ಬಟಾಣಿ 1/2 ಕಪ್, 1 ಕ್ಯಾರೆಟ್ ತುರಿ, ಚಿಕ್ಕದಾಗಿ ಕತ್ತರಿಸಿದ ಹಸಿಮೆಣಸಿನಕಾಯಿ 2, ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿಸೊಪ್ಪು 2 ಟೇಬಲ್ ಚಮಚ, ಅಚ್ಚಖಾರದಪುಡಿ 1/2 ಟೀ ಚಮಚ, ಅಮ್ಚೂರ್ ಪುಡಿ 1/2 ಟೀ ಚಮಚ, ಚಾಟ್ ಮಸಾಲೆ 1/2 ಟೀ ಚಮಚ, ಕಾಳುಮೆಣಸಿನಪುಡಿ 1/2 ಟೀ ಚಮಚ, ಉಪ್ಪು 1/2 ಟೀ ಚಮಚ, ಬೇಯಿಸಿದ ಕಾರ್ನ್ 1/2 ಕಪ್, ಬ್ಲಾಕ್ ಸಾಲ್ಟ್ 1/2 ಟೀ ಚಮಚ.

ಬ್ರೆಡ್ ಸ್ಲೈಸ್, ಟೊಮೆಟೊ ಕೆಚಪ್, ಖಾರ ಚಟ್ನಿ, ಸ್ವಲ್ಪ ವೃತ್ತಾಕಾರವಾಗಿ ಕತ್ತರಿಸಿದ ಟೊಮೆಟೊ, ಚೀಸ್ ಸ್ಲೈಸ್, ಬೇಯಿಸಲು ಬೆಣ್ಣೆ. ಚಿಲ್ಲಿ ಪ್ಲೆಕ್ಸ್ ಸ್ವಲ್ಪ.

ತಯಾರಿಸುವ ವಿಧಾನ: ಆಲೂಗೆಡ್ಡೆಯನ್ನು ಪುಡಿ ಮಾಡಿಕೊಂಡು ಮೇಲೆ ತಿಳಿಸಿರುವ ಉಳಿದ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಒಂದು ಬ್ರೆಡ್ ಸ್ಲೈಸ್ ಮೇಲೆ ಟೊಮೆಟೊ ಕಚಪ್ ಹರಡಿ, ಮತ್ತೊಂದು ಬ್ರೇಡ್ ಸ್ಲೈಸ್ ಮೇಲೆ ಖಾರ ಚಟ್ನಿ ಹರಡಿ. ನಂತರ ತಯಾರಿಸಿದ ಆಲೂಗೆಡ್ಡೆಯ ಮಸಾಲೆ ಮಿಶ್ರಣವನ್ನು ಸ್ವಲ್ಪ ಅದರ ಮೇಲೆ ಹರಡಿ. ಬಳಿಕ ಕತ್ತರಿಸಿದ ಎರಡು ಟೊಮೆಟೊ ಬಿಲ್ಲೆ ಮತ್ತು ಅದರ ಮೇಲೆ ಚಿಲ್ಲಿ ಪ್ಲೆಕ್ಸ್ ಸ್ವಲ್ಪ ಹಾಕಿ. ನಂತರ ಚೀಸ್ ಸ್ಲೈಸ್ ಅದರ ಮೇಲಿಟ್ಟು ಕಚಪ್ ಹಚ್ಚಿದ ಬ್ರೇಡ್ ಸ್ಲೈಸ್ ಅದರ ಮೇಲಿಡಿ. ತವವನ್ನು ಬಿಸಿ ಮಾಡಿಕೊಂಡು ಬೆಣ್ಣೆಯನ್ನು ಹಾಕಿ. ತಯಾರಿಸಿದ ಸ್ಯಾಂಡ್ವಿಚ್ನ್ನು ಅರ್ಲಲಿಟ್ಟು ಅದರ ಮೇಲ್ಬಾಗಕ್ಕೆ ಬೆಣ್ಣೆ ಹಾಕಿ ಮುಚ್ಚಳ ಮುಚ್ಚಿ. ಎರಡೂ ಬದಿಯೂ ಕೆಂಬಣ್ಣ ಬರುವರೆಗೆ ಬೇಯಿಸಿ.

ಪನ್ನೀರ್ ಕಟ್ಲೆಟ್

ಬೇಕಾಗುವ ಸಾಮಗ್ರಿಗಳು: ಪನ್ನೀರ್ 400ಗ್ರಾಂ, ಈರುಳ್ಳಿ ಚಿಕ್ಕದಾಗಿ ಹೆಚ್ಚಿದ್ದು 1, ತುರಿದ ಕ್ಯಾರೆಟ್ 1, ಚಿಕ್ಕದಾಗಿ ಹೆಚ್ಚಿದ ಎಲೆಕೋಸು 1 ಕಪ್, ಚಿಕ್ಕದಾಗಿ ಹೆಚ್ಚಿದ ಕ್ಯಾಪ್ಸಿಕಂ 1/2, ಬೇಯಿಸಿ ನುಣ್ಣಗೆ ಪುಡಿ ಮಾಡಿದ ಆಲೂಗೆಡ್ಡೆ 2, ಚಿಕ್ಕದಾಗಿ ಕತ್ತರಿಸಿ ಹಸಿಮೆಣಸಿನಕಾಯಿ 2, ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿ ಸೊಪ್ಪು 3 ರಿಂದ 4 ಟೇಬಲ್ ಚಮಚ, ಶುಂಠಿಬೆಳ್ಳುಳ್ಳಿ ಪೇಸ್ಟ್ 1 ಟೀ ಚಮಚ, ಚಾಟ್ ಮಸಾಲ 1 ಟೀ ಚಮಚ, ಗರಂಮಸಾಲ 1/2 ಟೀ ಚಮಚ, ಜೀರಿಗೆಪುಡಿ 1/2 ಟೀ ಚಮಚ, ಅಚ್ಚಖಾರದಪುಡಿ 1 ಟೀ ಚಮಚ, ಅಮ್ ಚೂರ್ ಪುಡಿ 1/2 ಟೀ ಚಮಚ, ರುಚಿಗೆ ತಕ್ಕಷ್ಟು ಉಪ್ಪು, ಅರಶಿನ 1/4 ಟೀ ಚಮಚ.

ಪೇಸ್ಟ್ ತಯಾರಿಸಿಕೊಳ್ಳಲು: ಕಾರ್ನ್ ಫೋರ್ 4 ಟೇಬಲ್ ಚಮಚ, 1/2 ಟೀ ಚಮಚ ಚಿಲ್ಲಿ ಫ್ಲೆಕ್ಸ್, ಬ್ರೆಡ್ ಕ್ರಮ್ಸ್ ಸ್ವಲ್ಪ, ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ಪನ್ನೀರ್ಅನ್ನು ಪುಡಿ ಮಾಡಿಕೊಂಡು ಅದರೊಂದಿಗೆ ತಿಳಿಸಿರುವ ಎಲ್ಲಾ ಪದಾರ್ಥಗಳನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ತಯಾರಿಸಿಕೊಂಡ ಮಿಶ್ರಣದಿಂದ ದೊಡ್ಡ ದೊಡ್ಡ ಉಂಡೆಗಳನ್ನು ಮಾಡಿಕೊಂಡು ಅದನ್ನು ಸಮತಟ್ಟಾಗಿ ತಟ್ಟಿಕೊಳ್ಳಿ. ಒಂದು ಚಿಕ್ಕ ಬಟ್ಟಲಿಗೆ ಕಾರ್ನ್ ಫ್ಲೋರ್, ಚಿಲ್ಲಿ ಪ್ಲೆಕ್ಸ್ ಮತ್ತು ಸ್ವಲ್ಪ ನೀರನ್ನು ಹಾಕಿ ದೋಸೆ ಹಿಟ್ಟಿನ ಹದದಲ್ಲಿ ಕಲಸಿಕೊಳ್ಳಿ. ತಯಾರಿಸಿದ ಪನ್ನೀರ್ ಕಟ್ಲೆಟ್ಅನ್ನು ಹಿಟ್ಟಿನಲ್ಲಿ ಅದ್ದಿ ನಂತರ ಬ್ರೆಡ್ ಕ್ರಮ್ಸ್ ಅದರ ಮೇಲೆ ಮತ್ತು ಸುತ್ತಲೂ ಹರಡಿ. ಎಲ್ಲವನ್ನು ಹೀಗೆ ಮಾಡಿ ತಟ್ಟೆಯಲ್ಲಿಟ್ಟುಕೊಳ್ಳಿ. ನಂತರ ಎಣ್ಣೆಯನ್ನು ಬಿಸಿ ಮಾಡಿಕೊಂಡು ತಯಾರಿಸಿಕೊಂಡ ಕಟ್ಲೆಟ್ನ್ನು ಹಾಕಿ. ಮಧ್ಯಮ ಉರಿಯಲ್ಲಿ ಎರಡೂ ಬದಿಯನ್ನು ಕೆಂಬಣ್ಣಕ್ಕೆ ಬರುವರೆಗೆ ಬೇಯಿಸಿ ಎಣ್ಣೆಯಿಂದ ತೆಗೆಯಿರಿ.

ಬಾಳೆಕಾಯಿ ಬಜ್ಜಿ

ಬೇಕಾಗುವ ಸಾಮಗ್ರಿಗಳು: ಬಾಳೆಕಾಯಿ 250 ಗ್ರಾಂ, ಅಜವಾನ 1/2 ಟೀ ಚಮಚ, ಜೀರಿಗೆ 1/2 ಟೀ ಚಮಚ, ಧನಿಯಾ 1 ಟೀ ಚಮಚ, ಕಡಲೆಹಿಟ್ಟು 1 ಕಪ್, ರುಚಿಗೆ ತಕ್ಕಷ್ಟು ಉಪ್ಪು, ಅರಶಿನ 1/4 ಟೀ ಚಮಚ, ಅಚ್ಚಖಾರದ ಪುಡಿ 1/4 ಟೀ ಚಮಚ, ನೀರು 1/2 ಕಪ್, ಕರಿಯಲು ಎಣ್ಣೆ.

ತಯಾರಿಸುವ ವಿಧಾನ: ಬಾಳೆಕಾಯಿಯ ಸಿಪ್ಪೆಯನ್ನು ತೆಗೆದು ಒಂದೇ ರೀತಿಯಲ್ಲಿ ತೆಳುವಾಗಿ ಕತ್ತರಿಸಿ ಐದಾರು ನಿಮಿಷಗಳ ಕಾಲ ನೀರಿನಲ್ಲಿ ನೆನೆಸಿಡಿ. ನಂತರ ಬಾಣಲೆಯಲ್ಲಿ ಅಜವಾನ, ಜೀರಿಗೆ ಮತ್ತು ಧನಿಯಾವನ್ನು ಕೆಂಬಣ್ಣ ಬರುವರೆಗೆ ಹುರಿದು ಕೊಳ್ಳಿ. ಈ ಹುರಿದ ಪದಾರ್ಥಗಳನ್ನು ತರಿ ತರಿಯಾಗಿ ಕುಟ್ಟಿ ಪುಡಿಮಾಡಿ ಕೊಳ್ಳಿ. ಒಂದು ಬೌಲಿನಲ್ಲಿ ಕಡಲೆಹಿಟ್ಟು ಹಾಕಿ. ಜೊತೆಗೆ ಅರಶಿನ, ಅಚ್ಚಖಾರದ ಪುಡಿ, ಉಪ್ಪು ಮತ್ತು ತಯಾರಿಸಿದ ಮಸಾಲೆ ಪುಡಿಯನ್ನು ಸೇರಿಸಿ ಮಿಶ್ರಣ ಮಾಡಿ. ಈ ಮಿಶ್ರಣಕ್ಕೆ ನೀರನ್ನು ಸೇರಿಸಿ ಕಲಸಿ ಕೊಳ್ಳಿ. ನೀರಿನಲ್ಲಿ ನೆನೆಸಿ ಕೊಂಡ ಬಾಳೆಕಾಯಿಯನ್ನು ನೀರಿನಿಂದ ತೆಗೆದು ಒಂದು ತಟ್ಟೆಯಲ್ಲಿ ಇಟ್ಟುಕೊಳ್ಳಿ. ಈಗ ಕತ್ತರಿಸಿದ ಬಾಳೆಕಾಯಿಯನ್ನು ಹಿಟ್ಟಿನಲ್ಲಿ ಅದ್ದಿ ಬಿಸಿ ಎಣ್ಣೆಗೆ ಬಿಡಿ. ಎಣ್ಣೆಯಲ್ಲಿ ಎರಡೂ ಬದಿಯು ಕೆಂಬಣ್ಣ ಬರುವರೆಗೆ ಮಧ್ಯಮ ಉರಿಯಲ್ಲಿ ಬೇಯಿಸಿ. ಬೆಂದ ಬಾಳೆಕಾಯಿ ಬಜ್ಜಿಯನ್ನು ಎಣ್ಣೆಯಿಂದ ತೆಗೆದು ಸರ್ವ್ ಮಾಡಿ. ಬಾಳೆಕಾಯಿ ಬಜ್ಜಿಯೊಂದಿಗೆ ತೆಂಗಿನಕಾಯಿ ಚಟ್ನಿ ಅಥಾವ ಟೊಮೆಟೊ ಕೆಚಪ್ ಹಾಕಿಕೊಂಡು ತಿನ್ನಬಹುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.